ಮಳೆ ನೀರು ಬಳಸಿ ಸಮಗ್ರ ಕೃಷಿ ಮಾಡಿ ವರ್ಷಕ್ಕೆ 10ಲಕ್ಷಕ್ಕೂ ಅಧಿಕ ಸಂಪಾದನೆ. (Organic farming )
ಡಾ. ಆರ್. ದ್ವಾರಕೀನಾಥ್ ಅತ್ಯುತ್ತಮ ರೈತ ಪ್ರಶಸ್ತಿ ಪುರಸ್ಕೃತ ಯುವ ರೈತ.
ಶ್ರೀ ಮಂಜೇಗೌಡರವರು ಹಾಸನ ಜಿಲ್ಲೆ ಚನ್ನರಾಯನಪಟ್ಟಣ ತಾಲ್ಲೂಕಿನ ಬಳದರೆ ಗ್ರಾಮದವರಾಗಿದ್ದು ಸುಮಾರು 4 ಎಕರೆ, 4ಗುಂಟೆ ಜಮೀನಿನಲ್ಲಿ ಕಳೆದ 24 ವರ್ಷಗಳಿಂದ ಬೇಸಾಯಮಾಡುತ್ತಿದ್ದಾರೆ.(Organic farming)
ಇವರು ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡುಸಮಗ್ರ ಕೃಷಿ ಪದ್ಧತಿ ಆಧಾರಿತ ಕೃಷಿಯಲ್ಲಿ ತೊಡಗಿಸಿಕೊಂಡಿರುತ್ತಾರೆ.
ಇವರು ಕೃಷಿ ಬೆಳೆಗಳಾದ ರಾಗಿ, ಜೋಳ, ತೊಗರಿ, ಅವರೆ,ಅಲಸಂದೆಯನ್ನು ಮಿಶ್ರಬೆಳೆ ಪದ್ಧತಿಯನ್ನು ಅನುಸರಿಸಿಬೆಳೆಯುತ್ತಿದ್ದಾರೆ. ಇದರಿಂದ ಸುಮಾರು ರೂ. 75,000 ವಾರ್ಷಿಕನಿವ್ವಳ ಆದಾಯವನ್ನು ಗಳಿಸಿದ್ದಾರೆ.
ಜೊತೆಗೆ ತೋಟಗಾರಿಕೆ ಬೆಳೆಗಳಾದ ತೆಂಗು, ಅಡಿಕೆ, ಪಪ್ಪಾಯ, ಸೀಬೆಹಣ್ಣು, ಶುಂಠಿ, ಆಲೂಗಡ್ಡೆ, ಸೌತೇಕಾಯಿ ಬೆಳೆಗಳನ್ನು ಆಧುನಿಕ ನೀರಾವರಿ ತಂತ್ರಜ್ಞಾನಗಳಾದ ಹನಿ ನೀರಾವರಿ, ತುಂತುರು ನೀರಾವರಿ, ಸಬ್ ರ್ಸಸ್ ಹಾಗೂ ರೈನ್‌ಗನ್ ಬಳಸಿಕೊಂಡು ನೀರಿನ ಸದ್ಬಳಕೆಯಲ್ಲಿ ಯಶಸ್ವಿಯಾಗಿದ್ದಾರೆ.
ಇವರು ಕೃಷಿಯ ಜೊತೆಗೆ ರೇಷ್ಮೆ ಕೃಷಿಯನ್ನು ಅಳವಡಿಸಿಕೊಂಡು ವಿ-1 ತಳಿಯ ಹಿಪ್ಪುನೇರಳೆ ಬೆಳೆಯನ್ನು ಬೆಳೆದು ಸರಾಸರಿ 90 ಕಿ.ಗ್ರಾಂ. ಗೂಡಿನ ಇಳುವರಿಯನ್ನು ಪಡೆದು ವರ್ಷಕ್ಕೆ ರೂ. 8.0 ಲಕ್ಷ ನಿವ್ವಳ ಆದಾಯವನ್ನು ಪಡೆಯುತ್ತಿದ್ದಾರೆ.
