https://pagead2.googlesyndication.com/pagead/js/adsbygoogle.js?client=ca-pub-4722372128437229 ಸಾವಯವ ಕೃಷಿಯ ಜೊತೆಗೆ Dairy ಫಾರ್ಮ್ ನಲ್ಲಿ ಯಶಸ್ವಿ -
ಕೃಷಿ

ಸಾವಯವ ಕೃಷಿಯ ಜೊತೆಗೆ Dairy ಫಾರ್ಮ್ ನಲ್ಲಿ ಯಶಸ್ವಿ

ಮುನೇಗೌಡರವರು ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಗ್ರಾಮದವರಾಗಿದ್ದು ತಮ್ಮ ಒಟ್ಟು 28 ಎಕರೆ ಜಮೀನಿನಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ ಕೃಷಿ, ಅರಣ್ಯ ಕೃಷಿ, ಹೈನುಗಾರಿಕೆ (Dairy). ಕುರಿ ಮತ್ತು ಕೋಳಿ ಸಾಕಣೆಯನ್ನು ಅಳವಡಿಸಿಕೊಂಡು ಯಶಸ್ವಿಯಾಗಿ ಸಮಗ್ರ ಕೃಷಿ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ.

ಕೃಷಿ ಬೆಳೆಗಳಾದ ರಾಗಿ, ಜೋಳ, ತೊಗರಿ, ಅವರೆ ಮತ್ತು ಕಡಲೆಯನ್ನು ವಿವಿಧ ಬೆಳೆ ಪದ್ಧತಿಗಳನ್ನು ಅನುಸರಿಸಿ ಬೆಳೆಯುತ್ತಿದ್ದಾರೆ. ಜೊತೆಗೆ ತೋಟಗಾರಿಕೆ ಬೆಳೆಗಳಾದ ಮಾವು, ದ್ರಾಕ್ಷಿ, ತೆಂಗು, ಹಲಸು, ಕೊತ್ತಂಬರಿ, ಮೆಂತ್ಯೆ ಸೊಪ್ಪನ್ನು ಆಧುನಿಕ ತಂತ್ರಜ್ಞಾನಗಳನ್ನು ಅನುಸರಿಸಿ ಬೆಳೆದು ಅಧಿಕ ಲಾಭ ಗಳಿಸುತ್ತಿದ್ದಾರೆ.

ಜೊತೆಗೆ ರೇಷ್ಮೆ ಕೃಷಿಯನ್ನು ಮುಖ್ಯ ಉಪಕಸುಬಾಗಿ ಅಳವಡಿಸಿಕೊಂಡಿದ್ದು 7 ಎಕರೆ ಜಮೀನಿನಲ್ಲಿ ಎಂ-5 ಮತ್ತು ವಿ-1 ಹಿಪ್ಪುನೇರಳೆ ತಳಿಗಳನ್ನು ಬೆಳೆದಿದ್ದು ರೇಷ್ಮೆ ಹುಳು ಸಾಕಣೆಯನ್ನು ಆಧುನಿಕ ಸ್ಟ್ಯಾಂಡ್ ಪದ್ಧತಿಯಲ್ಲಿ ಕೈಗೊಳ್ಳುವ ಮೂಲಕ ವರ್ಷಕ್ಕೆ ಸರಾಸರಿ 3750 ಕಿ. ಗ್ರಾಂ ಗೂಡಿನ ಇಳುವರಿಯನ್ನು ಪಡೆದು ರೂ. 10 ಲಕ್ಷದಷ್ಟು ನಿವ್ವಳ ಆದಾಯವನ್ನು ಪಡೆಯುತ್ತಿದ್ದಾರೆ.

