https://pagead2.googlesyndication.com/pagead/js/adsbygoogle.js?client=ca-pub-4722372128437229 ಇಂಜಿನಿಯರಿಂಗ್ ಪದವೀಧರರಾಗಿದ್ದರು, ಕೃಷಿಯಲ್ಲಿ ಯುವ ರೈತನ(Agriculture farming ) -
ಕೃಷಿ

ಇಂಜಿನಿಯರಿಂಗ್ ಪದವೀಧರರಾಗಿದ್ದರು, ಕೃಷಿಯಲ್ಲಿ ಯುವ ರೈತನ(Agriculture farming )

ತಾಲೂಕು ಮಟ್ಟದ ಪ್ರಗತಿಪರ ಯುವ ರೈತ ಪ್ರಶಸ್ತಿ ಪುರಸ್ಕೃತರು ಸಂಜಯ್ ದತ್ತ ರವರು

ಇತ್ತೀಚಿನ ದಿನಗಳಲ್ಲಿ ಕೃಷಿಯಲ್ಲಿ ನಿರಾಸಕ್ತಿ ಹೊಂದಿದ ಯುವಕರು ಹೆಚ್ಚಾಗುತ್ತಿರುವ ದಿನಗಳಲ್ಲಿ ಬೆಂಗಳೂರು ನಗರ ಆನೇಕಲ್ ತಾಲೂಕಿನ ಹಾರಗದ್ದೆ ಸಂಜಯ್ ದತ್ತ ರವರು ಇಂಜಿನಿಯರಿಂಗ್ ಪದವೀಧರರಾಗಿದ್ದರು, ಕೃಷಿ ಮೇಲಿನ ಒಲವಿನಿಂದ ಯಾವುದೇ ಹುದ್ದೆಗು ಸೇರದೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.(Agriculture farming)

ತಮ್ಮ ಒಟ್ಟು 4 ಎಕರೆ 17 ಗುಂಟೆ ಜಮೀನಿನಲ್ಲಿ ಕೃಷಿ ಬೆಳೆಗಳಾದ ರಾಗಿ. ಮುಸುಕಿನ ಜೋಳ. ತೊಗರಿ. ಮತ್ತು ತೋಟಗಾರಿಕೆ ಬೆಳೆಗಳಾದ ತೆಂಗು. ಅಡಿಕೆ. ಮಾವು. ಹಲಸು. ತರಕಾರಿ ಬೆಳೆಗಳಾದ ಹಿರೇಕಾಯಿ ಸೋರೆಕಾಯಿ ಕುಂಬಳಕಾಯಿ ಸೇವಂತಿಗೆ ಚೆಂಡುವು ಮತ್ತು ಡ್ರ್ಯಾಗನ್ ಫ್ರೂಟ್ ಬೆಳೆಯುತ್ತಿದ್ದಾರೆ.

ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಹೆಸರುಘಟ್ಟದ ವಿಜ್ಞಾನಿಗಳಿಂದ ತಾಂತ್ರಿಕ ಸಲಹೆಗಳನ್ನು ಪಡೆದು ಸುಮಾರು 3000 ಡ್ರಾಗನ್ ಹಣ್ಣಿನ ಗಿಡಗಳನ್ನು ಆಧುನಿಕ ಪದ್ಧತಿಗಳಾದ ಹನಿ ನೀರಾವರಿ ಅಳವಡಿಸಿಕೊಂಡಿದರೆ.

ಲಘು ಪೋಷಕಾಂಶಗಳ ಬಳಕೆ ಮತ್ತು ಸಮಗ್ರ ಕೀಟ ಹಾಗೂ ರೋಗ ನಿವಾರಣೆ ಅಳವಡಿಸಿಕೊಂಡು ಬೆಳೆದು ಉತ್ತಮ ಇಳುವರಿ ಪಡೆದು ಅಧಿಕ ಲಾಭ ಗಳಿಸಿದ್ದಾರೆ.

ರಸವರಿಯ ಮುಖಾಂತರ ನೀರಿನಲ್ಲಿಹೈನುಗಾರಿಕೆ ಮತ್ತು ಮೀನು ಸಾಕಾಣಿಕೆ ಬಗ್ಗೆ ಮಾಹಿತಿ ಕರಗುವ ರಸಗೊಬ್ಬರಗಳನ್ನು ಬೆಳೆಗಳಿಗೆ ಕೊಟ್ಟು ಅಧಿಕ ಇಳುವರಿ ಪಡೆದಿರುತ್ತಾರೆ.