ಅಲ್ಲದೆ ರೇಷ್ಮೆ ಹುಳು ಸಾಕಣೆಯಲ್ಲಿ ನೂತನ ಸ್ಟ್ಯಾಂಡ್ ಪದ್ಧತಿ ಬಳಸಿ ಹಿಪ್ಪುನೇರಳೆ ಬೆಳೆಯಲ್ಲಿ ಮರಗಡ್ಡಿ ಪದ್ಧತಿಯನ್ನು ಅಳವಡಿಕೊಂಡಿದ್ದಾರೆ.
ಇವರು ಅರಣ್ಯ ಕೃಷಿಗೆ ಒತ್ತು ನೀಡಿದ್ದು ತೇಗ(50), ಸಿಲ್ವರ್ ಓಕ್ (50), ಬೇವು(5), ಮಹಾಗನಿ(4) ಇತ್ಯಾದಿ ಮರಗಳನ್ನು ತಮ್ಮ ಜಮೀನಿನ ಸುತ್ತ ಬದುಗಳ ಮೇಲೆ ಬೆಳೆದಿದ್ದಾರೆ.
ಕೃಷಿಯ ಜೊತೆಗೆ ಉಪಕಸುಬು ಬಗ್ಗೆ ಮಾಹಿತಿ.
ಇವರು ಉಪಕಸುಬಾಗಿ ಹೈನುಗಾರಿಕೆ ಅಳವಡಿಸಿ ಹಸು(2), ಎಮ್ಮೆ(2), ಮಲೆನಾಡು ಗಿಡ್ಡ (2),ಕುರಿ (4),ಮೇಕೆ(8),ಕೋಳಿ (33),ಹಂದಿ (10), ಮೀನು (1000) 5 ಬಾತುಕೋಳಿಗಳನ್ನು ಸಾಕಣಿಕೆ ಮಾಡುತ್ತಿದ್ದು ರೂ.2.0 ಲಕ್ಷ ನಿವ್ವಳ ಆದಾಯ ಪಡೆಯುತ್ತಿದ್ದಾರೆ.
ಮೇವಿನ ಪೂರೈಕೆಗಾಗಿ ಬಹುಕಟಾವಿನ ಜೋಳ, ನೇಪಿಯರ್, ಕುದುರೆ ಮೆಂತ್ಯೆವನ್ನು ತಮ್ಮ ಜಮೀನಿನಲ್ಲಿ ಬೆಳೆದು ಪೂರೈಸುತ್ತಿದ್ದು ಖರ್ಚನ್ನು ಕಡಿಮೆ ಮಾಡಿದ್ದಾರೆ. ಅಲ್ಲದೆ ಅಣಬೆ ಬೇಸಾಯ ಸಹ ಮಾಡುತ್ತಿದ್ದು ರೂ. 17,500 ನಿವ್ವಳ ಆದಾಯ ಗಳಿಸಿರುತ್ತಾರೆ.
ಸಾವಯವ ಕೃಷಿ ಬಗ್ಗೆ ಮಾಹಿತಿ (Organic farming )
ಇವರು ಸಾವಯವ ಕೃಷಿ ಪದ್ಧತಿಗಳಾದ ಎರೆಹುಳು ಗೊಬ್ಬರ, ಕಾಂಪೋಸ್ಟ್ ತಯಾರಿಕೆ, ಜೈವಿಕ ಗೊಬ್ಬರ, ಹಸಿರೆಲೆ ಗೊಬ್ಬರ, ಪಂಚಗವ್ಯ ತಯಾರಿಕೆ ಮತ್ತು ಬಳಕೆಯಿಂದಾಗಿ ಉತ್ತಮ ಇಳುವರಿ ಹಾಗೂ ಗುಣಮಟ್ಟದ ಫಸಲನ್ನು ಪಡೆಯುತ್ತಿದ್ದಾರೆ.
