ರೈತರಿಗೆ ಕೊಟ್ಟಿದ್ದ ವಕ್ಫ್ ನೋಟಿಸ್ ವಾಪಾಸ್. ಅಧಿಕಾರುಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ.
ವಕ್ಫ್ ಮಂಡಳಿಯಿಂದ ರೈತರಿಗೆ ನೀಡಲಾದ ನೋಟಿಸನ್ನು ತಕ್ಷಣ ಹಿಂಪಡೆಯಬೇಕು, ಮ್ಯುಟೇಷನ್ ಪ್ರಕ್ರಿಯೆಯನ್ನು ತಕ್ಷಣ ಸ್ಥಗಿತಗೊಳಿಸಿ, ಸದರಿ ಜಮೀನುಗಳಲ್ಲಿ ವ್ಯವಸಾಯ ಮಾಡುತ್ತಿರುವ ರೈತರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಸಿಎಂ ಖುದ್ದು ನಿರ್ದೇಶಿಸಿದ್ದಾರೆ.