https://pagead2.googlesyndication.com/pagead/js/adsbygoogle.js?client=ca-pub-4722372128437229 ಸಮಗ್ರ ಕೃಷಿ ಜೊತೆಗೆ "ರಾಮ್ ಗೋಲ್ಡ್" ಮಾವಿನ ಬ್ರಾಂಡ್..! -
ಕೃಷಿ

ಸಮಗ್ರ ಕೃಷಿ ಜೊತೆಗೆ “ರಾಮ್ ಗೋಲ್ಡ್” ಮಾವಿನ ಬ್ರಾಂಡ್..!

ರಾಮನಗರ ಜಿಲ್ಲೆ ಮತ್ತು ತಾಲ್ಲೂಕಿನ ಬಿಳಗುಂಬ ಗ್ರಾಮದ ಶ್ರೀ ವಾಸುರವರು ಪ್ರಗತಿಪರ ರೈತರಾಗಿದ್ದು ಸಮಗ್ರ ಕೃಷಿ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ.

ಬಿ.ಸಿ.ವಾಸುರವರು ಕ್ಯಾನ್ ಬ್ಯಾಂಕ್ ರಾಜ್ಯಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ ಪುರಸ್ಕೃತರು.

ಹಿಂದಿನ ದಿನಗಳಲ್ಲಿ ರೈತರು ಸಮಗ್ರ ಕೃಷಿಯ ಬಗ್ಗೆ ಹೆಚ್ಚಾಗಿ ಮಾಹಿತಿ ಇಲ್ಲದ ಕಾರಣ ರೈತರು ತಮ್ಮ ಎಲ್ಲಾ ಭೂಮಿಯಲ್ಲಿ ಒಂದೇ ರೀತಿಯ ಬೆಳೆಗಳನ್ನು ಬೆಳೆಯುತ್ತಿದ್ದರು.ಆ ಬೆಳೆಗಳಿಗೆ ಸರಿಯಾದ ಪ್ರಮಾಣದ ಮಳೆ ಮತ್ತು ನೀರಿನ ಕೊರತೆಯಿಂದ ಮತ್ತು ಬೆಳೆಗೆ ರೋಗ ಬಂದಾಗ ಒಂದೇ ಬೆಳೆಯಾಗಿರುವುದ ರಿಂದ ಹೆಚ್ಚು ನಷ್ಟವನ್ನು ಅನುಭವಿಸುತ್ತಿದ್ದರು.

ಮತ್ತು ಅಕಾಲಿಕ ಮಳೆಯಿಂದ ಬರಗಾಲ ಬಂದು ಬೆಳೆ ನಷ್ಟವಾಗುತ್ತಿತ್ತು.ಹಾಗೂ ವ್ಯವಸಾಯದಲ್ಲಿ ಪ್ರಾಚೀನ ಶೈಲಿಯ ವ್ಯವಸಾಯ ಮಾಡಿ ಸರಿಯಾದ ಸಮಯಕ್ಕೆ ಬೆಳೆದ ಬೆಳೆ ಬಾರದೆ ಮತ್ತು ಬೆಳಗ್ಗೆ ಮಾರುಕಟ್ಟೆಯಲ್ಲಿ ಮೌಲ್ಯ ಎಷ್ಟಿದೆ ಎಂದು ತಿಳಿಯದೆ ಮಧ್ಯವರ್ತಿಗಳ ಕೈಗೆ ತಮ್ಮ ಬೆಳೆಗಳನ್ನು ಕೇಳಿದಷ್ಟು ರೇಟಿಗೆ ಕೊಟ್ಟು ಬಿಡುತ್ತಿದ್ದರು.

ಈ ರೀತಿ ಹೆಚ್ಚು ನಷ್ಟವಾಗುತ್ತಿರುವುದರಿಂದ ರೈತರು ವ್ಯವಸಾಯ ದಿಂದ ದೂರವಾಗಿ ನಗರ ಪ್ರದೇಶದ ಕಡೆಗೆ ಹೊಲಸೆ ಹೋಗುತ್ತಿದ್ದರು.

