https://pagead2.googlesyndication.com/pagead/js/adsbygoogle.js?client=ca-pub-4722372128437229 ಸಾವಯವ ಕೃಷಿಯ ಜೊತೆಗೆ ಸಾವಯವ ಬೆಲ್ಲ ತಯಾರಿಕೆ ಎಲ್ಲಿ ಯಶಸ್ವಿ ಯಾದ ರೈತ (Jaggery) -
ಕೃಷಿ

ಸಾವಯವ ಕೃಷಿಯ ಜೊತೆಗೆ ಸಾವಯವ ಬೆಲ್ಲ ತಯಾರಿಕೆ ಎಲ್ಲಿ ಯಶಸ್ವಿ ಯಾದ ರೈತ (Jaggery)

ಕೃಷ್ಣರವರು ತಮ್ಮ 24 ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಆಹಾರ ಬೆಳೆಗಳಾದ ಭತ್ತ, ರಾಗಿ, ಕಬ್ಬು, ಬಿಳಿಜೋಳ, ಸಾಮೆ, ನವಣೆ, ಕೊರಲೆ, ದ್ವಿದಳ ಧಾನ್ಯಗಳು ಬೆಳೆಯುತ್ತಿದ್ದಾರೆ.

ತೊಟಗಾರಿಕಾ ಬೆಳೆಗಳಾದ ಬಾಳೆ, ತೆಂಗು, ಅಡಿಕೆ. ಸಪೋಟ, ಕಿತ್ತಳೆ, ಹಲಸು, ನೇರಳೆ, ಸೀತಾಫಲ, ಬೆಳೆಗಳನ್ನು ಬೆಳೆಯುತ್ತಿದ್ದು, ಜೊತೆಗೆ ಜಮೀನಿನ ಸುತ್ತಾ ಬದುಗಳ ಮೇಲೆ ಆರಣ್ಯಕೃಷಿಗೆ ಒತ್ತು ನೀಡಿ ಹೆಬ್ಬೇವು, ತೇಗ, ಹುಲುಚಿ, ಮಹಾಗನಿ, ಆಲ, ಸಿಲ್ವರ್ ಓಕ್, ಬಾಗೆ, ಬೇವು, ಹೊಂಗೆ ಮರಗಳನ್ನು ಬೆಳೆದಿದ್ದು ಸುಸ್ಥಿರ ಆದಾಯ ಪಡೆಯುತ್ತಿದ್ದಾರೆ. (Jaggery)

ಅಲ್ಲದೇ ಇವರು ರೇಷ್ಮೆಕೃಷಿಯನ್ನು ಸಹಾ ಅಳವಡಿಸಿಕೊಂಡಿದ್ದು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ಜೊತೆಗೆ ಉಪಕಸುಬಾಗಿ ಹಸು, ಕುರಿ, ಕೋಳಿ, ಮೀನು ಸಾಕಣೆ ಮತ್ತು ಅಣಬೆ ಬೇಸಾಯದಿಂದಲೂ ಸಹಾ ನಿರಂತರ ಆದಾಯ ಗಳಿಸುತ್ತಿದ್ದಾರೆ.

ಮೇವಿನ ಪೂರೈಕೆಗಾಗಿ ಬಹುಕಟಾವಿನ ನೇಪಿಯರ್, ಶುಂಠಿ ಹುಲ್ಲು, ಕುದುರೆ ಮೆಂತೆ, ಅಪ್‌ಸೆಣಬು, ಜೋಳ, ಹುರುಳಿ, ಸೂಪ‌ರ್ ನೇಪಿಯರ್ ಹುಲ್ಲಿನ ಬೆಳೆಗಳನ್ನು ತಮ್ಮ ಜಮೀನಿನಲ್ಲಿಯೇ ಬೆಳೆದು ಪೂರೈಸುತ್ತಿದ್ದು ಖರ್ಚನ್ನು ಕಡಿಮೆ ಮಾಡುವುದಲ್ಲದೇ, ಸುಧಾರಿತ ತಾಂತ್ರಿಕತೆಯಾದ ಸೈಲೇಜ್ ಅನ್ನು ಮಾಡಿ ಬೇಸಿಗೆಯಲ್ಲೂ ಹಸಿ ಮೇವಿನ ಕೊರತೆಯನ್ನು ನೀಗಿಸಿಕೊಂಡಿದ್ದಾರೆ.

