ಹೆಚ್ಚುತ್ತಿರುವ ಆಹಾರ ಪದಾರ್ಥಗಳ ಬೆಲೆ (The Future of farming)
ಜಾಗತಿಕ ಜನಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗುತ್ತಿದೆ ಕಾರಣ ದಿನನಿತ್ಯ ಬಳಸುವ ಆಹಾರ ಪದಾರ್ಥಗಳ ಉತ್ಪಾದನೆ ಕಡಿಮೆಯಾಗಿದ್ದು ಬೇಡಿಕೆ ಹೆಚ್ಚಾಗಿದೆ.(The Future of farming )
ಕೃಷಿಯಿಂದ ರೈತರು ದೂರವಾಗುತ್ತಿದ್ದಾರೆ ಕಾರಣ ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ಇರುವುದು ಮತ್ತು ಅಕಾಲಿಕ ಮಳೆ ಹಾಗೂ ಬರಗಾಲದಿಂದ ಕಂಗಾಲಾಗಿದ್ದರೆ.
ಇತ್ತೀಚಿನ ದಿನಗಳಲ್ಲಿ ರೈತರು ಕೃಷಿಯಿಂದ ದೂರ ಉಳಿದು ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿರುವುದು ಒಂದು ಕಾರಣವಾಗಿದೆ.
ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೇ ಇರುವುದು ಮತ್ತು ಹಿಂದಿನ ಕಾಲದ ವ್ಯವಸಾಯ ಕ್ರಮ ಅನುಸರಿಸುವುದು ಯಂತ್ರೋಪಕರಣಗಳ ಬಗ್ಗೆ ಮಾಹಿತಿ ಕಡಿಮೆ ಇರುವುದು ಕೂಲಿ ಕಾರ್ಮಿಕರ ಸಮಸ್ಯೆ ಜೊತೆಗೆ ಗೊಬ್ಬರ ಮತ್ತು ಔಷಧಿಗಳ ಬೆಲೆಯೂ ಹೆಚ್ಚಾಗಿ ಏರಿಕೆಯಾಗಿರುವುದು.
ಮತ್ತು ಯುವ ರೈತರಿಗೆ ಮದುವೆ ಆಗದೆ ಇದ್ದ ಕಾರಣ ನಗರಗಳಿಗೆ ಯುವಕರು ಕೆಲಸಕ್ಕೆ ಎಂದು ಹೆಚ್ಚು ಹೋಗುತ್ತಿದ್ದಾರೆ.
ಹೀಗಾಗಿ ಹಳ್ಳಿಗಳಲ್ಲಿ ಹೆಚ್ಚು ರೈತರು ಕಡಿಮೆ ಖರ್ಚಿನಲ್ಲಿ ಮತ್ತು ಹೆಚ್ಚು ಕೂಲಿ ಕಾರ್ಮಿಕರ ಅವಲಂಬನೆಯನ್ನು ತಪ್ಪಿಸಲು ತೋಟಗಾರಿಕೆ ಬೆಳೆಗಳಾದ ಅಡಿಕೆ. ತೆಂಗು ಬೆಳೆಗಳಿಗೆ ಹೆಚ್ಚಿನ ಆಸಕ್ತಿ ವಹಿಸಿದ್ದು ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗುತ್ತಿದೆ.
