ಮೇರಿನೋ ಕುರಿಯ ಬಗ್ಗೆ ತಿಳಿದುಕೊಳ್ಳಿ ಲಕ್ಷ ಲಕ್ಷ ಆದಾಯ ಗಳಿಸಿ..!(Merinosheep farming)
ಯುವ ರೈತ ರಾಹುಲ್ ರವರು “ಸಿಂಚನ” ಮೇಕೆ ಮತ್ತು ಕುರಿ ಫಾರಂ ಶೆಡ್ ನಿರ್ಮಾಣ ಮಾಡಿದ್ದಾರೆ. ಇವರು ಸುಮಾರು 15 ವರ್ಷಗಳಿಂದ ಕುರಿ ಮತ್ತು ಮೇಕೆ ಸಾಕಾಣಿಕೆ ಮಾಡುತ್ತಿದ್ದಾರೆ.(Merinosheep farming)
ಇವರ ಬಳಿ ವಿಶೇಷವಾಗಿಯೇ ವಿವಿಧ ಜಾತಿಯ ಕುರಿಗಳನ್ನು ಸಾಕಣೆಗೆ ಮಾಡಿದ್ದಾರೆ ಅವುಗಳು ಬೋಯರ್. ಬಿಟ್ಟಲ್. ಮೇಕೆಗಳು ಉತ್ತಮ ತಳಿಯಾಗಿದೆ ಅದೇ ರೀತಿ ಇವರು ಕುರಿಗಳು ಸಾಕಾಣಿಕೆ ಮಾಡಿದ್ದಾರೆ ಡಾರ್ಪರ್. ರಾಮ್ ಬುಲೆಟ್ ಸ್ಥಳೀಯ ಕುರಿಗಳಾದ ಕೆಂಗುರಿ. ಏಳಗಾ ವಿಶೇಷವಾಗಿ ತುಂಬಾ ತಳಿಯ ಕುರಿಗಳನ್ನು ಇವರ ಫಾರಂನಲ್ಲಿ ಸಾಕಾಣಿಕೆ ಮಾಡಿದ್ದಾರೆ.
ಇವರು ಡಾರ್ಪರ್ ತಳಿಗೆ ಮೇರಿನೋ ಕುರಿಗಳನ್ನು ಕ್ರಸಿಂಗ್ ಮಾಡಿಸಿ ಬೇರೆ ಬೇರೆ ತಳಿಯ ಕುರಿಮರಿಗಳನ್ನು ಅಭಿವೃದ್ಧಿ ಪಡಿಸುತ್ತಿರುತ್ತಾರೆ.ಮೊದಲನೆಯದಾಗಿ ಈ ಮೇಲಿನ ಕುರಿಯು ಇದು ಸ್ಪೇನ್ ದೇಶದಲ್ಲಿ ಈ ತಳಿಯ ಅಭಿವೃದ್ಧಿಯಾಗಿದು ಈ ಕುರಿಯ ವಿಶೇಷವಾಗಿ ಆಸ್ಟ್ರೇಲಿಯಾ ದಲ್ಲಿ ಉಣ್ಣೆ ಮತ್ತು ಮಾಂಸಕ್ಕಾಗಿ ತಳಿ ಯನ್ನು ಹೆಚ್ಚು ಸಾಕಾಣಿಕೆ ಮಾಡುತ್ತಾರೆ.