ಇವರು ಮಣ್ಣು ಮತ್ತು ನೀರು ಸಂರಕ್ಷಣೆಗಾಗಿ ಇಳಿಜಾರಿಗೆ ಅಡ್ಡಲಾಗಿ ಬದುಗಳು. ಸಮಪಾತಳಿ ಬದುಗಳು. ಇಳಿಜಾರಿಗೆ ಅಡ್ಡಲಾಗಿ ಉಳುಮೆ, ಬಸಿಗಾಲುವೆಗಳ ನಿರ್ಮಾಣ, ಮಾಗಿ ಉಳುಮೆ, ನೀರುಗಾಲುವೆ , ಬಸಿಗಾಲುವೆ ನಿರ್ಮಾಣ, ಕೆರೆಗೋಡನ್ನು ಮಣ್ಣಿಗೆ ಸೇರಿಸುವುದು, ಆಳವಾದ ಉಳುಮೆ, ಶಿಫಾರಸ್ಸಿತ ತಳಿಗಳನ್ನು ಉಪಯೋಗಿಸಿ ಸರಿಯಾದ ಪ್ರಮಾಣದಲ್ಲಿ ಸಸಿಗಳ ಸಂಖ್ಯೆಯನ್ನು ಕಾಪಾಡುವುದು,

ಬದುಗಳ ಮಧ್ಯೆ ಮಟ್ಟ ಮಾಡುವುದು. ಮೇವಿನ ಮರಗಳು, ಹಸಿರೆಲೆ ಮತ್ತು ಉರುವಲು ಮರಗಳನ್ನು ಬದುಗಳಲ್ಲಿ ಬೆಳೆಯುವುದರ ಜೊತೆಗೆ ಕೃಷಿಹೊಂಡವನ್ನು ನಿರ್ಮಿಸಿ ಹೆಚ್ಚಾದ ಮಳೆ ನೀರನ್ನು ಶೇಖರಿಸಿ ಬೆಳೆಗಳ ಸಂದಿಗ್ಧ ಹಂತಗಳಲ್ಲಿ ಪೂರಕ ನೀರಾವರಿಯಾಗಿ ಬಳಕೆ ಮಾಡುತ್ತಿದ್ದಾರೆ.

ಇವರು ಮಣ್ಣಿನ ಪರೀಕ್ಷೆ ಆಧಾರಿತ ಪೋಷಕಾಂಶಗಳ ನಿರ್ವಹಣೆ ಮಾಡುವುದರ ಜೊತೆಗೆ ಹನಿ ನೀರಾವರಿ ಪದ್ಧತಿಗಳನ್ನು ಅಳವಡಿಸಿ ನೀರಿನ ಸದ್ಬಳಕೆ ಮಾಡುತ್ತಿದ್ದಾರೆ.

ಇವರು ಸಾವಯವ ವಿಧಾನದಲ್ಲಿ ಅಲ್ಪಾವಧಿ ಬೆಳೆಗಳಾದ ಭತ್ತ ರಾಗಿ ಕಬ್ಬು ಮತ್ತು ಕಾಳು ಬೆಳೆಗಳನ್ನು ಬೆಳೆಯುತ್ತಾರೆ ಮತ್ತು ದೀರ್ಘಾವಧಿ ಬೆಳೆಗಳಾದ ತೆಂಗು ಅಡಿಕೆ ಹಣ್ಣಿನ ಮರಗಳನ್ನು ಬೆಳೆಸಿ ವಾರ್ಷಿಕ ಆದಾಯ ಪಡೆಯುತ್ತಿದ್ದಾರೆ ಜೊತೆಗೆ ಕೃಷಿಯಲ್ಲಿ ಆಧುನಿಕ ಯಂತ್ರಗಳ ಬಳಕೆಯಿಂದ ಕಡಿಮೆ ಕಾರ್ಮಿಕರ ಅವಲಂಬನೆಯನ್ನು ಕಡಿಮೆ ಮಾಡಿದ್ದಾರೆ, ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಿ ಮಳೆ ನೀರನ್ನು ಸಂಗ್ರಹಿಸಿ ಬೇಸಿಗೆ ಸಮಯದಲ್ಲಿ ಹೆಚ್ಚಾಗಿ ಬಳಕೆ ಮಾಡಿಕೊಂಡು ತಮ್ಮ ಎಲ್ಲಾ ಕೃಷಿಯನ್ನು ಮುಂದುವರೆಸುತ್ತಿದ್ದಾರೆ.

