https://pagead2.googlesyndication.com/pagead/js/adsbygoogle.js?client=ca-pub-4722372128437229 ರಾಜಮುಡಿ ಭತ್ತದ ಬಗ್ಗೆ ಸಂಪೂರ್ಣ ಮಾಹಿತಿ. (Rajamudi paddy) -
ಕೃಷಿ

ರಾಜಮುಡಿ ಭತ್ತದ ಬಗ್ಗೆ ಸಂಪೂರ್ಣ ಮಾಹಿತಿ. (Rajamudi paddy)

ಈ ಭತ್ತವು ಹೆಚ್ಚಾಗಿ ಮೈಸೂರು ಮತ್ತು ಹಾಸನ ಜಿಲ್ಲೆಯಲ್ಲಿ ಬೆಳೆಯುವ ಸಾಂಪ್ರದಾಯಕ ಭತ್ತವಾಗಿದೆ.

  • ಈ ತಳಿಯೂ ಸಾಂಪ್ರದಾಯಕ ಭತ್ತ ವಾಗಿದ್ದು. ಈ ತಳಿಯು ತಲೆತಲೆಮಾರುಗಳಿಂದ ಬೆಳೆದು ಬಂದಂತಹ ಒಂದು ರೈತ ತಳಿಯಾಗಿದೆ.(Rajamudi paddy)
  • ಈ ಭತ್ತಕ್ಕೆ ರಾಜಮುಡಿ ಎಂದು ಹೆಸರು ಬಂದಿದ್ದು. ನಮ್ಮ ಪೂರ್ವಜರು ಈ ಭತ್ತವನ್ನು ಕಾಣಿಕೆಯಾಗಿ ಮೈಸೂರಿನ ರಾಜರಿಗೆ ಮುಡುಪಾಗಿ ರಾಜರಿಗೆ ಕೊಡುತ್ತಿದ್ದರು ಈಗಾಗಿ ಈ ಭತ್ತಕೆ ರಾಜಮುಡಿ ಎಂದು ಕರೆಯುತ್ತಾರೆ.
  • ಈ ತಳಿಯು ಅತಿ ಹೆಚ್ಚು ಎತ್ತರವಾಗಿ ಬೆಳೆಯುವ ತಳಿಯಾಗಿದ್ದು ಸಾವಯವ ಕೃಷಿಯಲ್ಲಿ ಬೆಳೆಯುವುದರಿಂದ ಹೆಚ್ಚು ಬೇಡಿಕೆ ಇದೆ.
  • ರಾಜಮುಡಿ ಭತ್ತದ ತಳಿಯು 140 ರಿಂದ 160 ದಿನಗಳ ಅವಧಿ ಬೇಕಾಗುತ್ತದೆ. ಇದು ದೀರ್ಘಾವಧಿಯ ಬೆಳೆ ಹೀಗಾಗಿ ತಳಿಯನ್ನು ಜೂನ್ ಅಥವಾ ಜುಲೈ ತಿಂಗಳಿನಲ್ಲಿ ನಾಟಿ ಮಾಡಬೇಕು.
  • ಈ ರಾಜಮುಡಿ ಭತ್ತವನ್ನು ಮುಂಗಾರು ಬೆಳೆಯಲ್ಲಿ ಮಾತ್ರ ಬೆಳೆಯಬೇಕು . ಬೇಸಿಗೆಯಲ್ಲಿ ಈ ತಳಿಯು ಬೆಳೆಯಬಾರದು ಏಕೆಂದರೆ ಈ ತಳಿಯು ಮಳೆಗಾಲದಲ್ಲಿ ಅಧಿಕ ಇಳುವರಿಯನ್ನು ನೀಡುತ್ತದೆ.
  • ರಾಜಮುಡಿ ಅಕ್ಕಿ ಒಂದು ಅಪರೂಪದ ಕೆಂಪಕ್ಕಿ ಆಗಿದ್ದು ಈ ಅಕ್ಕಿಗೆ ಬಾರಿ ಬೇಡಿಕೆ ಇದೆ.
  • ರಾಜಮುಡಿ ಭತ್ತದಲ್ಲಿ ಎರಡು ವಿಧ ಬಿಳಿ ಬಣ್ಣ ಮತ್ತು ಕೆಂಪು ಬಣ್ಣದ ಅಕ್ಕಿಗಳಿದ್ದು. ಅನ್ನ ಹೆಚ್ಚು ರುಚಿಕರವಾಗಿರುತ್ತದೆ
  • ಈ ಅಕ್ಕಿಯಲ್ಲಿ ನಾರಿನ ಅಂಶ ಹೆಚ್ಚಾಗಿದ್ದು. ಈ ಅಕ್ಕಿಯ ಪಾಲಿಶ್ ಕಡಿಮೆ ಪ್ರಮಾಣದಲ್ಲಿ ಮಾಡಿಸಬೇಕು. ಇದರಿಂದ ಅಕ್ಕಿಯಲ್ಲಿ ಐರನ್ ಜಿಂಕ್ ಕ್ಯಾಲ್ಸಿಯಂ ಹೆಚ್ಚಾಗಿ ದೊರೆಯುವುದರಿಂದ ಈ ಅಕ್ಕಿಯನ್ನು ಸೇವಿಸಿದರೆ ಆರೋಗ್ಯವಾಗಿರುತ್ತಾನೆ.
  • ಈ ಅಕ್ಕಿಯನ್ನು ಸೇವಿಸುವುದರಿಂದ ಮಾನವ ದೇಹ ತೂಕವನ್ನು ನಿಯಂತ್ರಣದಲ್ಲಿ ಇಡಬಹುದು ಹಾಗೂ ಈ ಅಕ್ಕಿ ಸೇವನೆಯಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ.

ನಮ್ಮ ಕರ್ನಾಟಕದ ತಳಿಯಾದ ರಾಜಮುಡಿ ತಳಿಯು ಮುಂದಿನ ದಿನಗಳಲ್ಲಿ ಸರ್ಕಾರವು ಹೆಚ್ಚಿನ ಅಭಿವೃದ್ಧಿ ಪಡಿಸಲಿ.

https://www.facebook.com/share/v/ke13oXYverpaAiWp/?mibextid=aF4ZvY

138 thoughts on “ರಾಜಮುಡಿ ಭತ್ತದ ಬಗ್ಗೆ ಸಂಪೂರ್ಣ ಮಾಹಿತಿ. (Rajamudi paddy)

Leave a Reply

Your email address will not be published. Required fields are marked *