ಮೇರಿನೋ ಕುರಿ ಸಾಕಾಣಿಕೆ ಸಂಪೂರ್ಣ ಮಾಹಿತಿ(Merinosheep farming)
ಮರಿನೋ ಕುರಿ ಸಾಕಾಣಿಕೆ, ಮರಿನೋ ಕುರಿಗಳ ಸಂತಾನೋತ್ಪತ್ತಿ ಮತ್ತು ಸಾಕಣೆ ಇದು ಕೃಷಿ ವಲಯದಲ್ಲಿ ಪ್ರಾಮುಖ್ಯತೆಯನ್ನು ಗಳಿಸಿದ ಲಾಭದಾಯಕ ಮತ್ತು ಸಮರ್ಥನೀಯ ಉದ್ಯಮವಾಗಿದೆ. ಸ್ಪೇನ್‌ನಿಂದ ಹುಟ್ಟಿಕೊಂಡ ಮರಿನೋ ಕುರಿಗಳು ತಮ್ಮ ಉತ್ತಮ ಗುಣಮಟ್ಟದ ಉಣ್ಣೆ, ವಿವಿಧ ಹವಾಮಾನಗಳಿಗೆ ಹೊಂದಿಕೊಳ್ಳುವಿಕೆ ಮತ್ತು ಸಮೃದ್ಧ ಸಂತಾನೋತ್ಪತ್ತಿಗೆ ಹೆಸರುವಾಸಿಯಾಗಿದೆ.
ಮರಿನೋ ತಳಿಯು 18 ನೇ ಶತಮಾನದ ಆರಂಭದಲ್ಲಿ ಸ್ಪೇನ್‌ನಲ್ಲಿ ಅಭಿವೃದ್ಧಿಪಡಿಸಿದಾಗ ಶ್ರೀಮಂತ ಇತಿಹಾಸವನ್ನು ಹೊಂದಿದೆ. ಈ ತಳಿಯ ಪ್ರಾಥಮಿಕ ಉದ್ದೇಶವು ಉತ್ತಮ-ಗುಣಮಟ್ಟದ ಉಣ್ಣೆಯನ್ನು ಉತ್ಪಾದಿಸುವುದಾಗಿತ್ತು, ಮರಿನೋ ಕುರಿಗಳನ್ನು ನಂತರ ಆಸ್ಟ್ರೇಲಿಯಾ ಸೇರಿದಂತೆ ವಿಶ್ವದ ಇತರ ಭಾಗಗಳಿಗೆ ಪರಿಚಯಿಸಲಾಯಿತು, ಅಲ್ಲಿ ಅವರು ಅಭಿವೃದ್ಧಿ ಹೊಂದಿದರು ಮತ್ತು ಜಾಗತಿಕ ಉಣ್ಣೆ ಉದ್ಯಮಕ್ಕೆ ಗಮನಾರ್ಹ ಕೊಡುಗೆ ನೀಡಿದ್ದಾರೆ.
ಮರಿನೋ ಕುರಿಗಳ ಗುಣಲಕ್ಷಣಗಳು
- ಉಣ್ಣೆಯ ಗುಣಮಟ್ಟ ಮರಿನೋ ಕುರಿಗಳು ತಮ್ಮ ಉತ್ತಮ, ದಟ್ಟವಾದ ಮತ್ತು ಉತ್ತಮ ಗುಣಮಟ್ಟದ ಉಣ್ಣೆಗೆ ಹೆಸರುವಾಸಿಯಾಗಿದೆ. ಉಣ್ಣೆಯು ಅದರ ಮೃದುತ್ವ, ಸೆಳೆತ ಮತ್ತು ಸ್ಥಿತಿಸ್ಥಾಪಕತ್ವಕ್ಕಾಗಿ ಪ್ರಶಂಸಿಸಲ್ಪಟ್ಟಿದೆ, ಇದು ಜವಳಿ ಕೈಗಾರಿಕೆಗಳಿಗೆ ಹೆಚ್ಚು ಬೇಡಿಕೆ ಇದೆ.
- ಹೊಂದಿಕೊಳ್ಳುವಿಕೆ: ಮರಿನೋ ಕುರಿಗಳ ಪ್ರಮುಖ ಅನುಕೂಲವೆಂದರೆ ವಿವಿಧ ಹವಾಮಾನಗಳಿಗೆ ಹೊಂದಿಕೊಳ್ಳುವಿಕೆ. ಅವು ಬಿಸಿ ಮತ್ತು ತಣ್ಣನೆಯ ಪರಿಸರದಲ್ಲಿ ಅಭಿವೃದ್ಧಿ ಹೊಂದುತ್ತವೆ, ಇದು ವೈವಿಧ್ಯಮಯ ಭೌಗೋಳಿಕ ಪ್ರದೇಶಗಳಿಗೆ ಸೂಕ್ತವಾಗಿದೆ.