ಹೀಗಾಗಿ ಹಳ್ಳಿಗಳಲ್ಲಿ ಭತ್ತ. ರಾಗಿ. ಜೋಳ. ತೊಗರಿ. ಶೇಂಗಾ. ಅವರೇ. ಈ ರೀತಿಯ ದಿನನಿತ್ಯ ಬಳಕೆಗಳ ಕಾಳುಗಳನ್ನು ಬೆಳೆಯುವವರು ಕಡಿಮೆಯಾಗಿದೆ, ಹೀಗಾಗಿ ಅಗತ್ಯ ವಸ್ತುಗಳ ಬೆಲೆಯು ಮುಂದಿನ ದಿನಗಳಲ್ಲಿ ಹೆಚ್ಚಾಗುತ್ತದೆ
ಅಡಿಕೆ ಬೆಳೆಯು ಕೇವಲ ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ. ಚಿಕ್ಕಮಂಗಳೂರು. ಮಂಗಳೂರು. ಕರಾವಳಿ. ಪ್ರಾಂತ್ಯದ ಸಾಂಪ್ರದಾಯಿಕ ಬೆಳೆಯಾಗಿತ್ತು ಇತ್ತೀಚಿನ ದಿನಗಳಲ್ಲಿ ಅಡಿಕೆ ಯಥೇಚ್ಛವಾಗಿ ಅರೆಮಲೆನಾಡು ಜಿಲ್ಲೆಗಳಲ್ಲಿಯೂ ಸಾವಿರಾರು ಎಕ್ಟರ ರ್ಗಳಲ್ಲಿ ಅಡಿಕೆ ಸಸಿಗಳನ್ನು ನಾಟಿ ಮಾಡಲಾಗಿದೆ.
ಅಡಿಕೆ ಬೆಳೆಯು ಕಡಿಮೆ ಬಂಡವಾಳದಲ್ಲಿ ಹೆಚ್ಚು ಆದಾಯವನ್ನು ತರುವ ಬೆಳೆಯಾಗಿದ್ದು ರೈತರು ಹೆಚ್ಚು ಈ ಬೆಳೆಯನ್ನು ಬೆಳೆಯಲು ಆಕರ್ಷಿತರಾಗಿದ್ದಾರೆ.
ಇದರಿಂದ ಭತ್ತ ರಾಗಿ ಜೋಳ ದಿನನಿತ್ಯ ಬಳಸುವ ಕಾಳುಗಳ ಉತ್ಪಾದನೆ ಕಡಿಮೆಯಾಗಿದೆ ಬೇಡಿಕೆ ಹೆಚ್ಚಾಗಿದೆ ಈ ಕಾರಣದಿಂದ ಬೆಲೆ ಹೆಚ್ಚಾಗುತ್ತದೆ.ಈ ಬಾರಿ ಅಲ್ಪ ಪ್ರಮಾಣದಲ್ಲಿ ಭತ್ತ ಬೆಳೆಯಲಾಗಿದ್ದು ಈ ಬಾರಿ ಬತ್ತಕ್ಕೆ ಬಂಗಾರದ ಬೆಲೆ ಬಂದಿದೆ.
ಕಳೆದ ವರ್ಷಗಳಲ್ಲಿ ಒಂದು ಕ್ವಿಂಟಲ್ ಭತ್ತಕ್ಕೆ 1800 ರಿಂದ 2000 ಇದ್ದ ಭತ್ತದ ಬೆಲೆ ಇಂದು 3000 ದಿಂದ 3800 ವರೆಗೆ ತಲುಪಿದೆ.
ರೈತರ ಬಳಿಯೇ ಮಧ್ಯವರ್ತಿಗಳು ಹೆಚ್ಚಾಗಿ ಖರೀದಿಸಿದ್ದಾರೆ ಜೊತೆಗೆ ರಾಗಿ ಮತ್ತು ಜೋಳದ ಬೆಲೆಯು ಹೆಚ್ಚಾಗಿದೆ.ಈ ಬಾರಿ ಭತ್ತ ಬೆಳೆದ ರೈತರು ಹೆಚ್ಚಿನ ಆದಾಯ ಗಳಿಸಿದ್ದಾರೆ ಆದರೆ ಮುಂದಿನ ದಿನಗಳಲ್ಲಿ ಬರಗಾಲ ಡ್ಯಾಮ್ಗಳಲ್ಲಿ ನೀರಿಲ್ಲದ ಕಾರಣ ಈ ಬಾರಿ ಭತ್ತ ಬೆಳೆಯಲು ಕಷ್ಟವಾಗಿದೆ.