ಸಾವಯವ ಬೆಲ್ಲ ತಯಾರಿಕೆ (Jaggery)

ಇವರು ತಮ್ಮ ಜಮೀನಿನಲ್ಲಿ ಬೆಳೆದ ಕಬ್ಬನ್ನು ಕಟಾವು ಮಾಡಿ ತಮ್ಮ ಸ್ವಂತ ಅಲೆ ಮನೆಯಲ್ಲಿ ಅಚ್ಚು ಬೆಲ್ಲ ಉಂಡೆ ಬೆಲ್ಲ ಜಗ್ಗರಿ ( Jaggery)ಪುಡಿ ಬೆಲ್ಲವನ್ನು ಸಾವಯವ ವಿಧಾನದಲ್ಲಿ ಯಾವುದೇ ಕೆಮಿಕಲ್ ಬಳಸದೆ ಇವರು ಬೆಲ್ಲವನ್ನು ತಯಾರಿಸುತ್ತಾರೆ.

ಇವರು ಯಾವುದೇ ರಾಸಾಯನಿಕ ಬಳಸದೆ ಕಬ್ಬು ಬೆಳೆದು ಜೊತೆಗೆ ಬೆಲ್ಲ ತಯಾರಿಸುವಾಗ ಯಾವುದೇ ರಾಸಾಯನಿಕ ಬಳಸದೆ ಬೆಲ್ಲವನ್ನು ತಯಾರಿಸುತ್ತಾರೆ.

ಈ ರೀತಿಯ ಆರ್ಗ್ಯಾನಿಕ್ ಸಾವಯವ ಬೆಲ್ಲ ಬಳಸುವುದರಿಂದ ಆಗುವ ಅನುಕೂಲಗಳು

  • ಮನುಷ್ಯನ ದೇಹದಲ್ಲಿ ಜೀರ್ಣಾಂಗ ಕ್ರಿಯೆ ವ್ಯವಸ್ಥೆಯು ಚೆನ್ನಾಗಿರುತ್ತೆ.
  • ಮಲಬದ್ಧತೆ ನಿರ್ವಹಣೆಯಾಗುತ್ತದೆ ಗ್ಯಾಸ್ಟ್ರಿಕ್ ಸಮಸ್ಯೆ ನಿರ್ವಹಣೆಯಾಗುತ್ತದೆ ಮತ್ತು ಕೆಮ್ಮು ಕಫ ಕಡಿಮೆಯಾಗುತ್ತದೆ
  • ಈ ಬೆಲ್ಲ ಸೇವನೆಯಿಂದ ಮನುಷ್ಯನ ದೇಹದ ರಕ್ತವನ್ನು ಶುದ್ದಿ ಮಾಡುತ್ತದೆ .
  • ಜೊತೆಗೆ ದೇಹಕ್ಕೆ ಕ್ಯಾಲ್ಸಿಯಂ ಒದಗಿಸುತ್ತದೆ ಮೂಳೆಗಳು ಬಲಗೊಳ್ಳುತ್ತವೆ.
  • ಮತ್ತು ಈ ಬೆಲ್ಲವ ಆಯುರ್ವೇದಿಕ್ ಔಷಧಿಗಳಲ್ಲಿ ಬಳಸುತ್ತಾರೆ.
  • ಈ ಬೆಲ್ಲವೂ ಕ್ಯಾನ್ಸರ್ ರೋಗಿಗಳಿಗೆ ನೀಡುತ್ತಾರೆ ಈ ಸಾವಯವ ಬೆಲ್ಲವೂ ಹೆಚ್ಚು ಔಷಧೀಯ ಗುಣಲಕ್ಷಣಗಳನ್ನು ಹೊಂದಿದೆ.
  • ಈ ಬೆಲ್ಲವೋ ಒಂದು ದಿನಕ್ಕೆ ಸರಿಯಾದ ಪ್ರಮಾಣದಲ್ಲಿ ಸೇವಿಸಬೇಕು ಅತಿ ಹೆಚ್ಚಾಗಿ ಸೇವಿಸಬಾರದು.

ಇವರ ತಯಾರಿಸಿದ ಬೆಲ್ಲವನ್ನು ಸ್ಥಳೀಯರೇ ಬೆಲ್ಲವನ್ನು ಖರೀದಿಸುತ್ತಾರೆ ಮತ್ತು ಉಳಿದ ಬೆಲ್ಲವನ್ನು ಮಾರುಕಟ್ಟೆಗೆ ಮಾರಾಟ ಮಾಡುತ್ತಾರೆ ಇದರಿಂದ ಸಾವಯವ ಬೆಲ್ಲ ತಯಾರಿಸಿ ಹೆಚ್ಚಿನ ಆದಾಯ ಪಡೆಯುತ್ತಿದ್ದಾರೆ