ಇತ್ತೀಚಿನ ದಿನಗಳಲ್ಲಿ ಕೃಷಿಯಲ್ಲಿ ವಿಜ್ಞಾನ. ತಂತ್ರಜ್ಞಾನ. ಹೆಚ್ಚಾಗಿ ಬಳಕೆಯಾಗಿದ್ದು ರೈತರು ತಾವು ಇರುವ ಸ್ಥಳದಿಂದಲೇ ಮೊಬೈಲ್ನಲ್ಲಿ ಮಾರುಕಟ್ಟೆಯ ದರದ ಬಗ್ಗೆ ತಿಳಿದುಕೊಂಡು ಹೆಚ್ಚಿನ ಲಾಭ ಬರುವ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಅಧಿಕ ಲಾಭಗಳಿಸುತ್ತಿದ್ದರೆ.

ರೈತರು ಏಕ ಬೆಳೆ ಪದ್ಧತಿಯನ್ನು ಅನುಸರಿಸುತ್ತಿದು ಇತ್ತೀಚಿನ ದಿನಗಳಲ್ಲಿ ಶೈಕ್ಷಣಿಕ ಕ್ಷೇತ್ರ ವಿಜ್ಞಾನ ತಂತ್ರಜ್ಞಾನ ಯಂತ್ರೋಪಕರಣಗಳ ಹೆಚ್ಚು ಅಭಿವೃದ್ಧಿಯಿಂದ ರೈತರು ತಮ್ಮ ಭೂಮಿಯಲ್ಲಿ ವಿವಿಧ ರೀತಿಯ ಕೃಷಿ ಮಾಡಿ (ಸಮಗ್ರ ಕೃಷಿ) ಮಾಡಿ ಒಂದಕ್ಕಿಂತ ಹೆಚ್ಚು ಬೆಳೆಗಳನ್ನು ಬೆಳೆದು ಹೆಚ್ಚಿನ ಆದಾಯ ಪಡೆದು ನೆಮ್ಮದಿ ಜೀವನವನ್ನು ಸಾಗಿಸುತ್ತಿದ್ದಾರೆ.

ರಾಮನಗರ ಜಿಲ್ಲೆ ಮತ್ತು ತಾಲ್ಲೂಕಿನ ಬಿಳಗುಂಬ ಗ್ರಾಮದ ಶ್ರೀ ವಾಸುರವರು ಪ್ರಗತಿಪರ ರೈತರಾಗಿದ್ದು ಒಟ್ಟು 8.0 ಎಕರೆ ಜಮೀನನ್ನು ಹೊಂದಿದ್ದಾರೆ. ಇವರು ಕೃಷಿ, ತೋಟಗಾರಿಕೆ, ರೇಷ್ಮೆ ಕೃಷಿ, ಅರಣ್ಯ ಕೃಷಿ, ಹೈನುಗಾರಿಕೆ, ಕುರಿ, ಮೇಕೆ, ಕೋಳಿ, ಮೀನು, ಜೇನು ಸಾಕಣೆಯಲ್ಲಿ ತೊಡಗಿಸಿಕೊಂಡು ಸಮಗ್ರ ಕೃಷಿ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ.

