ರೇಷ್ಮೆ ಕೃಷಿಯಲ್ಲಿ (Silk )ಅತ್ಯುತ್ತಮ ಸಾಧನೆ ಮಾಡಿದ ಹಿರಿಯ ವಿಜ್ಞಾನಿ ಡಾ ll ರಾಜೇಗೌಡರು.
ರಾಜೇಗೌಡರವರು ಶ್ರೀಮತಿ ಈರಾಜಮ್ಮಮತ್ತು ಶ್ರೀಯುತ ಕೃಷ್ಣಗೌಡ ರವರ ಜೇಷ್ಠ ಪುತ್ರನಾಗಿ 1969ರ ಜೂನ್ 19 ರಂದು ಹಾಸನ ಜಿಲ್ಲೆಯ.ಅರಕಲಗೂಡು ತಾಲ್ಲೂಕಿನ ಕಾಡನೂರಿನಲ್ಲಿ ಜನಿಸಿ, 1992ರಲ್ಲಿ ರೇಷ್ಮೆ ಕೃಷಿಯಲ್ಲಿ ಪದವಿಯನ್ನು, 1998 ರಲ್ಲಿ ರೇಷ್ಮೆಕೃಷಿಯಲ್ಲಿ(Silk) ಸಾತ್ಮಕ ಪದವಿಯನ್ನು ಹಾಗೂ 2001 ರಲ್ಲಿ ರೇಷ್ಮೆ ಕೃಷಿಯಲ್ಲಿ ಡಾಕ್ಟೋರಲ್ ಪದವಿಯನ್ನು ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ.ಯಿಂದ ಪಡೆದಿದ್ದಾರೆ.
ಇವರು ತಮ್ಮ ವೃತ್ತಿ ಜೀವನವನ್ನು ರೇಷ್ಮೆಕೃಷಿಯಲ್ಲಿ ವಿಷಯ ತಜ್ಞರಾಗಿ 2007 ರಲ್ಲಿ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಮಂಡ್ಯದಿಂದ ಪ್ರಾರಂಭಿಸಿ 10 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿ, 2016 ರ ಡಿಸೆಂಬರ್ ನಿಂದ ಪ್ರಸುತ್ತ ದಿನದವರೆಗೂ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಕಂದಲಿ, ಹಾಸನದ ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಹಾಗೂ 2021-22 ರಲ್ಲಿ ಪ್ರಾಧ್ಯಾಪಕರಾಗಿ ಬಡ್ತಿಯನ್ನು ಪಡೆದಿದ್ದಾರೆ.
ಶ್ರೀಯುತರು ಥಾಯ್‌ಲ್ಯಾಂಡ್‌ನ ಪೆಟ್ಟಾಬುನ್‌ನಲ್ಲಿ ಥಾಯ್ ರೇಷ್ಮೆಕೃಷಿಕರಿಗೆ ಚುಲ್-ಥಾಯ್ ರೇಷ್ಮೆ ಕೃಷಿ ತರಬೇತಿ ಕೇಂದ್ರದ ರೇಷ್ಮೆಕೃಷಿಯ ತರಬೇತುದಾರರಾಗಿ ಕಾರ್ಯನಿರ್ವಹಿಸಿವುದರ ಜೊತೆಗೆ ಅನೇಕ ದೇಶಗಳಲ್ಲಿ ವಿವಿಧ ಅಂತರ ರಾಷ್ಟ್ರೀಯ ಸಮ್ಮೇಳನಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿರುತ್ತಾರೆ.
ಇವರು ತಮ್ಮ ವೃತ್ತಿ ಜೀವನದ 16 ವರ್ಷಗಳ ಸುದೀರ್ಘ ಸೇವೆಯನ್ನು ವಿಸ್ತರಣಾ ಚಟುವಟಿಕೆಗಳಿಗೆ ಮುಡುಪಾಗಿಟ್ಟಿದ್ದು ಆನೇಕ ಮಹತ್ವದ ಕೊಡುಗೆಗಳನ್ನು ರೈತ ಸಮುದಾಯಕ್ಕೆ ನೀಡಿದ್ದು ಅದರಲ್ಲಿ ಪ್ರಮುಖವಾಗಿ ವಿಜ್ಞಾನಿಗಳು ಮತ್ತು ರೈತರ ಪಾಲುದಾರಿಕೆಯಲ್ಲಿ ಸಂಶೋಧನೆ ಕೈಗೊಂಡು ಆರು ರೇಷ್ಮೆ ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸಿ.