- ಸಮೃದ್ಧ ಸಂತಾನೋತ್ಪತ್ತಿ: ಮರಿನೋ ಕುರಿಗಳು ತಮ್ಮ ಹೆಚ್ಚಿನ ಫಲವತ್ತತೆ ದರಗಳು ಮತ್ತು ಬಹು ಜನನಗಳಿಗೆ ಹೆಸರುವಾಸಿಯಾಗಿದೆ. ಈ ಗುಣಲಕ್ಷಣವು ರೈತರಿಗೆ ತಮ್ಮ ಹಿಂಡುಗಳ ಗಾತ್ರವನ್ನು ಪರಿಣಾಮಕಾರಿಯಾಗಿ ಹೆಚ್ಚಿಸಲು ಬಯಸುವ ಮೌಲ್ಯಯುತ ಆಸ್ತಿಯಾಗಿದೆ.
- ಗಡಸುತನ: ಮರಿನೋ ಕುರಿಗಳು ದೃಢವಾದ ಆರೋಗ್ಯವನ್ನು ಪ್ರದರ್ಶಿಸುತ್ತವೆ ಮತ್ತು ಸಾಮಾನ್ಯವಾಗಿ ವಿವಿಧ ರೋಗಗಳಿಗೆ ನಿರೋಧಕವಾಗಿರುತ್ತವೆ. ಅವರ ಗಡಸುತನವು ವ್ಯಾಪಕವಾದ ಪಶುವೈದ್ಯಕೀಯ ಆರೈಕೆಯ ಅಗತ್ಯವನ್ನು ಕಡಿಮೆ ಮಾಡುತ್ತದೆ, ವೆಚ್ಚ-ಪರಿಣಾಮಕಾರಿ ಕೃಷಿ ಪದ್ಧತಿಗಳಿಗೆ ಕೊಡುಗೆ ನೀಡುತ್ತದೆ.
ಇವರು ಡಾರ್ಪರ್ ತಳಿಗೆ ಮೇರಿನೋ ಕುರಿಗಳನ್ನು ಕ್ರಸಿಂಗ್ ಮಾಡಿಸಿ ಬೇರೆ ಬೇರೆ ತಳಿಯ ಕುರಿಮರಿಗಳನ್ನು ಅಭಿವೃದ್ಧಿಪಡಿಸುತ್ತಿರುತ್ತಾರೆ. ಈ ಕುರಿಯ ಒಂದು ವರ್ಷಕ್ಕೆ 25 ಕೆಜಿ ಎಷ್ಟು ಉಣ್ಣೆ ಸಿಗುತ್ತದೆ ಈ ಕುರಿಯ ಉಣ್ಣೆಗೆ ಬೇರೆ ದೇಶಗಳಲ್ಲಿ ಭಾರಿ ಬೇಡಿಕೆ ಇದೆ.
ಈ ಕುರಿಯ ಉಣ್ಣೆಯನ್ನು ಬಳಸಿಕೊಂಡು ಸ್ವೆಟರ್ ತಯಾರಿಕೆಯಲ್ಲಿ ಬಳಸುತ್ತಾರೆ ಮತ್ತು ಬೆಡ್ ಶೀಟ್ ಗಳ ತಯಾರಿಕೆಯಲ್ಲಿ ಉಣ್ಣೆ ಹೆಚ್ಚಾಗಿ ಬಳಸುವುದರಿಂದ ಈ ಕುರಿಯ ಹೆಚ್ಚಿನ ಬೇಡಿಕೆ ಇದೆ.ಈ ಕುರಿಯ ಉಣ್ಣೆಯು ಪಶ್ಚಿಮಾತ್ಯ ದೇಶಗಳಲ್ಲಿ ಅತಿ ಹೆಚ್ಚು ಬೇಡಿಕೆ ಇದೆ ಮುಂದಿನ ದಿನಗಳಲ್ಲಿ ಭಾರತದಲ್ಲಿ ಇದರ ಬೇಡಿಕೆ ಹೆಚ್ಚಾಗುತ್ತದೆ.