ಹೈನುಗಾರಿಕೆ ಮತ್ತು ಮೀನು ಸಾಕಾಣಿಕೆ ಬಗ್ಗೆ ಮಾಹಿತಿ.(Agriculture farming )

ಸಂಜಯ್ ದತ್ತ ರವರು ಅರಣ್ಯ ಮರಗಳಾದ ಹೆಬ್ಬೇವು 10 ತೇಗ 80 ಸಿಲ್ವರ್ 30 ಹಾಗೂ ಮಹಾದಾನಿ 25 ಮರಗಳನ್ನು ತಮ್ಮ ಜಮೀನಿನ ಸುತ್ತ ಬೆಳೆದಿದ್ದಾರೆ.

ಇವರ ನಾಟಿ ಹಸು ನಾಟಿ ಕುರಿ ಮೇಕೆ ಹಾಗೂ ನಾಟಿ ಕೋಳಿಗಳನ್ನು ಸಾಕಣೆ ಮಾಡುತ್ತಿದ್ದಾರೆ.ಇದರ ಮೇವಿಗಾಗಿ ಮುಸುಕಿನ ಜೋಳ ಹಾಗೂ ಮಲ್ಟಿಕಟ್ ಜೋಳವನ್ನು ಬೆಳೆದಿರುತ್ತಾರೆ.

ಜೊತೆಗೆ ಕೃಷಿ ಹೊಂಡದಲ್ಲಿ ಸುಮಾರು 2000 ಜಿಲೇಬಿ ತಳಿಯ ಮೀನುಗಳನ್ನು ಸಾಕಣೆ ಮಾಡಿ ಅಧಿಕ ಆದಾಯ ಗಳಿಸುತ್ತಿದ್ದಾರೆ.

ಅಲ್ಲದೆ ಜೇನು ಕೃಷಿಯನ್ನು ಅಳವಡಿಸಿಕೊಂಡು ಬೆಳೆಗಳಲ್ಲಿ ಪರಾಗಸ್ಪರ್ಶ ಹೆಚ್ಚಿಸಿ ಇಳುವರಿ ಹೆಚ್ಚಿಸಿ ಮನೆ ಬಳಕೆಗೆ ಜೇನುತುಪ್ಪವನ್ನು ಬಳಸುತ್ತಿದ್ದಾರೆ.

ಇದಲ್ಲದೆ ಮಣ್ಣು ಮತ್ತು ನೀರಿನ ಸಂರಕ್ಷಣೆಗೆ ಹೊತ್ತು ನೀಡಿದ್ದು ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಪದ್ಧತಿಗಳನ್ನು ಅಳವಡಿಸಿಕೊಂಡು ನೀರಿನ ಸದ್ಬಳಕೆ ಮಾಡುತ್ತಿದ್ದಾರೆ

ಸಮಗ್ರ ಪೋಷಕಾಂಶಗಳ ನಿರ್ವಹಣೆ (Agriculture farming )

ಸಂಜಯ್ ದತ್ ರವರು ಸಮಗ್ರ ಪೋಷಕಾಂಶಗಳ ನಿರ್ವಹಣೆಯಲ್ಲಿ ಕೊಟ್ಟಿಗೆ ಗೊಬ್ಬರ ಎರೆಹುಳು ಗೊಬ್ಬರ ಜೀವಾಮೃತ ಬೇವಿನ ಹಿಂಡಿ ಹಸಿರೆಲೆ ಗೊಬ್ಬರ ಹಾಗೂ ರಾಸಾಯನಿಕ ಗೊಬ್ಬರಗಳನ್ನು ಬಳಸಿ ಮಣ್ಣಿನ ಆರೋಗ್ಯವನ್ನು ಹೆಚ್ಚಿಸುವಲ್ಲಿ ಶ್ರಮಿಸುತ್ತಿದ್ದಾರೆ.