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಸುಧಾರಿತ ಬೇಸಾಯ ಪದ್ಧತಿಗಳ ಕೈಪಿಡಿಗೆ ಸೇರಿಸಿದ್ದಲ್ಲದೇ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕಡಿಮೆ ವೆಚ್ಚದ ರೇಷ್ಮೆಹುಳು ಸಾಕಣಿಕೆ ಮನೆಯನ್ನು ನಿರ್ಮಿಸಿ ರಾಜ್ಯ ರೇಷ್ಮೆ ಇಲಾಖೆ ಅಂಗೀಕಾರ ಪಡೆದು, ಈ ಮಾದರಿಯನ್ನು ರಾಜ್ಯಾದ್ಯಂತ ಪ್ರಸರಣೆ ಮಾಡಿ ಮತ್ತು ರೈತರಿಗೆ ಈ ಮನೆಯನ್ನು ನಿರ್ಮಿಸಲು ಪ್ರೋತ್ಸಾಹ ಧನವನ್ನು ರೇಷ್ಮೆ ಇಲಾಖೆಯ ಮೂಲಕ ನೀಡುವಂತೆ ಮಾಡುವುದರ ಜೊತೆಗೆ ರೇಷ್ಮೆಕೃಷಿ ಆಧಾರಿತ ಸರಕು ಸಂಘವನ್ನು ಮಂಡ್ಯ ಜಿಲ್ಲೆಯ ಕಟ್ಟೆದೊಡ್ಡಿ ಗ್ರಾಮದಲ್ಲಿ ಸ್ಥಾಪಿಸಿ,
ರೈತರಿಗೆ ಬೇಕಾದ ಕೃಷಿ ಪರಿಕರಗಳನ್ನು ತಲುಪಿಸುವುದಲ್ಲದೇ, ರೈತರಿಗೆ ಹಣಕಾಸಿನ ಸಹಾಯ, ಬಡವರಿಗೆ ಉದ್ಯೋಗ ಸೃಷ್ಟಿ ಮತ್ತು ಗುಂಪು ಮಾರಟ ವ್ಯವಸ್ಥೆಯನ್ನು ಕಲ್ಪಸಿದ್ದಾರೆ.
ಡಾ| ರಾಜೇಗೌಡರವರು ಹಾಸನ ಜಿಲ್ಲೆಯಲ್ಲಿ ಆಲೂಗೆಡ್ಡೆ ಬೆಳೆಯಲ್ಲಿ ಉತ್ತಮ ಬಿತ್ತನೆ ಬೀಜದ ಕೊರತೆಯಿಂದ ಬಿತ್ತನೆ ಪ್ರದೇಶ ಕುಠಿಂತವಾಗಿದ್ದರಿಂದ ಸ್ಥಳೀಯವಾಗಿ ಬೀಜೋತ್ಪಾದನೆಗೆ ಉತ್ತೇಜಿಸಲು ನೂತನ ತಂತ್ರಜ್ಞಾನವಾದ ಕುಡಿಕಾಂಡ ಸಸಿಗಳ ತಂತ್ರಜ್ಞಾನವನ್ನು ದೇಶದಲ್ಲೇ ಪ್ರಪ್ರಥಮವಾಗಿ ಹಾಸನ ಜಿಲ್ಲೆಯ ರೈತರ ತಾಕಿನಲ್ಲಿ ಮೌಲ್ಯಮಾಪನ ಹಾಗೂ ಮುಂಚೂಣಿ ಪ್ರಾತ್ಯಕ್ಷಿಕೆಗಳ ಮೂಲಕ ರೈತರಿಗೆ ಪರಿಚಯಿಸಿದ್ದಾರೆ. ಇವರು ಕಳೆದ ಐದು ವರ್ಷಗಳ ಅವಧಿಯಲ್ಲಿ ಕೈಗೊಂಡ ವಿವಿಧ ವಿಸ್ತರಣಾ ಚಟುವಟಿಕೆಗಳಾದ