ಶ್ರೀ ವಾಸುರವರ ಸಮಗ್ರ ಕೃಷಿ ಪದ್ಧತಿಯ ಬಗ್ಗೆ ಮಾಹಿತಿ

ರಾಮನಗರ ಜಿಲ್ಲೆ ಮತ್ತು ತಾಲ್ಲೂಕಿನ ಬಿಳಗುಂಬ ಗ್ರಾಮದ ಶ್ರೀ ವಾಸುರವರು ಪ್ರಗತಿಪರ ರೈತರಾಗಿದ್ದು ಒಟ್ಟು 8.0 ಎಕರೆ ಜಮೀನನ್ನು ಹೊಂದಿದ್ದಾರೆ. ಇವರು ಕೃಷಿ, ತೋಟಗಾರಿಕೆ, ರೇಷ್ಮೆ ಕೃಷಿ, ಅರಣ್ಯ ಕೃಷಿ, ಹೈನುಗಾರಿಕೆ, ಕುರಿ, ಮೇಕೆ, ಕೋಳಿ, ಮೀನು, ಜೇನು ಸಾಕಣೆಯಲ್ಲಿ ತೊಡಗಿಸಿಕೊಂಡು ಸಮಗ್ರ ಕೃಷಿ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ.

ಇವರು ತಮ್ಮ ಜಮೀನಿನಲ್ಲಿ ಕೃಷಿ ಬೆಳೆಗಳಾದ ರಾಗಿ, ಭತ್ತ, ಮುಸುಕಿನ ಜೋಳ, ತೊಗರಿ, ಅವರೆ, ಶೇಂಗಾ ಬೆಳೆಗಳನ್ನು ಸುಧಾರಿತ ತಳಿಗಳನ್ನು ಬಳಸಿ ಬೆಳೆಯುತ್ತಿದ್ದಾರೆ. ಜೊತೆಗೆ ತೋಟಗಾರಿಕೆ ಬೆಳೆಗಳಾದ ಮಾವು, ತೆಂಗು ಮೂಸಂಬಿ, ನಿಂಬೆ, ದಾಳಿಂಬೆ, ಪಪ್ಪಾಯ, ಟೊಮೊಟೊ, ಕರಿಬೇವು, ನುಗ್ಗೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

ಇವರು ರೇಷ್ಮೆ ಕೃಷಿಗೆ ಒತ್ತು ನೀಡಿ ವರ್ಷಕ್ಕೆ ಸರಾಸರಿ 1000 ಮೊಟ್ಟೆ ರೇಷ್ಮೆಹುಳುಗಳ ಸಾಕಣೆ ಮಾಡಿ ರೂ. 1.10 ಲಕ್ಷ ನಿವ್ವಳ ಆದಾಯ ಗಳಿಸುತ್ತಿದ್ದಾರೆ.

ಶ್ರೀಯುತರು ಅರಣ್ಯ ಕೃಷಿಯಲ್ಲಿ ತೇಗ, ಸಿಲ್ವರ್ ಓಕ್ ಮತ್ತು ಹೆಬ್ಬೇವು ಮರಗಳನ್ನು ಬದುಗಳ ಮೇಲೆ ಬೆಳೆಯುತ್ತಿದ್ದಾರೆ. ಜೊತೆಗೆ ಮೇವಿನ ಬೆಳೆಗಳಾದ ನೇಪಿಯರ್ ಹುಲ್ಲು, ಮುಸುಕಿನ ಜೋಳ ಮತ್ತು ಕುದುರೆ ಮೆಂತ್ಯ, ಅಗಸೆ, ಸುಬಾಬುಲ್ ಅನ್ನು ಬೆಳೆದು ಪಶುಸಂಗೋಪನೆಗಾಗಿ ಬಳಸುತ್ತಿದ್ದಾರೆ.

ಇವರು ಹಳ್ಳಿಕಾರು ಹಸು(2), ಕುರಿ(150), ಕೋಳಿ(1300) ಸಾಕಣೆ ಮಾಡುತ್ತಿದ್ದಾರೆ ಮತ್ತು ಕೃಷಿ ಹೊಂಡದಲ್ಲಿ ಮೀನು ಸಾಕಣೆ(2100) ಮಾಡುತ್ತಿದ್ದು 3 ಟನ್ ಮೀನು ಉತ್ಪಾದನೆಯನ್ನು ಮಾಡಿ ಅಧಿಕ ಲಾಭ ಪಡೆಯುತ್ತಿದ್ದಾರೆ.