ಅದರ ಜೊತೆಗೆ ಸಮಗ್ರ ಕೀಟ ಮತ್ತು ರೋಗ ನಿವಾರಣೆಯಲ್ಲಿ ಜೈವಿಕ ಹಾಗೂ ರಾಸಾಯನಿಕ ಪದ್ಧತಿಗಳನ್ನು ಅಳವಡಿಸಿಕೊಂಡಿರುವುದರ ಜೊತೆಗೆ ಕೃಷಿ ಉಪಕರಣಗಳಾದ ಟ್ರ್ಯಾಕ್ಟರ್ ರೋಟಮೀಟರ್ ಪವರ್ ಸ್ಪೇರ್ ಮತ್ತು ಬ್ಯಾಟರಿ ಸ್ಪೇಯರ ಬಳಕೆ ಮಾಡಿಕೊಂಡು ಕೃಷಿ ಖರ್ಚುಗಳನ್ನು ಕಡಿತಗೊಳಿಸಿರುತ್ತಾರೆ.

ಸಂಜಯ್ ದತ್ ರವರು ತಮ್ಮ ನಾಲ್ಕು ಎಕರೆ 17 ಗುಂಟೆ ಜಮೀನಿನಲ್ಲಿ ಅಲ್ಪಾವಧಿಯ ಬೆಳೆಗಳಾದ ರಾಗಿ ಮುಸುಕಿನ ಜೋಳ ತೊಗರಿ ಮತ್ತು ದೀರ್ಘಾವಧಿ ಬೆಳೆಗಳಾದ ತೆಂಗು ಅಡಿಕೆ ಮಾವು ಹೊಲಸು ಬೆಳೆಯುತ್ತಿದ್ದಾರೆ ಜೊತೆಗೆ ತರಕಾರಿ ಬೆಳೆಗಳನ್ನು ಸಹ ಬೆಳೆಯುತ್ತಿದ್ದಾರೆ ಹೀರೇಕಾಯಿ ಸೋರೆಕಾಯಿ ಕುಂಬಳಕಾಯಿ ಸೇವಂತಿಗೆ ಹೂಗಳನ್ನು ಬೆಳೆದು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ.

ಇವರು ಡ್ರಾಗನ್ ಹಣ್ಣಿನ ಕೃಷಿಯ ಬಗ್ಗೆ ಹೆಚ್ಚು ಮಾಹಿತಿ ಪಡೆದುಕೊಂಡು ಅದರ ವ್ಯವಸಾಯದ ಕ್ರಮಗಳು ಬಗ್ಗೆ ಮತ್ತು ಮಾರುಕಟ್ಟೆ ಬಗ್ಗೆ ಅಧ್ಯಯನ ನಡೆಸಿ ತಮ್ಮ ಜಮೀನಿನಲ್ಲಿ 3000 ಡ್ರಾಗನ್ ಹಣ್ಣು ಕೃಷಿಯನ್ನು ಪ್ರಾರಂಭಿಸಿ ಯಶಸ್ವಿಯಾಗಿದ್ದಾರೆ.

ಸಂಜಯ್ ದತ್ ರವರು ಬೆಳೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಪ್ರಾಣಿ ಮತ್ತು ಸಸ್ಯ ಮೂಲದ ಎರೆಹುಳು ಗೊಬ್ಬರ, ಕೊಟ್ಟಿಗೆ ಗೊಬ್ಬರದಂತಹ ಸಾವಯವ ಅಂಶಗಳನ್ನು ನೀಡುವುದರ ಮೂಲಕ ಸುಸ್ಥಿರ ಕೃಷಿಗೆ ಒತ್ತು ನೀಡಿ ಮಣ್ಣಿನ ಪೋಷಕಾಂಶಗಳನ್ನು ಹೆಚ್ಚಿಸಿಕೊಂಡಿದ್ದಾರೆ. ಅಲ್ಲದೆ ಸಕಾಲಿಕ ಸುಧಾರಿತ ಕೃಷಿ ಉಪಕರಣಗಳ ಬಳಕೆಯಿಂದ ಕೃಷಿ ಕಾರ್ಮಿಕರ ಮೇಲಿನ ಅವಲಂಬನೆಯನ್ನು ಕಡಿತಗೊಳಿಸಿ ಕೃಷಿ ಖರ್ಚನ್ನು ಕಡಿಮೆ ಮಾಡಿದ್ದಾರೆ.

ಇವರು ಕೃಷಿ ಇಲಾಖೆ, ಕೃಷಿ ವಿಶ್ವವಿದ್ಯಾನಿಲಯ ಹಾಗೂ ಇತರೆ ಇಲಾಖೆಗಳಿಂದ ವೈಜ್ಞಾನಿಕ ಮಾಹಿತಿಯನ್ನು ಪಡೆದು ಆದಾಯ ಹೆಚ್ಚಿಸಿಕೊಂಡು ಇತರ ರೈತರಿಗೆ ಮಾದರಿಯಾಗಿದ್ದಾರೆ.