ಈ ಮೇರಿನೋ ತಳಿಯು ಕುರಿಗಳು ಮತ್ತೊಂದು ವಿಶೇಷ ಎಂದರೆ ಇದರ ಒಂದು ಗಂಡು ಕುರಿ ಸರಾಸರಿ 160 ರಿಂದ 200 ಕೆಜಿ ತೂಕವಾಗಿ ದಷ್ಟು ಬೆಳೆಯುತ್ತದೆ. ಈ ಕುರಿಯು ವಾತಾವರಣಕ್ಕೆ ಹೊಂದಿಕೊಳ್ಳುವ ಕುರಿಯಾಗಿದೆ ಇದು ಶೀತ ವಲಯದ ಗುರಿಯಾಗಿದ್ದು ಎಲ್ಲ ವಾತಾವರಣಕ್ಕೆ ಬೇಗನೆ ಹೊಂದಿಕೊಳ್ಳುತ್ತದೆ.
ಈ ಮೇರಿನೋ ತಳಿಯ ಕುರಿಗಳಲ್ಲಿ ವಿಶೇಷವಾಗಿ ಎರಡು ವಿಧಗಳಿವೆ. ಮೊದಲನೆಯದು ಕೋಲ್ಡ್ ಮೇರಿನೋ ಈ ಕುರಿಗೆ ಕೊಂಬು ಇರುವುದಿಲ್ಲ ಮತ್ತು ಎರಡನೆಯ ತಳಿ ಆರಂ ಈ ತಳಿಗೆ ಕೊಂಬು ಬರುತ್ತದೆ.ಇದರ ಚರ್ಮವು ರಿಂಕಲ್ ಆಕಾರದಲ್ಲಿ ಇರುತ್ತದೆ ಮೇರಿನೋ ಕುರಿ ಕುಡು ಪದ್ಧತಿಯಲ್ಲಿ ಸಾಕಾಣಿಕೆ ಮಾಡಬಹುದು ಮಾಡಿದರೆ.ಈ ಈ ತಳಿಯ ಕುರಿಗಳು ಬಿಟ್ಟು ಮೇಯಿಸುವ ಪದ್ಧತಿಯೇ ಹೆಚ್ಚು ಬೇಗ ಬೆಳವಣಿಗೆ ಆಗುತ್ತದೆ.
ಈ ಮೇರಿನೋ ಕುರಿ ಮರಿಯು ಹುಟ್ಟಿದ ದಿನಕ್ಕೆ 6 ರಿಂದ 7 ಕೆಜಿ ತೂಕ ಬರುತ್ತದೆ ಈ ಕುರಿಯು ಒಂದು ಬಾರಿಗೆ ಎರಡು ಮರಿಗಳನ್ನು ಹಾಕುವ ಸಾಮರ್ಥ್ಯ ಹೊಂದಿರುತ್ತದೆ ಈ ಮೇರಿನೋ ಹೆಣ್ಣು ಕುರಿಯು ಸುಮಾರು 80 ರಿಂದ 100 ಕೆಜಿ ಇರುತ್ತದೆ ಈ ಕುರಿ ವಿಶೇಷತೆ ಎಂದರೆ ಕುರಿಯ ಕಿವಿಗಳು ತುಂಬಾ ಸಣ್ಣದಾಗಿದ್ದು ನೋಡೋದು ಆಕರ್ಷಿತವಾಗಿರುತ್ತದೆ.