ಅಲ್ಲದೆ ಅರಣ್ಯ ಕೃಷಿಗೂ ಹೆಚ್ಚು ಒತ್ತು ಕೊಟ್ಟಿದ್ದು ತಮ್ಮ ಜಮೀನಿನ ಬದುಗಳ ಮೇಲೆ 800 ಸಿಲ್ವರ್ ಓಕ್, 30 ಬೇವು ಮತ್ತು 25 ಹೊಂಗೆ ಮರಗಳನ್ನು ಬೆಳೆದಿದ್ದಾರೆ.

ಶ್ರೀಯುತರು ಪಶುಸಂಗೋಪನೆಗೆ ಆದ್ಯತೆ ನೀಡಿದ್ದು ಆಧುನಿಕ ಕೊಟ್ಟಿಗೆಯನ್ನು ನಿರ್ಮಿಸಿ 3 ಹೆಚ್. ಎಫ್. ಹಸು, 1 ಜೆನ್ಸಿ ಹಸು ಮತ್ತು ನಾಟಿ ಎಮ್ಮೆ ಸಾಕಣೆ ಮಾಡಿ ತಮ್ಮ ಮನೆಗೆ ಬೇಕಾಗುವಷ್ಟು ಹಾಲನ್ನು ಬಳಸಿ ಉಳಿದ ಹಾಲನ್ನು ಮಾರಾಟ ಮಾಡಿ ವಾರ್ಷಿಕವಾಗಿ ರೂ. 75,000/- ರಷ್ಟು ನಿವ್ವಳ ಆದಾಯವನ್ನು ಗಳಿಸುತ್ತಿದ್ದಾರೆ.

ಹೈನುಗಾರಿಕೆಯ ಸಂಪೂರ್ಣ ಮಾಹಿತಿ(Dairy farming)

ಹೈನುಗಾರಿಕೆಯು ಸಾಕಾಣಿಕೆ ಹಾಲು ಮತ್ತು ಅದರ ಉತ್ಪನ್ನಗಳ ಉತ್ಪಾದನೆಗಾಗಿ ಡೈರಿ ಪ್ರಾಣಿಗಳನ್ನು, ಪ್ರಾಥಮಿಕವಾಗಿ ಹಸುಗಳು, ಆಡುಗಳು ಮತ್ತು ಕುರಿಗಳನ್ನು ಬೆಳೆಸುವುದನ್ನು ಒಳಗೊಂಡಿರುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಹೈನುಗಾರಿಕೆಯ ಪರಿಸರದ ಪ್ರಭಾವವು ಹೆಚ್ಚಿನ ಗಮನವನ್ನು ಗಳಿಸಿದೆ. ಉದ್ಯಮದ ಪರಿಸರದ ಹೆಜ್ಜೆಗುರುತನ್ನು ಕಡಿಮೆ ಮಾಡಲು ತಿರುಗುವಿಕೆಯ ಮೇಯಿಸುವಿಕೆ, ಗೊಬ್ಬರ

ನಿರ್ವಹಣೆ ಮತ್ತು ಶಕ್ತಿ-ಸಮರ್ಥ

ತಂತ್ರಜ್ಞಾನಗಳಂತಹ ಸಮರ್ಥನೀಯ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಇದಲ್ಲದೆ, ಕೆಲವು ಸಾಕಣೆ ಕೇಂದ್ರಗಳು ಹೆಚ್ಚು ಪರಿಸರ ಪ್ರಜ್ಞೆ ಮತ್ತು ಚೇತರಿಸಿಕೊಳ್ಳುವ ಕೃಷಿ ಕ್ಷೇತ್ರಕ್ಕೆ ಕೊಡುಗೆ ನೀಡಲು ಪರ್ಯಾಯ ಶಕ್ತಿ ಮೂಲಗಳು ಮತ್ತು ತ್ಯಾಜ್ಯ ಕಡಿತ ತಂತ್ರಗಳನ್ನು ಅನ್ವೇಷಿಸುತ್ತಿವೆ.