ತರಬೇತಿ ಕಾರ್ಯಕ್ರಮಗಳು (202), ಪ್ರಾಯೋಜಿತ ತರಬೇತಿ ಕಾರ್ಯಕ್ರಮಗಳು (43), ವಿಸ್ತರಣಾ ಕಾರ್ಯತ್ರರಿಗೆ ತರಬೇತಿ ಕಾರ್ಯಕ್ರಮಗಳು (24), ಕೌಶಲ್ಯಾಭಿವೃದ್ಧಿ ತರಬೇತಿಗಳು (09), ಕ್ಷೇತ್ರ ಪ್ರಯೋಗಗಳು (26), ಕ್ಷೇತ್ರಪರೀಕ್ಷೆಗಳು (21),
ಮುಂಚೂಣಿ ಪ್ರಾತ್ಯಕ್ಷಿಕೆಗಳು (100). ರೈತರ ಕ್ಷೇತ್ರ ಪಾಠಶಾಲೆ (02), ಕೃಷಿ ಡಿಪ್ಲೊಮೋ ಕೋರ್ಸ್(05), ಕೃಷಿ ಮೇಳ ಆಯೋಜನೆ (02), ಪತ್ರಿಕಾ ಗೋಷ್ಠಿ (12), ಶೈಕ್ಷಣಿಕ ಪ್ರವಾಸ (08), ಕೃಷಿ ಪರಿಕರ ಮಾರಾಟಗಾರರಿಗೆ ದೇಸಿ ಕೋರ್ಸ್‌ಗಳು (02), ಕ್ಷೇತ್ರೋತ್ಸವಗಳು (50), ವಿಶೇಷ ದಿನಗಳ ಆಚರಣೆ (59)
ಪದ್ಧತಿಪ್ರಾತ್ಯಕ್ಷಿಕೆ ಆಯೋಜನೆ (26), ಮಾಧ್ಯಮಗಳಲ್ಲಿ ಪ್ರಕಟಣೆ (95), ವಿಶ್ವವಿದ್ಯಾನಿಲಯದಿಂದ ನಿಯೋಜಿಸಿದ ಸಮಿತಿಗಳಲ್ಲಿ ಕಾರ್ಯನಿರ್ವಹಣೆ (14), ಗುಂಪು ಸಭೆ (68), ರೈತ-ವಿಜ್ಞಾನಿಗಳ ಸಂವಾದ ಕಾರ್ಯಕ್ರಮ
ಆರೋಗ್ಯ ಶಿಬಿರ (04), ಕೃಷಿಯ ಬಗ್ಗೆ ಸಿಡಿ / ಡಿ.ವಿ.ಡಿ ಅಭಿವೃದ್ಧಿ (06), ಕೋವಿಡ್ 19 ಸಮಯದಲ್ಲಿ ರೈತರ ಉತ್ಪನ್ನಗಳಿಗೆ ಮಾರುಕಟ್ಟೆ ಸಂಪರ್ಕ (12) ಇತ್ಯಾದಿಗಳ ಆಯೋಜನೆಯಲ್ಲಿ ಪ್ರಮುಖ ಪಾತ್ರವಹಿಸಿರುತ್ತಾರೆ.