ಅಲ್ಲದೆ ಇವರು ಜೇನು ಕೃಷಿಯನ್ನು ನಿರ್ವಹಿಸುತ್ತಿದ್ದು ಇವರು 4 ಜೇನು ಕುಟುಂಬಗಳನ್ನು ಸಾಕಣೆ ಮಾಡಿ ತೋಟಗಾರಿಕೆ ಬೆಳೆಗಳಲ್ಲಿ ಇಳುವರಿ ಹೆಚ್ಚಿಸಿಕೊಂಡಿದ್ದಾರೆ ಮತ್ತು ಮನೆ ಬಳಕೆಗಾಗಿ ಅಣಬೆ ಬೇಸಾಯವನ್ನು ಸಹ ಮಾಡುತ್ತಿದ್ದಾರೆ.

ವಾಸುರವರ ವಿಶೇಷತೆಯೆಂದರೆ ತಾವು ಬೆಳೆದ ಮಾವಿನ ಹಣ್ಣುಗಳನ್ನು ವಿಂಗಡಿಸಿ ‘ರಾಮ್‌ ಗೋಲ್ಡ್’ ಬ್ರಾಂಡ್ ಹೆಸರಿನ ಮೂಲಕ ಮಾರಾಟ ಮಾಡಿ ಹೆಸರುವಾಸಿಯಾಗಿದ್ದು ಅಧಿಕ ಆದಾಯ ಗಳಿಸುತ್ತಿದ್ದಾರೆ.

ಅಲ್ಲದೆ ಇವರು ಸಿರಿಧಾನ್ಯಗಳನ್ನು ಸಂಸ್ಕರಿಸಿ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ತಾವೇ ಮಾರಾಟ ಮಾಡುತ್ತಿದ್ದಾರೆ. ಒಣಬೇಸಾಯ ಹಾಗೂ ಮಣ್ಣು ಮತ್ತು ನೀರಿನ ಸಂರಕ್ಷಣೆಗೆ ಒತ್ತು ನೀಡುತ್ತಿದ್ದು,

ಇಳಿಜಾರಿಗೆ ಅಡ್ಡಲಾಗಿ ಬದುಗಳ ನಿರ್ಮಾಣ, ಬಸಿಗಾಲುವೆಗಳ ನಿರ್ಮಾಣ ಹಾಗೂ ಶಿಫಾರಸ್ಸಿತ ತಳಿಗಳನ್ನು ಬೆಳೆಯುತ್ತಿದ್ದು ಸರಿಯಾದ ಪ್ರಮಾಣದಲ್ಲಿ ಸಸಿಗಳ ಸಂಖ್ಯೆಯನ್ನು ಕಾಪಾಡಿಕೊಂಡಿದ್ದಾರೆ. ಅಲ್ಲದೆ ಮಣ್ಣು ಮತ್ತು ನೀರಿನ ಪರೀಕ್ಷೆ ಮಾಡಿಸಿ ಶಿಫಾರಸ್ಸಿನ ಪ್ರಕಾರ ಬೆಳೆಯನ್ನು ಬೆಳೆಯುತ್ತಿದ್ದಾರೆ.

ಶ್ರೀಯುತರು ಹನಿ ನೀರಾವರಿ ಮತ್ತು ತುಂತುರು ನೀರಾವರಿಯನ್ನುಅಳವಡಿಸಿಕೊಂಡು ನೀರಿನ ಸದ್ಬಳಕೆ ಮಾಡುತ್ತಿದ್ದಾರೆ. ಜೊತೆಗೆ ಕೃಷಿ ಬೆಳೆ ಪದ್ಧತಿಗಳಾದ ಏಕಬೆಳೆ, ಅಂತರ ಬೆಳೆ, ಮಿಶ್ರ ಬೆಳೆ ಪದ್ಧತಿಗಳನ್ನು ಅಳವಡಿಸಿಕೊಂಡು ಬೆಳೆ ವೈವಿದ್ಯತೆ ಕಾಪಾಡಿಕೊಂಡಿದ್ದಾರೆ.