ಇವರು ತಳಿಯ ಅಭಿವೃದ್ಧಿಪಡಿಸಲು 95 ಕುರಿಗಳ ಜೊತೆಗೆ ಎರಡು ಗಂಡು ಮರಿ ಕುರಿಗಳನ್ನು ತಂದು ತಮ್ಮ ಫಾರ್ಮ್ ನಲ್ಲಿ ಸಾಕಾಣಿಕೆ ಮಾಡುತ್ತಿದ್ದಾರೆ ಈ ಕುರಿಗಳು ಮೊದಲ ಬಾರಿಗೆ ಈ ವಾತಾವರಣದಲ್ಲಿ ಹೊಂದುಕೊಳ್ಳಲು ಕಷ್ಟವಾಗಿದ್ದು ನಂತರದ ದಿನಗಳಲ್ಲಿ ಹೆಚ್ಚಿನ ಇವರು ಕಾಳಜಿಯನ್ನು ವಹಿಸಿಕೊಂಡು ನೋಡಿಕೊಂಡಿದ್ದಾರೆ.
ಇವರ ಬಳಿ ಇರುವ ಎಲ್ಲಾ ಕುರಿಗಳಿಗೆ ವ್ಯಾಕ್ಸಿನೇಷನ್ ಸರಿಯಾದ ಸಮಯದಲ್ಲಿ ನೀಡಿರುತ್ತಾರೆ ಮತ್ತು ಪ್ರತಿ ಮೂರು ತಿಂಗಳಿಗೊಮ್ಮೆ ಡಿವರ್ಮಿಂಗ್ ಮಾಡುತ್ತಾರೆ ಮತ್ತು ಇವರ ಬಳಿ ಇರುವ ಎಲ್ಲಾ ಕುರಿಯ ಮರಿಗಳಿಗೆ ನೀಡಿದ ವ್ಯಾಕ್ಸಿನೇಷನ್ ದಿನಾಂಕ ದಾಖಲೆಗಳನ್ನು ರೈತರಿಗೆ ಸಹ ನೀಡುತ್ತಾರೆ.
ಈ ಮೇರಿನೋ ಕುರಿಯು ಒಂದು ಬಾರಿ ಮರಿ ಹಾಕಿದ ನಂತರ ಮೂರು ತಿಂಗಳಿಗೆ ಮತ್ತೆ ಗರ್ಭಧಾರಣೆಯಾಗುತ್ತದೆ ಈ ಕುರಿಯ ಒಂದು ಬಾರಿ ಎರಡು ಮರಿ ಹಾಕುವ ಸಾಮರ್ಥ್ಯ ಹೊಂದಿದೆ.
ಇವರ ಬಳಿ ಇರುವ ಮೇರಿನೋ ಕುರಿ ಮರಿಗಳು ಮೂರು ತಿಂಗಳಿಗೆ 25 ರಿಂದ 30 ಕೆಜಿ ತೂಕ ಬರುತ್ತದೆ ಈ ಕುರಿಗಳನ್ನು ಇವರು ಗಂಡು ಕುರಿಗಳಿಗೆ ಒಂದು ಲಕ್ಷಕ್ಕೆ ಮಾರಾಟ ಮಾಡುತ್ತಾರೆ ಏಕೆಂದರೆ ಈ ಮರಿಗಳು ತಳಿಯ ಅಭಿವೃದ್ಧಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ ಗಂಡು ಕುರಿಯಿಂದ ಸ್ಥಳೀಯ ಕುರಿಗಳಿಗೆ ಕ್ರಾಸಿಂಗ್ ಮಾಡಿಸಿದರೆ ಹೆಚ್ಚಿನ ತಳಿ ಅಭಿವೃದ್ಧಿಯಾಗುತ್ತದೆ ಮತ್ತು ಕುರಿಯಲ್ಲಿ ತೂಕ ಹೆಚ್ಚಾಗುವುದರಿಂದ ರೈತರಿಗೆ ಹೆಚ್ಚಿನ ಆದಾಯ ದೊರೆಯುತ್ತದೆ.