ಜೊತೆಗೆ ಸಮಗ್ರ ಪೋಷಕಾಂಶಗಳ ನಿರ್ವಹಣೆಗಾಗಿ ಕೊಟ್ಟಿಗೆ ಗೊಬ್ಬರ, ಕಾಂಪೋಸ್ಟ್, ಹಸಿರೆಲೆ ಗೊಬ್ಬರಗಳು, ಎರೆಹುಳು ಗೊಬ್ಬರ, ಜೈವಿಕ ಅನಿಲ ಬೊಗಡು, ಕೆರೆಗೋಡು, ಜೀವಾಮೃತ, ರೈಜೋಬಿಯಂ, ಅಜೋಸ್ಪೆರಿಲಂ, ವೇಸ್ಟ್ ಡಿಕಾಂಪೋಸರ್ ಮತ್ತು ಲಘುಪೋಶಕಾಂಶಗಳ ಮಿಶ್ರಣಗಳನ್ನು ಬಳಸಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವುದಲ್ಲದೆ,
ರಸಾಯನಿಕ ಗೊಬ್ಬರಗಳ ಬಳಕೆ ಕಡಿಮೆ ಮಾಡಿ ಖರ್ಚನ್ನು ಕಡಿತಗೊಳಿಸಿದ್ದಾರೆ. ಜೊತೆಗೆ ಸಮಗ್ರ ಪೀಡೆ ನಿರ್ವಹಣೆಗಾಗಿ ಬೇವಿನ ಎಣ್ಣೆ, ಮೋಹಕ ಬಲೆಗಳು, ಹಳದಿ ಅಂಟು ಪಟ್ಟಿಗಳು, ಜೈವಿಕ ಪೀಡೆನಾಶಕಗಳನ್ನು ಬಳಸಿ ಶಿಫಾರಸ್ಸಿತ ರಸಾಯನಿಕಪೀಡೆನಾಶಕಗಳನ್ನು ಸುರಕ್ಷಿತವಾಗಿ ಬಳಕೆ ಮಾಡುತ್ತಿದ್ದಾರೆ.
- ಅಲ್ಪಾವಧಿ ಬೆಳೆಗಳ ಕೃಷಿ ಮಾಡುವುದರಿಂದ ಸಾಮಾನ್ಯವಾಗಿ ಕಡಿಮೆ ಸಮಯದಲ್ಲಿ ಬರುವ ಬೆಳೆಗಳಾಗಿದೆ ಅಲ್ಪಾವಧಿ ಬೆಳೆಗಳು ಬೆಳೆಯಲು ಇವು ಸೂಕ್ತವಾದ ಉದಾಹರಣೆ ರಾಗಿ. ಕಡಲೆ. ಅವರೇ. ತೊಗರಿ. ಮತ್ತು ಮೆಕ್ಕೆಜೋಳ. ಹಾಗೂ ಇನ್ನಿತರ ಏಕದಳ ಮತ್ತು ದ್ವಿದಳ ಧಾನ್ಯಗಳು ಅಲ್ಪಾವಧಿಯಲ್ಲಿ ಬೆಳೆಯಬಹುದು ಮತ್ತು ಇವುಗಳನ್ನು ಮಳೆಯ ಆಶ್ರಿತ ಬೆಳೆಗಳಾಗಿ ಬೆಳೆದು ಕಡಿಮೆ ಬಂಡವಾಳದಿಂದ ಹಾಗೂ ಕಡಿಮೆ ಸಮಯದಲ್ಲಿ ಬೇಳೆ ಬೆಳೆಯಬಹುದು ಇದರಿಂದ ಕೃಷಿಕರ ಹೆಚ್ಚು ಲಾಭ ಪಡೆಯಬಹುದು. ಹಾಗೂ ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಬಹುದು ಅಲ್ಪಾವಧಿ ಬೆಳೆಗಳ ಉತ್ಪಾದನೆ ವರ್ಷದ ಬೆಳೆಗಳಿಗಿಂತ ಹೆಚ್ಚು ಆದಾಯ ಆಗುತ್ತದೆ.