ಕೃಷ್ಣರವರು ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಿದ್ದು ಪೋಷಕಾಂಶಗಳ ನಿರ್ವಹಣೆಗಾಗಿ ಕೊಟ್ಟಿಗೆ ಗೊಬ್ಬರ, ಕಾಂಪೋಸ್ಟ್, ಹಸಿರೆಲೆ ಗೊಬ್ಬರಗಳು, ಎರೆಗೊಬ್ಬರ, ಜೈವಿಕ ಅನಿಲ ಬೊಗಡು, ಕೆರೆಗೋಡು. ಜೈವಿಕ ಗೊಬ್ಬರಗಳು, ಜೀವಾಮೃತ, ಬೇವಿನ ಹಿಂಡಿ, ಹೊಂಗೆ ಹಿಂಡಿಯನ್ನು ಬಳಕೆ ಮಾಡುವುದರ

ಜೊತೆಗೆ ಸಮಗ್ರ ಪೀಡೆ ನಿರ್ವಹಣೆಗಾಗಿ ಬೇವಿನ ಎಣ್ಣೆ, ಹುಳಿ ಮಜ್ಜಿಗೆ, ಸುಣ್ಣ, ಮೋಹಕ ಬಲೆಗಳು, ಹಳದಿ ಅಂಟು ಪಟ್ಟಿಗಳು, ಜೈವಿಕ ಪೀಡೆನಾಶಕಗಳು, ಹಸುವಿನ ಗಂಜಲದ ಮಿಶ್ರಣವನ್ನು ಬಳಸುತ್ತಿದ್ದಾರೆ.

ಇವರು ಸುಧಾರಿತ ಕೃಷಿ ಉಪಕರಣ ಬಳಕೆಯಲ್ಲಿ ಟ್ರ್ಯಾಕ್ಟರ್, ಕಲ್ಟಿವೇಟರ್, ಚಾಪ್ ಕಟರ್, ಬುಶ್ ಕಟರ್, ರೀಪರ್ ಮತ್ತು ಸ್ಟೇಯರ್‌ಗಳನ್ನು ಬಳಸುತ್ತಿದ್ದು ಕೃಷಿ ಕಾರ್ಮಿಕರ ಅವಲಂಬನೆಯನ್ನು ಮಿತಗೊಳಿಸಿಕೊಂಡಿದ್ದಾರೆ.

ಇವರು ಧಾನ್ಯಗಳನ್ನು ಉಗ್ರಾಣ ಮತ್ತು ಕಣಜಗಳಲ್ಲಿ ಶೇಖರಿಸುವುದಲ್ಲದೇ ಮೌಲ್ಯವರ್ಧನೆಗೆ ಹೆಚ್ಚು ಒತ್ತು ನೀಡಿದ್ದು ಸಿರಿಧಾನ್ಯಗಳಿಂದ ಹುರಿ ಹುಂಡೆ, ಹುರಿಹಿಟ್ಟು, ಸರಿ ಪುಡಿ, ತೆಂಗಿನಿಂದ ಎಣ್ಣೆ ತೆಗೆದು ಮಾರಾಟ ಮಾಡುವುದು ಮತ್ತು ಮಿಟಾಯಿ ಇತ್ಯಾದಿಗಳನ್ನು ತಯಾರಿಸಿ ಮಾರಾಟ ಮಾಡುವುದರಿಂದಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ.

ಕೃಷ್ಣ ರವರು ತಮ್ಮ ತೋಟದಲ್ಲಿ ಬೆಳೆದ ತೆಂಗಿನ ಕಾಯಿಯನ್ನು ಬಳಸಿಕೊಂಡು ಮತ್ತು ಕೊಬ್ಬರಿ ಮಾಡಿ ತಮ್ಮ ಮನೆಯಲ್ಲಿ ಎಣ್ಣೆಯನ್ನು ತಯಾರಿಸುತ್ತಾರೆ ಅಡುಗೆ ಎಣ್ಣೆಯನ್ನು ತಯಾರಿಸಿ ಜೊತೆಗೆ ಕೊಬ್ಬರಿಯಿಂದ ವಿವಿಧ ಗಾಣದ ಮಿಠಾಯಿಯನ್ನು ತಯಾರಿಸಿ ಮಾರಾಟ ಮಾಡುತ್ತಾರೆ ಕೊಬ್ಬರಿ ಸಂಸ್ಕರಣೆಯಿಂದ ಹಿಂಡಿ ದೊರೆಯುತ್ತದೆ ಅದನ್ನು ತಮ್ಮ ಹಸುಗಳಿಗೆ ಮತ್ತು ಕುರಿಗಳಿಗೆ ನೀಡುತ್ತಾರೆ.