ಹೈನುಗಾರಿಕೆಯು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ ಮತ್ತು ಸ್ಥಳೀಯ ವ್ಯವಹಾರಗಳನ್ನು ಬೆಂಬಲಿಸುವ ಮೂಲಕ ಗ್ರಾಮೀಣ ಆರ್ಥಿಕತೆಗೆ ಗಣನೀಯ ಕೊಡುಗೆ ನೀಡುತ್ತದೆ. ಫಾರ್ಮ್‌ಗಳಲ್ಲಿ ನೇರ ಉದ್ಯೋಗದ ಆಚೆಗೆ, ಆಹಾರ ಪೂರೈಕೆದಾರರು, ಪಶುವೈದ್ಯಕೀಯ ಸೇವೆಗಳು ಮತ್ತು ಸಲಕರಣೆ ತಯಾರಕರಂತಹ ಸಂಬಂಧಿತ ಉದ್ಯಮಗಳ ಮೇಲೆ ಏರಿಳಿತದ ಪರಿಣಾಮವಿದೆ. ಸಣ್ಣ ಮತ್ತು ಕುಟುಂಬ-ಮಾಲೀಕತ್ವದ ಫಾರ್ಮ್‌ಗಳು ಸಾಮಾನ್ಯವಾಗಿ ಗ್ರಾಮೀಣ ಸಮುದಾಯಗಳ ಬೆನ್ನೆಲುಬಾಗಿರುತ್ತವೆ,

ಹಾಲು ಉತ್ಪಾದನೆ

ಹೈನುಗಾರಿಕೆಯ ಪ್ರಾಥಮಿಕ ಉತ್ಪನ್ನವೆಂದರೆ ಹಾಲು, ಇದು ವಿವಿಧ ಡೈರಿ ಉತ್ಪನ್ನಗಳಲ್ಲಿ ಬಳಸಲಾಗುವ ಬಹುಮುಖ ಕಚ್ಚಾ ವಸ್ತುವಾಗಿದೆ.
ವಿಭಿನ್ನ ಡೈರಿ ಪ್ರಾಣಿಗಳು ವಿಭಿನ್ನ ಗುಣಲಕ್ಷಣಗಳೊಂದಿಗೆ ಹಾಲನ್ನು ಉತ್ಪಾದಿಸುತ್ತವೆ, ಅಂತಿಮ ಉತ್ಪನ್ನಗಳ ಪರಿಮಳ ಮತ್ತು ಸಂಯೋಜನೆಯ ಮೇಲೆ ಪ್ರಭಾವ ಬೀರುತ್ತವೆ.

ವೈವಿಧ್ಯಮಯ ಡೈರಿ ಉತ್ಪನ್ನಗಳು

ಡೈರಿ ಕೃಷಿಯು ಬೆಣ್ಣೆ, ಚೀಸ್, ಮೊಸರು, ಐಸ್ ಕ್ರೀಮ್ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ವ್ಯಾಪಕ ಶ್ರೇಣಿಯ ಉತ್ಪನ್ನಗಳಿಗೆ ಕೊಡುಗೆ ನೀಡುತ್ತದೆ.
ಡೈರಿ ಸಂಸ್ಕರಣೆಯಲ್ಲಿನ ನಾವೀನ್ಯತೆಯು ಲ್ಯಾಕ್ಟೋಸ್-ಮುಕ್ತ ಉತ್ಪನ್ನಗಳು, ಪ್ರೋಬಯಾಟಿಕ್-ಭರಿತ ಪಾನೀಯಗಳು ಮತ್ತು ಇತರ ಗ್ರಾಹಕ-ಚಾಲಿತ ಪರ್ಯಾಯಗಳ ಅಭಿವೃದ್ಧಿಗೆ ಕಾರಣವಾಗುತ್ತದೆ.