- ಇದರ ಜೊತೆಗೆ ಇವರು ತೋಟಗಾರಿಕೆ ಬೆಳೆಗಳನ್ನು ಮತ್ತು ವಿದೇಶಿ ತರಕಾರಿಗಳಾದ ಬ್ರೊಕೋಲಿ, ಬೀಟ್ ರೂಟ್. ಕ್ಯಾರೆಟ್. ಮತ್ತು ಹಣ್ಣುಗಳು ದ್ರಾಕ್ಷಿ. ದಾಳಿಂಬೆ. ಹಣ್ಣು ಬೆಳೆಗಳನ್ನು ಬೆಳೆಯುತ್ತಾ ಜೊತೆಗೆ ಬಳ್ಳಿ ಬೆಳೆಗಳಾದ ಸೌತೆಕಾಯಿ. ತೊಂಡೆಕಾಯಿ. ಹಾಗೂ ಸೊಪ್ಪು ಬೆಳೆಗಳಾದ ಹೆಚ್ಚು ಬೇಡಿಕೆ ಇರುವ ಕೊತ್ತಂಬರಿ. ಮೆಂತೆ ಸೊಪ್ಪು. ಹಾಗೂ ಮುಂದೆ ಬರುವ ಹಬ್ಬಗಳನ್ನು ಗಮನದಲ್ಲಿಟ್ಟುಕೊಂಡು ಸೇವಂತಿಗೆ. ಮತ್ತು ಗುಲಾಬಿ. ಹೂಗಳನ್ನು ಬೆಳೆಯುತ್ತಾರೆ.
- ಅಲ್ಪಾವಧಿ ಬೆಳೆಗಳ ಜೊತೆಗೆ ಇವರು ರೇಷ್ಮೆ ಬೆಳೆಯನ್ನು ಆಧುನಿಕ ವಿಧಾನದಲ್ಲಿ ರೇಷ್ಮೆ ಗೂಡುಗಳನ್ನು ಸಾಕುತ್ತಿದ್ದಾರೆ. ಇವರು ತೋಟದ ಸುತ್ತಲೂ ಅರಣ್ಯ ಕೃಷಿಗಳಾದ ತೇಗ. ಬೇವು. ಹೊಂಗೆ. ನೇರಳೆ. ಮತ್ತು ಸಿಲ್ವರ್. ಮರಗಳನ್ನು ಬೆಳೆದಿದ್ದು ಇದರಿಂದ ತೋಟದಲ್ಲಿ ಮಣ್ಣಿನ ಸವಕಳಿಯನ್ನು ತಡೆಯಬಹುದು.
- ಹೈನುಗಾರಿಕೆಯಲ್ಲಿ ಇವರು ಎಚ್ಎಫ್(HF) 5 ಹಸುಗಳು. ಎರಡು ಎಮ್ಮೆಗಳ ಸಾಕಾಣಿಕೆ ಮಾಡಿ ದಿನಕ್ಕೆ 50 ಲೀಟರ್ ಹಾಲು ಉತ್ಪಾದನೆ ಮಾಡುತ್ತಿದ್ದಾರೆ 10 ಮೇಕೆ ಮತ್ತು ಐವತ್ತು ನಾಟಿ ಕೋಳಿಗಳು ಸಾಕಾಣಿಕೆ ಮಾಡಿ ಇವರು ತೋಟಕ್ಕೆ ಈ ಗೊಬ್ಬರವನ್ನು ಬಳಕೆ ಮಾಡುತ್ತಾರೆ.
- ಕೃಷಿ ಹೊಂಡ ಸರ್ಕಾರದ ಸಹಯೋಗದೊಂದಿಗೆ ಕೃಷಿ ಹೊಂಡವನ್ನು ನಿರ್ಮಿಸಿ ಇವರು ಮಳೆ ನೀರನ್ನು ಸಂಗ್ರಹಿಸಿ ಆ ನೀರಿನಲ್ಲಿ ಮೀನುಗಾರಿಕೆ ಮಾಡುತ್ತಾರೆ ಮತ್ತು ಅದೇ ನೀರನ್ನು ತಮ್ಮ ತೋಟದ ಜಮೀನುಗಳಿಗೆ ಬಳಸುತ್ತಾರೆ.
- ಜೇನು ಕೃಷಿ ಮಾಡುವುದರಿಂದ ಇವರ ಜಮೀನಿನಲ್ಲಿ ಪರಗಸ್ಪರ್ಶ ಹೆಚ್ಚಾಗುವುದರಿಂದ ಬೆಳೆಗಳ ಅಧಿಕ ಇಳುವರಿ ಪಡೆಯುತ್ತಾರೆ.