ಸಾಂಪ್ರದಾಯಿಕ ರೇಷ್ಮೆ ಕೃಷಿ ಮಾಹಿತಿ.(Silk)
ರೇಷ್ಮೆ ಕೃಷಿ ಅನ್ನು ಸಾಮಾನ್ಯವಾಗಿ “ಜವಳಿಗಳ ರಾಣಿ” ಎಂದು ಕರೆಯಲಾಗುತ್ತದೆ, ಈ ಸೊಗಸಾದ ಬಟ್ಟೆಯ ಹಿಂದೆ ರೇಷ್ಮೆ ಕೃಷಿಯ ಸಂಕೀರ್ಣವಾದ ಪ್ರಕ್ರಿಯೆ ಇದೆ, ಇದನ್ನು ರೇಷ್ಮೆ ಕೃಷಿ ಎಂದೂ ಕರೆಯುತ್ತಾರೆ. ಪ್ರಾಚೀನ ಚೀನಾದಲ್ಲಿ ಹುಟ್ಟಿಕೊಂಡ ರೇಷ್ಮೆ ಕೃಷಿಯು ಸಂಪ್ರದಾಯ ಮತ್ತು ಆಧುನಿಕ ತಂತ್ರಗಳ ಸೂಕ್ಷ್ಮ ಮಿಶ್ರಣವಾಗಿ ವಿಕಸನಗೊಂಡಿತು ಇದೆ ರೇಷ್ಮೆ ಕೃಷಿ.
ರೇಷ್ಮೆ ಹುಳು ಜೀವನಚಕ್ರ:
ರೇಷ್ಮೆ ಕೃಷಿಯು ರೇಷ್ಮೆ ಹುಳು ಬಾಂಬಿಕ್ಸ್ ಮೋರಿಯ ಪಳಗಿಸುವಿಕೆಯ ಸುತ್ತ ಸುತ್ತುತ್ತದೆ. ರೇಷ್ಮೆ ಹುಳುವಿನ ಜೀವನಚಕ್ರವು ನಾಲ್ಕು ಮುಖ್ಯ ಹಂತಗಳನ್ನು ಒಳಗೊಂಡಿದೆ: ಮೊಟ್ಟೆ, ಲಾರ್ವಾ , ಪ್ಯೂಪಾ ಮತ್ತು ವಯಸ್ಕ ಚಿಟ್ಟೆ. ರೇಷ್ಮೆ ಹುಳುಗಳ ಮೊಟ್ಟೆಗಳನ್ನು ಎಚ್ಚರಿಕೆಯಿಂದ ಕಾವು ಮಾಡುವುದರೊಂದಿಗೆ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ. ಮೊಟ್ಟೆಯೊಡೆದ ನಂತರ, ಲಾರ್ವಾಗಳಿಗೆ ಹಿಪ್ಪುನೇರಳೆ ಎಲೆಗಳ ಆಹಾರವನ್ನು ನೀಡಲಾಗುತ್ತದೆ, ಏಕೆಂದರೆ ಈ ಎಲೆಗಳು ರೇಷ್ಮೆ ಹುಳುಗಳು ಅಭಿವೃದ್ಧಿ ಹೊಂದಲು ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತವೆ.
ರೇಷ್ಮೆ ಹುಳುಗಳು ಬೆಳೆದಂತೆ, ವಿಶೇಷ ಗ್ರಂಥಿಗಳಿಂದ ಉತ್ಪತ್ತಿಯಾಗುವ ರೇಷ್ಮೆ ಎಳೆಗಳನ್ನು ಬಳಸಿಕೊಂಡು ತಮ್ಮ ಸುತ್ತಲೂ ರಕ್ಷಣಾತ್ಮಕ ಕೋಕೂನ್ ಅನ್ನು ತಿರುಗಿಸುತ್ತವೆ. ಈ ಕೋಕೂನ್ ರೇಷ್ಮೆ ಉತ್ಪಾದನೆಗೆ ಕಚ್ಚಾ ವಸ್ತುವಾಗಿ ಕಾರ್ಯನಿರ್ವಹಿಸುತ್ತದೆ. ಆದಾಗ್ಯೂ, ಸೂಕ್ಷ್ಮವಾದ ನಾರುಗಳಿಗೆ ಹಾನಿಯಾಗದಂತೆ ರೇಷ್ಮೆ ಕೊಯ್ಲು ಮಾಡಲು, ರೈತರು ರೇಷ್ಮೆ ಎಳೆಗಳನ್ನು ಮುರಿಯದೆ ಎಚ್ಚರಿಕೆಯಿಂದ ಕೋಕೂನ್ ಅನ್ನು ಬಿಚ್ಚಬೇಕು.