ಯುವ ರೈತರು ಈಗ ಕೃಷಿ ಕ್ಷೇತ್ರಕ್ಕೆ ಏಕೆ ಆಕರ್ಷಿತರಾಗಿದ್ದಾರೆ ಎಂಬುದನ್ನು ಎತ್ತಿ ತೋರಿಸುವ ಪ್ರಮುಖ ಅಂಶಗಳು.

ತಂತ್ರಜ್ಞಾನದ ಪ್ರಾಬಲ್ಯ ಮತ್ತು ನಗರ ಹೆಚ್ಚುತ್ತಿರುವ ಜಗತ್ತಿನಲ್ಲಿ, ಅನಿರೀಕ್ಷಿತ ಪ್ರವೃತ್ತಿಯು ವೇಗವನ್ನು ಪಡೆಯುತ್ತಿದೆ: ಇಂದಿನ ಯುವ ಪೀಳಿಗೆಯಲ್ಲಿ ಕೃಷಿಯಲ್ಲಿ ಹೆಚ್ಚುತ್ತಿರುವ ಆಸಕ್ತಿ. ವಯಸ್ಸಾದ ಜನಸಂಖ್ಯೆ ಮತ್ತು ಕ್ಷೀಣಿಸುತ್ತಿರುವ ಉದ್ಯಮದೊಂದಿಗೆ ಕೃಷಿಯನ್ನು ಸಂಯೋಜಿಸುವ ಪ್ರಚಲಿತ ನಿರೂಪಣೆಯನ್ನು ಪರಿಗಣಿಸಿ ಈ ಬದಲಾವಣೆಯು