ಜೊತೆಗೆ ಸಮಗ್ರ ಪೋಷಕಾಂಶ ನಿರ್ವಹಣೆಯಲ್ಲಿ ಕೊಟ್ಟಿಗೆ ಗೊಬ್ಬರ, ಎರೆಹುಳು ಗೊಬ್ಬರ, ಕಾಂಪೋಸ್ಟ್, ಜೀವಾಮೃತ, ಪಂಚಗವ್ಯ, ಹಸಿರೆಲೆ ಗೊಬ್ಬರ, ಲಘು ಪೋಷಕಾಂಶಗಳ ಮಿಶ್ರಣಗಳ ಜೊತೆಗೆ ರಸಗೊಬ್ಬರಗಳ ಮಿತ ಬಳಕೆಯಿಂದ ಖರ್ಚನ್ನು ಕಡಿಮೆ ಮಾಡಿ ಅಧಿಕ ಲಾಭವನ್ನು ಪಡೆಯುತ್ತಿದ್ದಾರೆ.

ವಾಸುರವರು ಸಮಗ್ರ ಕೀಟ ಮತ್ತು ರೋಗ ನಿರ್ವಹಣೆಯಲ್ಲಿ ಬೇವಿನ ಬೀಜದ ಕಷಾಯ, ಹಳದಿ ಅಂಟು ಪಟ್ಟಿ, ಮೋಹಕ ಬಲೆ, ಟ್ರೈಕೋಡರ್ಮ, ಸುಡೋಮಾನಸ್, ಪರತಂತ್ರ ಜೀವಿಗಳು, ಸಸ್ಯ ಸಂರಕ್ಷಣಾ ರಸಾಯನಿಕಗಳ ಸಮಗ್ರ ಬಳಕೆ ಮಾಡುತ್ತಿದ್ದಾರೆ.

ಇವರು ಸಾವಯವ ಕೃಷಿಯಲ್ಲಿ ಎರೆಹುಳು ಗೊಬ್ಬರದ ಬಳಕೆ, ಜೈವಿಕ ಗೊಬ್ಬರಗಳ ಬಳಕೆ ಮತ್ತು ಜೈವಿಕ ಪೀಡೆ ನಾಶಕಗಳನ್ನು ಉಪಯೋಗಿಸುತ್ತಿದ್ದಾರೆ. ಅಲ್ಲದೆ ಸಂಸ್ಕರಣೆ ಮತ್ತು ಮೌಲ್ಯವರ್ಧನೆಗೆ ಒತ್ತು ನೀಡಿರುವ ಇವರು 25 ಟನ್‌ಗೂ ಹೆಚ್ಚು ಸಿರಿಧಾನ್ಯಗಳನ್ನು ಮೌಲ್ಯವರ್ಧನೆ ಮಾಡಿ ಮಾರಾಟ ಮಾಡುತ್ತಿದ್ದಾರೆ ಹಾಗೂ ಅಧಿಕ ಲಾಭ ಪಡೆಯುತ್ತಿದ್ದಾರೆ.

ಶ್ರೀಯುತ ವಾಸು ರವರು ಕೃಷಿ. ವಿಜ್ಞಾನ. ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಮಾಹಿತಿ ಪಡೆದಿದ್ದಾರೆ

ಕೃಷಿ ವಿಜ್ಞಾನ ಕೇಂದ್ರದಿಂದ ನೀಡುವ ಬೆಳೆ ಪ್ರಾತ್ಯಕ್ಷಿತೆ ಹಾಗೂ ಕ್ಷೇತ್ರ ಪ್ರಯೋಗಗಳನ್ನು ತಮ್ಮ ಜಮೀನಿನಲ್ಲಿ ಅಳವಡಿಸಿಕೊಂಡಿದ್ದು, ರೇಡಿಯೋ ಮತ್ತು ದೂರದರ್ಶನದ ವಿವಿಧ ಕಾರ್ಯಕ್ರಮಗಳಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿರುವುದಲ್ಲದೆ,

ಅಭಿವೃದ್ಧಿ ಇಲಾಖೆಗಳ ತರಬೇತಿ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಸುಧಾರಿತ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.

