ಅಮೂಲ್‌ಗೆ ಜಗತ್ತಿನ ಬಲಿಷ್ಠ ಫುಡ್ ಮತ್ತು ಡೇರಿ ಬ್ರ್ಯಾಂಡ್ ಕಿರೀಟ..!
ಕ್ಷೀರೋದ್ಯಮದಲ್ಲಿ ಕ್ರಾಂತಿ ಮಾಡಿರುವ ಅಮೂಲ್ ಸಹಕಾರಿ ಸಮಿತಿಯು ಜಾಗತಿಕ ಬಲಿಷ್ಠ ಆಹಾರ ಮತ್ತು ಡೇರಿ ಬ್ರ್ಯಾಂಡ್‌ನ ರ್ಯಾಂಕಿಂಗ್ ಪಡೆದುಕೊಂಡಿದೆ. ಬ್ರಿಟನ್‌ನ ಬ್ರ್ಯಾಂಡ್ ಫೈನಾನ್ಸ್ ನ 2024 ರ ಗ್ಲೋಬಲ್ ಫುಡ್ ಆ್ಯಂಡ್ ಡ್ರಿಂಕ್ಸ್ ವರದಿಯಲ್ಲಿ ಅಮೂಲ್‌ಗೆ ಈ ಸ್ಥಾನ ಪ್ರಾಪ್ತಿಯಾಗಿದ್ದು, ಎಎಎ+ ರೇಟಿಂಗ್ ಪಡೆದುಕೊಂಡಿದೆ.
ಜಗತ್ತಿನ ಮುಂಚೂಣಿಯ ಬ್ರ್ಯಾಂಡ್ ಕನ್ಸಲ್ಟನ್ಸಿ ‘ಬ್ರಾಂಡ್ ಫೈನಾನ್ಸ್’ ತನ್ನ ವರದಿಯಲ್ಲಿ ಅಮೂಲ್ ಒಂದು ಬಲಿಷ್ಠ ಫುಡ್, ಡೇರಿ ಮತ್ತು ನಾನ್ ಆಲ್ಗೊಹಾಲಿಕ್ ಬ್ಯಾಂಡ್‌ನ ಸ್ಥಾನವನ್ನು ನೀಡಿದೆ. ಗುಜರಾತ್ ಮೂಲದ ಅಮೂಲ್ ವಾರ್ಷಿಕ 11 ಬಿಲಿಯನ್ ಲೀಟರ್ ಹಾಲು ಉತ್ಪಾದಿಸುತ್ತಿದ್ದು, ಇದರ ಮೌಲ್ಯ 80 ಸಾವಿರ ಕೋಟಿ ರೂ.ಗಳಾಗಿವೆ. 36 ಲಕ್ಷಕ್ಕೂ ಅಧಿಕ ರೈತರು ಈ ಕ್ಷೀರೋದ್ಯಮದ ಭಾಗವಾಗಿದ್ದಾರೆ.
ಮಾರುಕಟ್ಟೆಯಲ್ಲಿ ದೊಡ್ಡ ಪಾಲು ಹೊಂದಿರುವ ಅಮೂಲ್ :
1946ರಲ್ಲಿ ಗುಜರಾತ್‌ನ 2 ಸಣ್ಣ ಗ್ರಾಮಗಳಿಂದ 247 ಲೀಟರ್ ಹಾಲು ಸಂಗ್ರಹಿಸುವ ಮೂಲಕ ಸ್ಥಳೀಯ ರೈತರು ಅಮೂಲ್ ಸಹಕಾರಿ ಸಮಿತಿಯನ್ನು ಆರಂಭಿಸಿದರು. ಸದ್ಯ ಭಾರತೀಯ ಹಾಲು ಮಾರುಕಟ್ಟೆಯಲ್ಲಿ ಅಮೂಲ್ ಪಾಲುದಾರಿಕೆ 85% ರಷ್ಟಿದೆ. ಹಾಗೆಯೇ ಬೆಣ್ಣೆಯ ಮಾರು ಕಟ್ಟೆಯಲ್ಲಿ 85% ರಷ್ಟು ಮತ್ತು ಪನ್ನೀರು ಮಾರುಕಟ್ಟೆಯಲ್ಲಿ 66 ರಷ್ಟು ಪಾಲುದಾರಿಕೆ ಹೊಂದಿದೆ.