  • ಆಧುನಿಕ ಕೃಷಿ ಹಿಂದಿನಂತೆ ಇಲ್ಲ. ಅತ್ಯಾಧುನಿಕ ತಂತ್ರಜ್ಞಾನಗಳು ಕೃಷಿಯನ್ನು ಹೈಟೆಕ್ ಉದ್ಯಮವನ್ನಾಗಿ ಪರಿವರ್ತಿಸಿದ್ದು, ತಂತ್ರಜ್ಞಾನ-ಬುದ್ಧಿವಂತ ಯುವ ರೈತರನ್ನು ಆಕರ್ಷಿಸುತ್ತಿದೆ.
  • ಡ್ರೋನ್‌ಗಳು, ನಿಖರವಾದ ಕೃಷಿ, (ಇಂಟರ್ನೆಟ್ ಆಫ್ ಥಿಂಗ್ಸ್), ಮತ್ತು AI ಅಪ್ಲಿಕೇಶನ್‌ಗಳು ಈಗ ಕೃಷಿಯ ಅವಿಭಾಜ್ಯ ಅಂಗಗಳಾಗಿವೆ, ಇದು ಕ್ರಿಯಾತ್ಮಕ ಮತ್ತು ಡೇಟಾ-ಚಾಲಿತ ಉದ್ಯಮಕ್ಕೆ ಯುವ ರೈತರು ಆಕರ್ಷಿತರಾಗಿದ್ದಾರೆ.
  • ಇಂದಿನ ಯುವ ರೈತರು ಹೆಚ್ಚು ಪರಿಸರ ಪ್ರಜ್ಞೆಯನ್ನು ಹೊಂದಿದ್ದಾರೆ ಮತ್ತು ಸುಸ್ಥಿರ ಅಭ್ಯಾಸಗಳ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ. ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಆಹಾರ ಉತ್ಪಾದನೆಗೆ ನೇರವಾಗಿ ಕೊಡುಗೆ ನೀಡಲು ಕೃಷಿಯು ಒಂದು ದಾರಿಯಾಗಿದೆ.
  • ಸಾವಯವ ಕೃಷಿ, ಪರ್ಮಾಕಲ್ಚರ್ ಮತ್ತು ಪುನರ್ ಬಳಕೆ ಮಾಡುವ ಕೃಷಿ ಪದ್ಧತಿಗಳ ಅಳವಡಿಕೆಯು ಗ್ರಹದ ಆರೋಗ್ಯಕ್ಕೆ ಆದ್ಯತೆ ನೀಡುವ ಅನೇಕ ಯುವ ರೈತರ ಆಕರ್ಷಿಸುತ್ತಿದೆ.
  • ಕೃಷಿಯು ಇನ್ನು ಮುಂದೆ ಕೇವಲ ಸಾಂಪ್ರದಾಯಿಕ ಕುಟುಂಬ-ಮಾಲೀಕತ್ವದ ಕಡಿಮೆಯಾಗುತ್ತದೆ. ಯುವ ರೈತರು ಕೃಷಿ ಕ್ಷೇತ್ರದ ಉದ್ಯೋಗವನ್ನು ಅವಕಾಶಗಳನ್ನು ಗುರುತಿಸುತ್ತಾರೆ.
  • ಗ್ರಾಹಕರು ಮತ್ತು ರೈತರು ಮಾರುಕಟ್ಟೆಗಳು ಮತ್ತು ಯುವ ರೈತರು ನೇರಗ್ರಾಹಕರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಯಶಸ್ವಿ ಯಾಗಿದೆ.
  • ಯುವ ರೈತರು ತಮ್ಮ ಸಮುದಾಯಗಳಿಗೆ ತಾಜಾ, ಸ್ಥಳೀಯವಾಗಿ ಮೂಲದ ಉತ್ಪನ್ನಗಳನ್ನು ಒದಗಿಸುವ ಮೂಲಕ ಈ ಸ್ಥಾನವನ್ನು ತುಂಬುವ ಸಾಮರ್ಥ್ಯವನ್ನು ಗುರುತಿಸುತ್ತಿದ್ದಾರೆ.
  • ಕರ್ನಾಟಕ ಸರ್ಕಾರ ಯುವ ರೈತರನ್ನು ಕೃಷಿಗೆ ಪ್ರವೇಶಿಸಲು ಪ್ರೋತ್ಸಾಹಿಸುವ ಮಹತ್ವವನ್ನು ನೀಡುತ್ತಿದೆ.
  • ಕೃಷಿಯು ಹೊಸ ಮತ್ತು ಯುವ ರೈತರ ಪ್ರವೇಶಕ್ಕೆ ಅನುಕೂಲವಾಗುವಂತೆ ಸಹಾಯಧನ, ತರಬೇತಿ ಕಾರ್ಯಕ್ರಮಗಳು ಮತ್ತು ಹಣಕಾಸಿನ ನೆರವು ಸರ್ಕಾರ ನೀಡಲಾಗುತ್ತಿದೆ.
  • ಶಿಕ್ಷಣ ಸಂಸ್ಥೆಗಳು ಮತ್ತು ಸಂಸ್ಥೆಗಳು ಆಧುನಿಕ ಕೃಷಿಕರಿಗೆ ಅನುಗುಣವಾಗಿ ಕೃಷಿ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳ ಮೇಲೆ ಕೇಂದ್ರೀಕರಿಸುತ್ತಿವೆ.

ಆಧುನಿಕ ಕೃಷಿಯಿಂದ ಪ್ರಸ್ತುತಪಡಿಸಲಾದ ಸವಾಲುಗಳು ಮತ್ತು ಅವಕಾಶಗಳನ್ನು ಅಳವಡಿಸಿಕೊಳ್ಳುವ ಮೂಲಕ, ಈ ಸಂಜಯ್ ದತ್ ರವರು ತಮ್ಮ ಜೀವನೋಪಾಯವನ್ನು ಭದ್ರಪಡಿಸಿಕೊಳ್ಳುವುದು ಮಾತ್ರವಲ್ಲದೆ ಹೆಚ್ಚು ಸ್ಥಿತಿಸ್ಥಾಪಕ, ಸಮರ್ಥನೀಯ ಮತ್ತು ಸಮುದಾಯ-ಆಧಾರಿತ ಆಹಾರ ವ್ಯವಸ್ಥೆಗೆ ಕೊಡುಗೆ ನೀಡುತ್ತಿದ್ದಾರೆ.

2 thoughts on “ಇಂಜಿನಿಯರಿಂಗ್ ಪದವೀಧರರಾಗಿದ್ದರು, ಕೃಷಿಯಲ್ಲಿ ಯುವ ರೈತನ(Agriculture farming )

  • whoah this weblog is fantastic i love studying your posts. Keep up the great paintings! You understand, lots of individuals are searching round for this information, you could help them greatly.

    Reply
  • Your style is so unique compared to many other people. Thank you for publishing when you have the opportunity,Guess I will just make this bookmarked.2

    Reply

Leave a Reply

Your email address will not be published. Required fields are marked *