- ನೀರಾವರಿ ನೀರಾವರಿಯಲ್ಲಿ ಆಧುನಿಕ ಪದ್ಧತಿಯನ್ನು ಅಳವಡಿಸಿಕೊಂಡು ಹನಿ ನೀರಾವರಿ. ತುಂತುರು ನೀರಾವರಿ . ರೈಮ್ ಟ್ಯೂಬ್. ಮತ್ತು ಪ್ಲಾಸ್ಟಿಕ್.ಹೊದಿಕೆಯನ್ನು ಬಳಸಿಕೊಂಡು ಕಡಿಮೆ ನೀರನ್ನು ಬಳಕೆ ಮಾಡಿಕೊಂಡು ಇವರು ಮಿತವಾಗಿ ನೀರನ್ನು ಬಳಸುತ್ತಿದ್ದಾರೆ.
- ಸಮಗ್ರ ಕೀಟ ಮತ್ತು ರೋಗ ನಿರ್ವಹಣೆ ತಮ್ಮ ಬೆಳೆಗಳಿಗೆ ಜೈವಿಕ ಗೊಬ್ಬರ ಮತ್ತು ಮೋಹಕ ಬಲೆ ಬೆಳಕಿನ ಬಲೆ ಹಳದಿ ಅಂಟು ಬೇವಿನ ಕಷಾಯ ಬೇವಿನ ಎಣ್ಣೆ ಈ ರೀತಿಯ ನಾಟಿ ಔಷಧಿಗಳನ್ನು ಬಳಸಿ ಕೊಂಡು ರೋಗ ನಿಯಂತ್ರಣ ಮಾಡಿದ್ದಾರೆ.
- ಕೃಷಿಯಲ್ಲಿ ಯಂತ್ರಗಳ ಬಳಕೆ ಇತ್ತೀಚಿನ ದಿನಗಳಲ್ಲಿ ಕೂಲಿಕಾರ್ಮಿಕರ ಕೊರತೆ ಉಂಟಾಗಿದ್ದು ಇದರಿಂದ ಆಧುನಿಕ ಯಂತ್ರ ಉಪಕರಣಗಳ ಬಳಸಿ ಕಡಿಮೆ ಸಮಯದಲ್ಲಿ ಹೆಚ್ಚು ಕಾರ್ಯನಿರ್ವಹಿಸಲು ಸಹಾಯವಾಗಿದೆ.
ಮಳೆ ನೀರಿನ ಸದ್ಬಳಕೆ ಬಗ್ಗೆ ಮಾಹಿತಿ
ಮಂಜೇಗೌಡರವರು ಮಣ್ಣು ಮತ್ತು ನೀರಿನ ಸಂರಕ್ಷಣೆಗಾಗಿ ಇಳಿಜಾರಿಗೆ ಅಡ್ಡಲಾಗಿ ಬದುಗಳ ನಿರ್ಮಾಣ, ಸಮಪಾತಳಿ ಬದುಗಳ ನಿರ್ಮಾಣ, ಮಾಗಿ ಉಳುಮೆ, ನೀರು ಕಾಲುವೆಗಳ ನಿರ್ಮಾಣ ಹಾಗು ಸರಿಯಾದ ಸಮಯಕ್ಕೆ ಬಿತ್ತನೆ ಹಾಗು ಶಿಫಾರಸ್ಸು ಮಾಡಿರುವ ತಳಿಗಳನ್ನು ತಮ್ಮ ಕೃಷಿಯಲ್ಲಿ ಅಳವಡಿಸಿಕೊಂಡಿರುತ್ತಾರೆ.
ಇವರು ಕೃಷಿಯಲ್ಲಿ ಸುಧಾರಿತ ಕೃಷಿ ಉಪಕರಣಗಳಾದ ಟ್ರ್ಯಾಕ್ಟರ್, ನೇಗಿಲು, ಕಲ್ಟಿವೇಟರ್, ರೊಟವೇಟರ್. ಪವರ್ ಸ್ಟೇಯರ್ ಹಾಗೂ ಮುಂತಾದುವುಗಳನ್ನು ಸ್ವತಃ ಹೊಂದಿದ್ದು ಕೃಷಿ ಕಾರ್ಮಿಕರ ವೆಚ್ಚವನ್ನು ಗಣನೀಯವಾಗಿ ಕಡಿಮೆಗೊಳಿಸಿದ್ದಾರೆ.