ರೈತರು ಈ ಬಾರಿ ಬತ್ತ ಬೆಳೆಯಲು ಕೆರೆ ಬಾವಿ ಕೊಳವೆ ಬಾವಿಗಳ ಮೊರೆ ಹೋಗುತ್ತಿದ್ದಾರೆ.ಡ್ಯಾಮ್ ಗಳಲ್ಲಿ ಕುಡಿಯಲು ಮಾತ್ರ ನೀಡಿದ್ದು ಕೃಷಿ ಬೆಳೆಗಳಿಗೆ ನೀರು ಬಿಡುವುದು ಕಷ್ಟವಾಗಿದೆ.
ಸರ್ಕಾರದಿಂದ ಮಂಜಾಗ್ರತಾ ಕ್ರಮ ವಹಿಸಬೇಕು(The Future of farming)
ರೈತರಿಗೆ ಭತ್ತ. ರಾಗಿ. ಜೋಳ. ತೊಗರಿ. ಅವರೇ. ಶೇಂಗಾ. ಬೆಳೆಗಳನ್ನು ಸುಧಾರಿತ ತಳಿಗಳ ಬಗ್ಗೆ ಮಾಹಿತಿ ನೀಡಬೇಕು. ರೈತರಿಗೆ ಯಂತ್ರೋಪಕರಣಗಳ ಬಳಕೆಯ ಬಗ್ಗೆ ತಿಳಿಸಬೇಕು ಯಾವ ಯಾವ ಸಮಯದಲ್ಲಿ ನಿಯಂತ್ರಿತವಾಗಿ ಗೊಬ್ಬರ ಮತ್ತು ಔಷಧಿ ಗಳ ಬಳಕೆ ಯಾವ ಪ್ರಮಾಣದಲ್ಲಿ ಬಳಕೆಯ ಮಾಹಿತಿ ನೀಡಬೇಕು.
- ಹವಾಮಾನ ಮಳೆ ಮುನ್ಸೂಚನೆಗಳನ ಬಗ್ಗೆ ರೈತರಿಗೆ ಮಾಹಿತಿ ನೀಡಬೇಕು.
- ಅಲ್ಪಾವಧಿ ಬೆಳೆಗಳಿಗೆ ಕಡಿಮೆ ಸಮಯದಲ್ಲಿ ಬೆಳೆಗಳನ್ನು ಬೆಳೆಯುವ ಹಾಗೆ ರೈತರಿಗೆ ಪ್ರೋತ್ಸಾಹಿಸಬೇಕು
- ಸ್ಥಳೀಯವಾಗಿ ಮಾರುಕಟ್ಟೆಯ ನಿರ್ಮಿಸಿ ನಿಗದಿತ ಬೆಲೆಗೆ ಧಾನ್ಯಗಳನ್ನು ಸರ್ಕಾರದ ಖರೀದಿಸಬೇಕು
- ಔಷಧಿ ಗೊಬ್ಬರಗಳ ದರವನ್ನು ಇಳಿಕೆ ಮಾಡಬೇಕು app ಮುಖಾಂತರ ರೈತರಿಗೆ ಮಾಹಿತಿ ನೀಡಬೇಕು.