ಅಲ್ಲದೇ ರೇಡಿಯೋ ಮತ್ತು ದೂರದರ್ಶನದ ವಿವಿಧ ಕಾರ್ಯಕ್ರಮಗಳಲ್ಲಿ ಸಮಗ್ರ ಕೃಷಿ, ಸಾವಯವ ಕೃಷಿ, ಮೌಲ್ಯವರ್ಧನೆ ಮತ್ತು ಬೆಳೆಗಳ ಬೇಸಾಯದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡಿರುವುದಲ್ಲದೆ,

ಅಭಿವೃದ್ಧಿ ಇಲಾಖೆಗಳು ಮತ್ತು ಕೃಷಿ ವಿಜ್ಞಾನ ಕೇಂದ್ರದ ತರಬೇತಿ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಸುಧಾರಿತ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.

ಶ್ರೀಯುತರು ರೇಷ್ಮೆ ಉತ್ಪಾದಕರ ಸಂಘ, ಬಯಲು ಸೀಮೆ ಬೆಳೆಗಾರರ ಸಂಘ, ಸಹಜ ಸಮೃದ್ಧಿ ಸಂಘದ ಸದಸ್ಯರಾಗಿದ್ದು ಅಲ್ಲಿನ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಾವು ಬೆಳೆದ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವುದಲ್ಲದೇ ವಸ್ತುಪ್ರದರ್ಶನ, ಸಭೆ, ಸಮಾರಂಭಗಳಲ್ಲಿ ತಮ್ಮ ಮೌಲ್ಯವರ್ಧಿತ ಉತ್ಪನ್ನಗಳು, ಸಿರಿಧಾನ್ಯಗಳ ಪ್ರದರ್ಶನ ಮತ್ತು ಮಾರಾಟವನ್ನು ಮಾಡುತ್ತಿದ್ದಾರೆ.

ಇವರು ಅನ್ನದಾತ, ಶೂನ್ಯ ಬಂಡವಾಳ ಕೃಷಿ, ಕೃಷಿ ಭಾರತ್, ಶರದ್ ಕೃಷಿ ಎಂಬ ಕೃಷಿ ಪ್ರಕಟಣೆಗಳಿಗೆ ಚಂದದಾರಾಗಿದ್ದಾರೆ. ಇವರ ಈ ಎಲ್ಲಾ ಸಾಧನೆಗೆ 2013 ರಲ್ಲಿ ಜಿಲ್ಲಾ ಮಟ್ಟದ ಕನ್ನಡ ರಾಜೋತ್ಸವ ಪ್ರಶಸ್ತಿ, 2015-16ರ ರಾಜ್ಯ ಮಟ್ಟದ ಕೃಷಿ ಪಂಡಿತ ಪ್ರಶಸ್ತಿ, 2015 ರಲ್ಲಿ ರಾಜ್ಯ ಮಟ್ಟದ ಸಾವಯವ ಕೃಷಿ ಸಾಧಕ ಪ್ರಶಸ್ತಿಯನ್ನು ಆರ್ಟ್ ಆಫ್ ಲೀವಿಂಗ್, ಬೆಂಗಳೂರು ಸಂಸ್ಥೆಯಿಂದ, 2019 ರಲ್ಲಿ ರಾಜ್ಯ ಮಟ್ಟದ ಗ್ರಾಮೀಣ ಕುಟುಂಬ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಇವರು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು. ಅಭಿವೃದ್ಧಿ ಇಲಾಖೆಗಳ ಅಧಿಕಾರಿಗಳ ಜೊತೆ ನಿಕಟ ಸಂಪರ್ಕದಲ್ಲಿದ್ದು ಅಲ್ಲಿ ಸಿಗುವ ತಾಂತ್ರಿಕ ಮಾಹಿತಿ ಮತ್ತು ಇತರೆ ಸೌಲಭ್ಯಗಳನ್ನು ಪಡೆದು ತಮ್ಮ ಜಮೀನಿನಲ್ಲಿ ಅಳವಡಿಸಿಕೊಂಡು ಇತರೆ ರೈತರಿಗೂ ಅಳವಡಿಸಿಕೊಳ್ಳಲು ಪ್ರೇರೇಪಿಸುತ್ತಾ ಇತರರಿಗೆ ಮಾರ್ಗದರ್ಶಕರಾಗಿದ್ದಾರೆ.

Leave a Reply

Your email address will not be published. Required fields are marked *