ಕೃಷಿ ತಾಜ್ಯದ ಸಮರ್ಪಕ ಬಳಕೆ ಮಾಡಿಕೊಂಡು ಕಾಂಪೋಸ್ಟ್ ಗೊಬ್ಬರವನ್ನು ತಯಾರಿಸಿಕೊಂಡು ತಮ್ಮ ಜಮೀನಿಗೆಉಪಯೋಗಿಸುತ್ತಿದ್ದಾರೆ.
ಕೃಷಿ ಇಲಾಖೆ ಹಾಗೂ ಇತರೇ ಅಭಿವೃದ್ಧಿ ಇಲಾಖೆಗಳು, ಕೃಷಿ ವಿಜ್ಞಾನ ಕೇಂದ್ರ, ವಿವಿಧ ಮಾಧ್ಯಮಗಳ ಮೂಲಕ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆದು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡು ವೈಜ್ಞಾನಿಕವಾಗಿ ಕೃಷಿಯನ್ನು ನಿಭಾಯಿಸುವುದಲ್ಲದೆ ಇತರೆ ರೈತರಿಗೂ ವೈಜ್ಞಾನಿಕ ಕ್ರಮಗಳನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸುತ್ತಿದ್ದಾರೆ.
ಜೊತೆಗೆ ವಿವಿಧ ಇಲಾಖೆಯ ಅಧಿಕಾರಿಗಳು ಇವರ ಕ್ಷೇತ್ರಕ್ಕೆ ಭೇಟಿ ನೀಡಿ ಅವರ ಜೊತೆ ವಿಚಾರ ವಿನಿಮಯ ಮಾಡಿ ಇವರ ಕೃಷಿ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.
ಮಂಜೇಗೌಡರವರು ಸಮೂಹ ಮಾದ್ಯಮಗಳಲ್ಲಿ ಎರಡು ಬಾರಿ ರೇಡಿಯೋ, ಟಿ. ವಿ. ಕಾರ್ಯಕ್ರಮ ಮತ್ತು ವಿಜಯವಾಣಿ ಪತ್ರಿಕೆಗಳಲ್ಲಿ ಸಮಗ್ರ ಕೃಷಿ ಪದ್ಧತಿಯ ಅನುಭವವನ್ನು ಹಂಚಿಕೊಂಡಿರುತ್ತಾರೆ.
ಇವರ ತೋಟಕ್ಕೆ ಗ್ರಾಮೀಣ ಕೃಷಿ ಕಾರ್ಯನುಭವನ್ನು ಪಡೆಯಲು ಕೃಷಿ ವಿಶ್ವವಿದ್ಯಾನಿಲಯದ ಶಿಬಿರದ ವಿದ್ಯಾರ್ಥಿಗಳು ಭೇಟಿ ನೀಡಿ ತರಬೇತಿಯನ್ನು ಸಹ ಪಡೆದಿರುತ್ತಾರೆ.
ಶ್ರೀಯುತರ ಕೃಷಿ ಸಾಧನೆಗೆ 2021ರಲ್ಲಿ ಬೆಂಗಳೂರುಕೃಷಿ ವಿಶ್ವವಿದ್ಯಾನಿಲಯವತಿಯಿಂದ ತಾಲ್ಲೂಕು ಮಟ್ಟದ ಅತ್ಯುತ್ತಮಯುವ ರೈತ ಪ್ರಶಸ್ತಿ, 2022ರಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿಮತ್ತು ಇತರೆ ಪ್ರಶಸ್ತಿಗಳು ಲಭಿಸಿವೆ.
I have been surfing online greater than 3 hours as of late, but I by no means found any fascinating article like yours. It is beautiful price sufficient for me. In my opinion, if all webmasters and bloggers made excellent content material as you probably did, the web will probably be a lot more useful than ever before.