ಆರ್ಥಿಕ ಕೊಡುಗೆ

ಹೈನುಗಾರಿಕೆಯು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ ಮತ್ತು ಸ್ಥಳೀಯ ವ್ಯವಹಾರಗಳನ್ನು ಬೆಂಬಲಿಸುವ ಮೂಲಕ ಗ್ರಾಮೀಣ ಆರ್ಥಿಕತೆಗೆ ಗಣನೀಯ ಕೊಡುಗೆ ನೀಡುತ್ತದೆ.
ಉದ್ಯೋಗವು ಫಾರ್ಮ್‌ಗಳನ್ನು ಮೀರಿ ಆಹಾರ ಪೂರೈಕೆದಾರರು, ಪಶುವೈದ್ಯಕೀಯ ಸೇವೆಗಳು ಮತ್ತು ಸಲಕರಣೆ ತಯಾರಕರಂತಹ ಸಂಬಂಧಿತ ಉದ್ಯಮಗಳಿಗೆ ವಿಸ್ತರಿಸುತ್ತದೆ.

ಸಮುದಾಯ ಮತ್ತು ಸಂಪ್ರದಾಯ

ಸಣ್ಣ ಮತ್ತು ಕುಟುಂಬ-ಮಾಲೀಕತ್ವದ ಡೈರಿ ಫಾರ್ಮ್‌ಗಳು ಸಾಮಾನ್ಯವಾಗಿ ಗ್ರಾಮೀಣ ಸಮುದಾಯಗಳ ಬೆನ್ನೆಲುಬಾಗಿರುತ್ತವೆ, ಸಮುದಾಯದ ಪ್ರಜ್ಞೆಯನ್ನು ಮತ್ತು ಹಂಚಿಕೆಯ ಜವಾಬ್ದಾರಿಯನ್ನು ಬೆಳೆಸುತ್ತವೆ.
ಡೈರಿ ಬೇಸಾಯವು ಕೃಷಿ ಸಂಪ್ರದಾಯಗಳು ಮತ್ತು ತಲೆಮಾರುಗಳ ಮೂಲಕ ಹಾದುಹೋಗುವ ಅಭ್ಯಾಸಗಳಲ್ಲಿ ಆಳವಾಗಿ ಬೇರೂರಿದೆ.

ಸುಸ್ಥಿರ ಅಭ್ಯಾಸಗಳು

ಪರಿಸರದ ಪ್ರಭಾವವನ್ನು ಕಡಿಮೆ ಮಾಡಲು ಹೈನುಗಾರಿಕೆಯಲ್ಲಿ ಸುಸ್ಥಿರ ಅಭ್ಯಾಸಗಳಿಗೆ ಹೆಚ್ಚಿನ ಗಮನವನ್ನು ನೀಡಲಾಗುತ್ತದೆ.
ತಿರುಗುವಿಕೆಯ ಮೇಯಿಸುವಿಕೆ, ಗೊಬ್ಬರ ನಿರ್ವಹಣೆ ಮತ್ತು ಶಕ್ತಿ-ಸಮರ್ಥ ತಂತ್ರಜ್ಞಾನಗಳಂತಹ ಅಭ್ಯಾಸಗಳು ಪರಿಸರ ಸಮರ್ಥನೀಯತೆಗೆ ಕೊಡುಗೆ ನೀಡುತ್ತವೆ.