ಕೋಕೂನ್ ಕೊಯ್ಲು ಮತ್ತು ರೇಷ್ಮೆ ಹೊರತೆಗೆಯುವಿಕೆ
ರೇಷ್ಮೆ ಕೋಕೂನ್‌ಗಳ ಕೊಯ್ಲು ಒಂದು ನಿಖರವಾದ ಪ್ರಕ್ರಿಯೆಯಾಗಿದ್ದು ಅದು ನಿಖರತೆ ಮತ್ತು ಕೌಶಲ್ಯದ ಅಗತ್ಯವಿರುತ್ತದೆ. ರೇಷ್ಮೆ ಹುಳು ತನ್ನ ಪ್ಯೂಪಲ್ ಹಂತವನ್ನು ಪೂರ್ಣಗೊಳಿಸುವವರೆಗೆ ಮತ್ತು ಕೋಕೂನ್ ಸಂಪೂರ್ಣವಾಗಿ ರೂಪುಗೊಳ್ಳುವವರೆಗೆ ರೈತರು ಸಾಮಾನ್ಯವಾಗಿ ಕಾಯುತ್ತಾರೆ. ಈ ಹಂತದಲ್ಲಿ, ರೇಷ್ಮೆ ಎಳೆಗಳನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳುವ ನೈಸರ್ಗಿಕ ಪ್ರೋಟೀನ್ ಸೆರಿಸಿನ್ ಅನ್ನು ಮೃದುಗೊಳಿಸಲು ಕೋಕೂನ್ ಅನ್ನು ಎಚ್ಚರಿಕೆಯಿಂದ ಕುದಿಸಲಾಗುತ್ತದೆ ಅಥವಾ ಆವಿಯಲ್ಲಿ ಬೇಯಿಸಲಾಗುತ್ತದೆ.
ಮೃದುವಾದ ನಂತರ, ರೇಷ್ಮೆ ಎಳೆಗಳನ್ನು ಬಿಡಿಸುವ ಸೂಕ್ಷ್ಮ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ. ನುರಿತ ಕುಶಲಕರ್ಮಿಗಳು, ಸಾಮಾನ್ಯವಾಗಿ ಮಹಿಳೆಯರು, ರೀಲ್‌ಗಳು ಮತ್ತು ಸ್ಪಿಂಡಲ್‌ಗಳಂತಹ ಸರಳ ಸಾಧನಗಳನ್ನು ಬಳಸಿಕೊಂಡು ಎಳೆಗಳನ್ನು ಎಚ್ಚರಿಕೆಯಿಂದ ಬಿಚ್ಚುತ್ತಾರೆ. ಪರಿಣಾಮವಾಗಿ ಉದ್ದವಾದ ರೇಷ್ಮೆ ಎಳೆಗಳನ್ನು ನಂತರ ಒಟ್ಟಿಗೆ ತಿರುಗಿಸಿ ನೇಯ್ಗೆ ಸಿದ್ಧವಾದ ನೂಲು ರೂಪಿಸಲಾಗುತ್ತದೆ.
ರೇಷ್ಮೆ ಕೃಷಿಯಲ್ಲಿ ಆಧುನಿಕ ಆವಿಷ್ಕಾರಗಳು
ಸಾಂಪ್ರದಾಯಿಕ ರೇಷ್ಮೆ ಕೃಷಿ ವಿಧಾನಗಳು ಅನೇಕ ಪ್ರದೇಶಗಳಲ್ಲಿ ಆಳವಾಗಿ ಬೇರೂರಿದೆ, ಆಧುನಿಕ ಆವಿಷ್ಕಾರಗಳು ರೇಷ್ಮೆ ಕೃಷಿ ದಕ್ಷತೆಯನ್ನು ಗಮನಾರ್ಹವಾಗಿ ಹೆಚ್ಚಿಸಿವೆ. ಹಿಪ್ಪುನೇರಳೆ ಕೃಷಿ, ರೋಗ ನಿರ್ವಹಣೆ ಮತ್ತು ಸಂತಾನೋತ್ಪತ್ತಿ ತಂತ್ರಗಳಲ್ಲಿನ ಪ್ರಗತಿಗಳು ರೇಷ್ಮೆ ಫಾರ್ಮ್‌ಗಳ ಅಭಿವೃದ್ಧಿಗೆ ಕಾರಣವಾಗಿವೆ, ಇದು ಸುಧಾರಿತ ಗುಣಮಟ್ಟದೊಂದಿಗೆ ಹೆಚ್ಚಿನ ಪ್ರಮಾಣದ ರೇಷ್ಮೆಯನ್ನು ಉತ್ಪಾದಿಸಬಹುದು.