ಈ ಮೇಲಿನ ತಳಿಯ ಕುರಿಯು ಒಂದು ಕೆಜಿಗೆ ಜೀವಂತ ಕುರಿ, 400 ರಿಂದ 450ಕ್ಕೆ ಮಾರಾಟ ಮಾಡಬಹುದು.ಈ ಮೇರಿನೋ ಕುರಿಗಳಿಗೆ ಇವರು ತಂದ ಮೊದಲ ದಿನಗಳಲ್ಲಿ ಕುರಿಗಳನ್ನು ಹೊರ ವಾತಾವರಣದಲ್ಲಿ ಬಿಟ್ಟು ಮಯಿಸಿದ್ದಾರೆ ನಂತರ ದಿನಗಳಲ್ಲಿ ಸೈಲೇಜ್ ರೂಢಿ ಮಾಡಿದ್ದಾರೆ ಸ್ವಲ್ಪ ದಿನಗಳ ಕಳೆದ ನಂತರ ಇಲ್ಲಿಯ ವಾತಾವರಣಕ್ಕೆ ಹೊಂದುಕೊಳ್ಳುತ್ತವೆ ಇವರು ಕುರಿಗಳಿಗೆ ಸೂಪರ್ ನೆಪಿಯಾರ್. ನುಗ್ಗೆ ಸೊಪ್ಪು ನೀಡಿರುತ್ತಾರೆ.ಜೊತೆಗೆ ಕುರಿಗಳಿಗೆ ಕೈ ತಿಂಡಿಯಾಗಿ ಕಡಲೆಕಾಯಿ ಹಿಂಡಿ. ಕಡಲೆ ಒಟ್ಟು ಜೋಳದ ಕಾಳು ಹುರಳಿ ಮತ್ತು ಕಡಿಮೆ ಬೆಲೆಗೆ ಸಿಗುವ ಬೆಳೆಗಳನ್ನು ಕುರಿಗಳಿಗೆ ನೀಡುತ್ತಾರೆ.
ಇವರು ಈಗಾಗಲೇ 8 ರಿಂದ 10 ಮೇರಿನೋ ಕುರಿ ಮರಿಗಳನ್ನು ಮಾರಾಟ ಮಾಡಿದ್ದಾರೆ ಸಣ್ಣ ರೈತರಿಗೆ ರಿಯಾಯಿತಿ ದರದಲ್ಲಿ ರೈತರಿಗೆ ಕುರಿಗಳನ್ನು ನೀಡಿ ತಳಿಯ ಅಭಿವೃದ್ಧಿ ಪಡಿಸಲು ಸಹಾಯಕವಾಗಿದ್ದಾರೆ.
ಯುವ ರೈತ ರಾಹುಲ್ ರವರ ಈ ಕುರಿ ಸಾಕಾಣಿಕೆಯ ಉದ್ದೇಶ ಈ ಮೇರಿನೋ ಜಾತಿಯ ಕುರಿ ಹೆಚ್ಚು ಗಾತ್ರ ಬರುವುದಾಗಿದ್ದು ರೈತರು ಹೆಚ್ಚಿನ ಲಾಭಗಳಿಸಿ ಮತ್ತು ತಳಿ ಹೆಚ್ಚು ಅಭಿವೃದ್ಧಿ ಪಡಿಸುವುದು ಇವರ ಉದ್ದೇಶವಾಗಿದೆ.
Hello my loved one! I want to say that this post is awesome, great written and include approximately all significant infos. I¦d like to see extra posts like this .
naturally like your website but you need to check the spelling on quite a few of your posts. Many of them are rife with spelling problems and I in finding it very troublesome to inform the truth nevertheless I?¦ll certainly come back again.
You really make it seem so easy with your presentation but I find this topic to be actually something that I think I would never understand. It seems too complicated and very broad for me. I’m looking forward for your next post, I will try to get the hang of it!
Very interesting points you have mentioned, regards for putting up.