ಸವಾಲುಗಳು ಮತ್ತು ಅವಕಾಶಗಳು

ಡೈರಿ ಬೇಸಾಯವು ಮಾರುಕಟ್ಟೆಯ ಏರಿಳಿತಗಳು, ಗ್ರಾಹಕರ ಆದ್ಯತೆಗಳನ್ನು ಬದಲಾಯಿಸುವುದು ಮತ್ತು ನಿರಂತರ ಆವಿಷ್ಕಾರದ ಅಗತ್ಯದಂತಹ ಸವಾಲುಗಳನ್ನು ಎದುರಿಸುತ್ತಿದೆ.
ತಾಂತ್ರಿಕ ಪ್ರಗತಿಗಳು, ಪ್ರಾಣಿ ಕಲ್ಯಾಣ ಸಂಶೋಧನೆ, ಮತ್ತು ಡೈರಿ ಉತ್ಪನ್ನಗಳ ವೈವಿಧ್ಯೀಕರಣವು ಬೆಳವಣಿಗೆ ಮತ್ತು ಸ್ಥಿತಿಸ್ಥಾಪಕತ್ವಕ್ಕೆ ಅವಕಾಶಗಳನ್ನು ಒದಗಿಸುತ್ತದೆ.
ಉದ್ಯಮವು ನಿರಂತರವಾಗಿ ಸವಾಲುಗಳಿಗೆ ಹೊಂದಿಕೊಳ್ಳುತ್ತದೆ, ದಕ್ಷತೆ ಮತ್ತು ಸಮರ್ಥನೀಯತೆಯನ್ನು ಹೆಚ್ಚಿಸಲು ತಾಂತ್ರಿಕ ಪ್ರಗತಿಗಳು ಮತ್ತು ಸಂಶೋಧನೆಗಳನ್ನು ಬಳಸಿಕೊಳ್ಳುತ್ತದೆ.
ವಿಕಸನಗೊಳ್ಳುತ್ತಿರುವ ಗ್ರಾಹಕರ ಬೇಡಿಕೆಗಳನ್ನು ಪೂರೈಸಲು ಮತ್ತು ಹೈನುಗಾರಿಕೆಯ ದೀರ್ಘಾವಧಿಯ ಕಾರ್ಯಸಾಧ್ಯತೆಯನ್ನು ಖಚಿತಪಡಿಸಿಕೊಳ್ಳಲು ನಡೆಯುತ್ತಿರುವ ನಾವೀನ್ಯತೆ ನಿರ್ಣಾಯಕವಾಗಿದೆ.

ಅಲ್ಲದೆ 15 ಬನ್ನೂರು ಕುರಿ, 20 ನಾಟಿ ಕೋಳಿಗಳನ್ನು ಸಾಕಣೆ ಮಾಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಜೋಳ, ಮುಸುಕಿನ ಜೋಳ ಮತ್ತು ಸೀಮೆ ಹುಲ್ಲು ಬೆಳೆಗಳನ್ನು ಬೆಳೆದು ಮೇವಿಗಾಗಿ ಬಳಸುತ್ತಿದ್ದಾರೆ.

ಇವರು ತಮ್ಮ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಿಸಿ ಮಳೆ ನೀರನ್ನು ಸಂಗ್ರಹಿಸಿ ಸಂದಿಗ್ಧ ಹಂತದಲ್ಲಿ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ, ರಸಾವರಿ ಪದ್ಧತಿಯನ್ನು ಮೂಲಕ ಸಮಗ್ರ ನೀರು ನಿರ್ವಹಣೆ ಮಾಡಿ ಉತ್ತಮ ಗುಣಮಟ್ಟದ ಇಳುವರಿ ಪಡೆಯುತ್ತಿದ್ದಾರೆ ಹಾಗೂ ಕಾಟ್ಲಾ ಮೀನು ಸಾಕಣೆ ಸಹ ಮಾಡುತ್ತಿದ್ದಾರೆ.

ಶ್ರೀ ಮುನೇಗೌಡರವರು ಮಣ್ಣು ಮತ್ತು ನೀರು ಸಂರಕ್ಷಣೆಗಾಗಿ ಬದುಗಳ ನಿರ್ಮಾಣ, ಬಸಿಗಾಲುವೆಗಳ ನಿರ್ಮಾಣ, ಮಾಗಿ ಉಳುಮೆ, ಇಳಿಜಾರಿಗೆ ಅಡ್ಡಲಾಗಿ ಉಳುಮೆ ಮತ್ತು ಕೆರೆಗೋಡು ಮಣ್ಣನ್ನು ಬಳಕೆ ಮಾಡುತ್ತಿದ್ದಾರೆ. ಅಲ್ಲದೆ ಇವರು ವೈಜ್ಞಾನಿಕವಾಗಿ ಕೃಷಿ ಮಾಡಲು ಮಣ್ಣು ಮತ್ತು ನೀರು ಪರೀಕ್ಷೆ ಮಾಡಿಸಿಅಗತ್ಯಕ್ಕನುಸಾರವಾಗಿ ಮಣ್ಣಿಗೆ ಸಾವಯವ ಹಾಗೂ ಜೈವಿಕ ಗೊಬ್ಬರಗಳನ್ನು ನೀಡಿ, ಮಣ್ಣಿನ ಫಲವತ್ತತೆಯನ್ನು ಕಾಪಾಡುತ್ತಿದ್ದಾರೆ.

