https://pagead2.googlesyndication.com/pagead/js/adsbygoogle.js?client=ca-pub-4722372128437229 ಭಾರತದ 51ನೇ ಮುಖ್ಯ ನ್ಯಾಯಮೂರ್ತಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಲಿರುವ ನ್ಯಾಯಮೂರ್ತಿ ಸಂಜೀವ್ ಖನ್ನಾ -
ಕೃಷಿ

ಭಾರತದ 51ನೇ ಮುಖ್ಯ ನ್ಯಾಯಮೂರ್ತಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಲಿರುವ ನ್ಯಾಯಮೂರ್ತಿ ಸಂಜೀವ್ ಖನ್ನಾ

ರಾಷ್ಟ್ರಪತಿ ಭವನದಲ್ಲಿ ದ್ರೌಪದಿ ಮುರ್ಮು ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯುವ ಸಮಾರಂಭದಲ್ಲಿ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಭಾರತದ 51 ನೇ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬೆಳಿಗ್ಗೆ 10 ಗಂಟೆಗೆ ನಿಗದಿಯಾಗಿರುವ ಈ ಸಮಾರಂಭವು ಭಾರತದ ನ್ಯಾಯಾಂಗಕ್ಕೆ ಹೊಸ ಅಧ್ಯಾಯ ಆರಂಭಿಸಲಿದ್ದು,  ಧನಂಜಯ ವೈ ಚಂದ್ರಚೂಡ್ ಅವರ ಉತ್ತರಾಧಿಕಾರಿಯಾಗಲು ಖನ್ನಾ ಸಕಲ ತಯಾರಿ‌ನ ನಡೆಸಿದ್ದಾರೆ. 

ಸಾಂವಿಧಾನಿಕ ಮಾನದಂಡಗಳಿಗೆ ಅನುಗುಣವಾಗಿ ನ್ಯಾಯಮೂರ್ತಿ ಚಂದ್ರಚೂಡ್ ಅವರು ನ್ಯಾಯಮೂರ್ತಿ ಖನ್ನಾ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ಔಪಚಾರಿಕವಾಗಿ ಶಿಫಾರಸು ಮಾಡಿದ್ದು, ಕೇಂದ್ರ ಸರ್ಕಾರವು ಅಕ್ಟೋಬರ್ 24,2024 ರಂದು ನ್ಯಾಯಮೂರ್ತಿ ಖನ್ನಾ ಅವರ ನೇಮಕವನ್ನು ಘೋಷಿಸಿತು.

ಮಾದ್ಯಮಗಳೊಂದಿಗೆ ಮಾತನಾಡಿದ ನ್ಯಾಯಮೂರ್ತಿ ಚಂದ್ರಚೂಡ್, ನ್ಯಾಯಾಂಗವನ್ನು ಮುನ್ನಡೆಸುವ ನ್ಯಾಯಮೂರ್ತಿ ಖನ್ನಾ ಅವರ ಸಾಮರ್ಥ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿ, ಅವರ “ಕಾನೂನು ಮತ್ತು ಆಡಳಿತ ಎರಡರಲ್ಲೂ ವ್ಯಾಪಕ ಅನುಭವ ಹೊಂದಿರುವ ಅಸಾಧಾರಣ, ಅನುಭವಿ ನ್ಯಾಯಾಧೀಶರು” ಎಂದು ಬಣ್ಣಿಸಿದರು. ನ್ಯಾಯಮೂರ್ತಿ ಚಂದ್ರಚೂಡ್ ಅವರು “ಸಂಸ್ಥೆಯ ಭವಿಷ್ಯವು ಸುರಕ್ಷಿತ ಕೈಗಳಲ್ಲಿದೆ” ಎಂಬ ಭರವಸೆಯನ್ನು ಹಂಚಿಕೊಂಡರು. ನ್ಯಾಯ, ಸಮಗ್ರತೆ ಮತ್ತು ಕಾನೂನಿನ ನಿಯಮವನ್ನು ಎತ್ತಿಹಿಡಿಯುವಲ್ಲಿ ಖನ್ನಾ ಅವರ ಬದ್ಧತೆ ನೆರವಾಗಲಿದೆ ಎಂದು ತಿಳಿಸಿದರು.

One thought on “ಭಾರತದ 51ನೇ ಮುಖ್ಯ ನ್ಯಾಯಮೂರ್ತಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಲಿರುವ ನ್ಯಾಯಮೂರ್ತಿ ಸಂಜೀವ್ ಖನ್ನಾ

  • I have recently started a site, the information you offer on this website has helped me tremendously. Thank you for all of your time & work. “The more sand that has escaped from the hourglass of our life, the clearer we should see through it.” by Jean Paul.

    Reply

Leave a Reply

Your email address will not be published. Required fields are marked *