ಇವರು ಮಾವು ಮತ್ತು ತೆಂಗು ಬೆಳೆಗಾರರ ಸಂಘ, ತೆಂಗು ಉತ್ಪಾದಕರ ಸಂಘ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ಸಂಘದ ಸದಸ್ಯರಿದ್ದು ಅಲ್ಲಿ ದೊರೆಯುವ ಸೌಲಭ್ಯಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಕೃಷಿಗೆ ಸಂಬಂಧಪಟ್ಟ ಪ್ರಕಟಣೆಗಳಾದ ಕೃಷಿ ಜಾಗರಣ, ಐಶ್ವರ್ಯ ಕೃಷಿ ಪತ್ರಿಕೆಗಳಿಗೆ ಚಂದದಾರಾಗಿದ್ದು ಅವುಗಳ ಸದುಪಯೋಗ ಪಡೆಯುತ್ತಿದ್ದಾರೆ.

ವಾಸುರವರು ಸಮೂಹ ಮಾಧ್ಯಮಗಳಾದ ಡಿ.ಡಿ.ಚಂದನ, ಉದಯ ಮತ್ತು ನ್ಯೂಸ್ 18ನಲ್ಲಿಸಂಪನ್ಮೂಲವ್ಯಕ್ತಿಯಾಗಿ ಸಕ್ರೀಯವಾಗಿ ಭಾಗವಹಿಸಿದ್ದಾರೆ.

ಶ್ರೀಯುತರು 2017-18ರಲ್ಲಿ ಕೃಷಿ ಇಲಾಖೆಯಿಂದ ರಾಜ್ಯಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ, 2016-17 ರಲ್ಲಿ ಕೃಷಿ ಇಲಾಖೆಯ ಜಿಲ್ಲಾ ಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ ಮತ್ತು 2019 ರಲ್ಲಿ ಜಿಲ್ಲಾ ಮಟ್ಟದ ವಿಜಯ ಕರ್ನಾಟಕ ಸೂಪರ್ ಸ್ಟಾರ್ ರೈತ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕೃಷಿ ವಿಜ್ಞಾನ ಕೇಂದ್ರ, ಕೃಷಿ ವಿಶ್ವವಿದ್ಯಾನಿಲಯ, ಕೃಷಿ ಇಲಾಖೆ, ಭಾರತೀಯ ತೋಟಗಾರಿಕೆ ಸಂಶೋಧನಾ ಕೇಂದ್ರಗಳ ವಿಸ್ತರಣಾ ಕಾರ್ಯಕರ್ತರ ಜೊತೆ ಸಕ್ರೀಯ ಸಂಪರ್ಕ ಹೊಂದಿದ್ದು, ಕೃಷಿ ಇಲಾಖೆ ಮತ್ತು ತೋಟಗಾರಿಕಾ ಇಲಾಖೆಯ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದು ತಂತ್ರಜ್ಞಾನಗಳ ಬಗ್ಗೆ ತಿಳಿದು ತಮ್ಮ ಜಮೀನಿನಲ್ಲಿ ಅಳವಡಿಸುವುದರ ಜೋತೆಗೆ ಇತರರಿಗೂ ತಿಳಿಸುತ್ತಾ ಮಾದರಿಯಾಗಿದ್ದಾರೆ.

Leave a Reply

Your email address will not be published. Required fields are marked *