ಮಿಶ್ರ ಬೆಳೆಯಾಗಿ ರಾಗಿ, ಜೋಳ, ಅವರೆ ಮತ್ತು ತೊಗರಿ, ಅಂತರ ಬೆಳೆಯಾಗಿ ಮಾವಿನಲ್ಲಿ ಕಡಲೆ, ಕೃಷಿ ತೋಟಗಾರಿಕೆ ಅರಣ್ಯ, ತೋಟಗಾರಿಕೆ ಕೃಷಿ ಬೆಳೆ ಪದ್ಧತಿಗಳನ್ನು ಅಳವಡಿಸಿಕೊಂಡು ಬೆಳೆ ವೈವಿದ್ಯತೆಯನ್ನು ಕಾಪಾಡಿಕೊಂಡಿದ್ದಾರೆ.

ಮತ್ತು ಸಮಗ್ರ ಪೋಷಕಾಂಶಗಳ ನಿರ್ವಹಣೆಗಾಗಿ ತಮ್ಮ ತೋಟದ ತ್ಯಾಜ್ಯಗಳನ್ನು ವ್ಯರ್ಥ ಮಾಡದೆ ಕಾಂಪೋಸ್ಟ್ ತಯಾರಿಸಿ ತಮ್ಮ ಜಮೀನಿನಲ್ಲೇ ಬಳಸುತ್ತಿದ್ದಾರೆ. ಅಲ್ಲದೆ ಕೀಟ ಮತ್ತು ರೋಗ ನಿರ್ವಹಣೆಗೆ ಸಮಗ್ರ ಕೀಟ ಮತ್ತು ರೋಗ ನಿರ್ವಹಣಾ ಕ್ರಮಗಳನ್ನು ಅಳವಡಿಸಿಕೊಂಡಿದ್ದಾರೆ.

ಶ್ರೀಯುತರು ಸಮಗ್ರ ರೋಗ ನಿರ್ವಹಣೆಗಾಗಿ ಬೀಜೋಪಚಾರವನ್ನು ಮಾಡುತ್ತಿದ್ದು ಕಾಂಪೋಸ್ಟ್ ಹಸಿರೆಲೆ ಗೊಬ್ಬರ, ಜೈವಿಕ ಗೊಬ್ಬರ, ಜೈವಿಕ ಅನಿಲ ಘಟಕ, ಜೈವಿಕ ಪೀಡೆನಾಶಕಗಳನ್ನು ಬಳಕೆ ಮಾಡಿ ಸಾವಯವ ಪದ್ಧತಿಯನ್ನು ಅಳವಡಿಸಿಕೊಂಡು ರಸಾಯನಿಕಗಳ ಸಿಂಪರಣೆಯನ್ನು ಕಡಿಮೆಗೊಳಿಸಿದ್ದಾರೆ.

ಇವರು ಕೃಷಿ ಯಾಂತ್ರೀಕರಣದಲ್ಲಿ ಟ್ರ್ಯಾಕ್ಟರ್, ಪವರ್ ಟಿಲ್ಲ‌ರ್, ಕಲ್ಟಿವೇಟ‌ರ್, ರೋಟೋವೇಟರ್, ಬೂಮರ್ ಸ್ಟೇಯರ್, ಸಿಂಪರಣಾ ಯಂತ್ರ, ಮೇವು ಕಟಾವು ಯಂತ್ರ ಇತ್ಯಾದಿಗಳನ್ನು ಬಳಸಿ ಕೃಷಿ ಕೆಲಸಗಳನ್ನು ನಿರ್ವಹಿಸುವ ಮೂಲಕ ಕೃಷಿ ಕಾರ್ಮಿಕರ ವೆಚ್ಚವನ್ನು ಗಣನೀಯವಾಗಿ ಕಡಿಮೆಗೊಳಿಸಿದ್ದಾರೆ.