ಶ್ರೀಯುತರು ತಂತ್ರಜ್ಞಾನಗಳನ್ನು ಹೆಚ್ಚಿನ ರೈತರಿಗೆ ತಲುಪಿಸಲು ವೈಜ್ಞಾನಿಕ ಲೇಖನಗಳು (10), ಸಂಶೋಧನಾ ಟಿಪ್ಪಣಿಗಳು (07), ಜನಪ್ರಿಯ ಲೇಖನಗಳು (92), ಕಿರು ಹೊತ್ತಿಗೆ (26), ತರಬೇತಿ ಕೈಪಿಡಿ (06), ಪುಸ್ತಕಗಳು (29), ರೇಡಿಯೋ ಸಂದರ್ಶನ (14), ಸುದ್ದಿ ಪತ್ರ (15) ಗಳನ್ನು ಪ್ರಕಟಿಸಿರುತ್ತಾರೆ.
ಇದರ ಜೊತೆಗೆ 07ಬಾಹ್ಯ ಪ್ರಾಯೋಜಿತ ಸಂಶೋಧನಾ ಪ್ರಾಯೋಜನೆಗಳು ಮತ್ತು 20 ಪರೀಕ್ಷಾ ಪ್ರಯೋಗಗಳನ್ನು ಅನುಷ್ಠಾನಗೊಳಿಸಿರುತ್ತಾರೆ. ಮುಂದುವರೆದು ಇವರು ಇದುವರೆಗೂ ಎಂಟು ಸ್ನಾತಕ ವಿದ್ಯಾರ್ಥಿಗಳಿಗೆ ಸಲಹಾ ಸಮಿತಿಯ ಪ್ರದಾನ ಸಲಹೆಗಾರರು ಹಾಗೂ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಈ ಎಲ್ಲಾ ಸೇವೆಯನ್ನು ಪರಿಗಣಿಸಿ 2016 ರಲ್ಲಿ ಕನ್ನಡ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮೆಯಿಂದ ಅತ್ಯುತ್ತಮ ಕೃಷಿ ಕನ್ನಡ ಪ್ರಕಟಣೆ ಪ್ರಶಸ್ತಿ, 2016 ರಲ್ಲಿ ಕೃಷಿ ವಿಜ್ಞಾನ ನಿಯತಕಾಲಿಕೆಯಲ್ಲಿ ಅತ್ಯುತ್ತಮ ವೈಜ್ಞಾನಿಕ ಲೇಖನಕ್ಕಾಗಿ ಕೃಷಿ ವಿಶ್ವ ವಿದ್ಯಾನಿಲಯ, ಬೆಂಗಳೂರಿನಿಂದ ಡಾ| ಆರ್. ದ್ವಾರಕಿನಾಥ್ ಅತ್ಯುತ್ತಮ ಲೇಖನ ಪ್ರಶಸ್ತಿ, 2017 ರಲ್ಲಿ ಐಸಿಎಆರ್‌ನ ವಾರ್ಷಿಕ ವರದಿ ಪರಿಶೀಲನಾ ಕಾರ್ಯಗಾರದಲ್ಲಿ ಅತ್ಯುತ್ತಮ ವರದಿ ಪ್ರಸುತ್ತಿ ಪ್ರಶಸ್ತಿ, 2022ರಲ್ಲಿ ಕೃಷಿ ವಿಶ್ವ ವಿದ್ಯಾನಿಲಯದ ಅಲ್ಯೂಮಿನಿ ಅಸೋಸಿಯೇಷನ್ ನಿಂದ ಡಾ|| ಆರ್. ದ್ವಾರಕಿನಾಥ್ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿಗಳನ್ನು ಪಡೆದಿರುತ್ತಾರೆ.