ಜೊತೆಗೆ ತಮ್ಮ ಜಮೀನಿನಲ್ಲಿ ಬೆಳೆದ ಹಲವಾರು ಬೆಳೆಗಳ ಉತ್ಪನ್ನಗಳನ್ನು ನೇರ ಮಾರಾಟ ಮಾಡಿ ಮಧ್ಯವರ್ತಿಗಳ ಪ್ರವೇಶವನ್ನು ಕಡಿತಗೊಳಿಸಿ ಹೆಚ್ಚಿನ ಆದಾಯವನ್ನು ಪಡೆಯುತ್ತಿದ್ದಾರೆ.

ಶ್ರೀ ಮುನೇಗೌಡರವರು ಹಲವಾರು ಸಂಘ ಸಂಸ್ಥೆಗಳ ಸದಸ್ಯತ್ವವನ್ನು ಹೊಂದಿದ್ದಾರೆ ಮತ್ತು ಹಲವು ಕೃಷಿ ಪ್ರಕಟಣೆಗಳಿಗೆ ಚಂದದಾರರಾಗಿದ್ದಾರೆ. ಇವರು ಕೃಷಿ ವಿಶ್ವವಿದ್ಯಾನಿಲಯ, ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ ಹಾಗೂ ಇತರೆ ಅಭಿವೃದ್ಧಿ ಇಲಾಖೆಗಳು ಹಾಗೂ ವಿವಿಧ ಮಾಧ್ಯಮಗಳ ಮೂಲಕ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆದು

ತಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡು ವೈಜ್ಞಾನಿಕವಾಗಿ ಕೃಷಿಯನ್ನು ನಿಭಾಯಿಸುತ್ತಿದ್ದಾರೆ. ಅಲ್ಲದೆ ಇವರ ತೋಟಕ್ಕೆ ಬೇಟಿ ನೀಡುವ ರೈತರಿಗೆ ಆಧುನಿಕ ತಂತ್ರಜ್ಞಾನಗಳ ಬಗ್ಗೆ ಮಾಹಿತಿಯನ್ನು ನೀಡಿ, ಅವರೂ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸುತ್ತಾರೆ.

ಶ್ರೀಯುತರ ಕೃಷಿ ಸಾಧನೆಗೆ 2021 ರಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಜಿಲ್ಲಾ ಮಟ್ಟದ ಪ್ರಗತಿಪರ ರೈತ ಪ್ರಶಸ್ತಿ ಮತ್ತು ಕೃಷಿ ಇಲಾಖೆಯವತಿಯಿಂದ ಸಮಗ್ರ ಕೃಷಿ ಜಿಲ್ಲಾ ಪ್ರಗತಿಪರ ರೈತ ಪ್ರಶಸ್ತಿ ಲಭಿಸಿವೆ.

One thought on “ಸಾವಯವ ಕೃಷಿಯ ಜೊತೆಗೆ Dairy ಫಾರ್ಮ್ ನಲ್ಲಿ ಯಶಸ್ವಿ

  • I am just commenting to let you be aware of what a superb encounter my cousin’s girl had checking your blog. She mastered plenty of issues, which include what it’s like to have an incredible helping nature to make a number of people without hassle learn about several very confusing things. You really did more than readers’ expected results. I appreciate you for offering the useful, healthy, edifying and also cool tips on that topic to Tanya.

    Reply

Leave a Reply

Your email address will not be published. Required fields are marked *