- ಡ್ರೋನ್ಗಳ ಬಳಕೆ ಟ್ರ್ಯಾಕ್ಟರ್ ಗಳ ಬಳಕೆ ಯಂತ್ರ ಉಪಕರಣಗಳ ಬಳಕೆಯ ಬಗ್ಗೆ ತಿಳಿಸಬೇಕು
- ಅಲ್ಪಾವಧಿ ಬೆಳೆಗಳು ಕೇವಲ 100 ರಿಂದ 150 ದಿನಗಳ ಬೆಳೆಯುವ ಸುಧಾರಿತ ತಳಿಗಳ ಬಗ್ಗೆ ಪ್ರೋತ್ಸಾಹಿಸಬೇಕು
- ಅಂತಂತವಾಗಿ ಮಿಶ್ರ ಬೆಳೆಗಳನ್ನು ಹೇಗೆ ಬೆಳೆಯ ಬೇಕೆಂದು ಮಾಹಿತಿ ನೀಡಬೇಕು ಕಡಿಮೆ ನೀರಿನಲ್ಲಿ ಹೆಚ್ಚು ಬೆಳೆ ಬೆಳೆಯುವ ಹಾಗೆ ಮಾಹಿತಿ ತಿಳಿಸಬೇಕು
ಭತ್ತದ ತಳಿಯ ಅಭಿವೃದ್ಧಿ
ವಿ ಸಿ ಫಾರ್ಮ್ ವಲಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ಭತ್ತ ತಳಿ ಅಭಿವೃದ್ಧಿ ಮಾಡಲಾಗುತ್ತಿದೆ. V C ಫಾರ್ಮ್ ಮಂಡ್ಯ ಮತ್ತು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಬತ್ತದ ತಳಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ
ಹೊಸ ತಳಿ ಸಣ್ಣಕ್ಕಿ (MNS) ಎಂ ಎಸ್ ಏನ್ .IR 99 (MR) ಐಆರ್ 64 ಅವಲಕ್ಕಿ ಕಡಲೆಪುರಿ ಗಳಿಗೆ ಬಳಸುವ ಬತ್ತವಾಗಿದೆ.
ಕರ್ನಾಟಕದಲ್ಲಿ ಜ್ಯೋತಿ ಭತ್ತ ಹಲವಾರು ಭಾಗಗಳಲ್ಲಿ ಬೆಳೆಯುತ್ತಾರೆ ಸಾಮಾನ್ಯವಾಗಿ ಈ ಭತ್ತ ಕಡಿಮೆ ಅವಧಿಯಲ್ಲಿ ಬೆಳೆಯುವ ಭತ್ತ ವಾಗಿದೆ ಈ ಜ್ಯೋತಿ ಭತ್ತ ಕೆಂಪು ಬಣ್ಣದಿಂದ ಕೂಡಿರುತ್ತದೆ.ಈ ಬತವನ್ನು ಹೆಚ್ಚಾಗಿ ಕರ್ನಾಟಕದಲ್ಲಿ ಬೆಳೆದು ಕೇರಳ ರಾಜ್ಯಕ್ಕೆ ಹೆಚ್ಚು ಮಾರಾಟವಾಗುತ್ತದೆ.
ಈ ಭತ್ತಕ್ಕೆ ಹೆಚ್ಚಿನ ಬೇಡಿಕೆ ಇದೆ ಹೀಗಾಗಿ ಕರ್ನಾಟಕದ ರೈತರು ಸಾವಿರಾರು ಎಕ್ಕರೆಗಳಲ್ಲಿ ಈ ಬತ್ತವನ್ನು ಬೆಳೆಯುತ್ತಾರೆ.ಈ ಜ್ಯೋತಿ ಭತ್ತವು ತುಂಡು ಹುಲ್ಲು ಕಡಿಮೆ ಎತ್ತರದ ಬೆಳೆಯಾಗಿದ್ದು ಭತ್ತಕ್ಕೆ ಬರುವ ಎಲ್ಲ ರೋಗಗಳು ಈ ಭತ್ತಕ್ಕೆ ಬರುತ್ತದೆ.
ಈ ಭತ್ತದಲ್ಲಿ ಹೆಚ್ಚು ನಷ್ಟ ಆಗುತ್ತಿರುವ ಕಾರಣ ಕೃಷಿ ವಿಜ್ಞಾನಿಗಳು ಜ್ಯೋತಿ ರೀತಿಯ ಕಾಳುಗಳು ಇರುವ ರೋಗ ಬರದಂತ ಹುಲ್ಲು ಹೆಚ್ಚು ಸಿಗುವ ಹಾಗೆ ಹಾಗೂ ಹೆಚ್ಚು ಇಳುವರಿ ಬರುವಂತಹ ತಳಿಗಳನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ.ಶೇಕಡ 30ರಷ್ಟು ಹೆಚ್ಚು ಇಳುವರಿ ಬರುವ ಭತ್ತದ ತಳಿಗಳಾದ ಕೆಪಿಎಂ220 ಅಭಿವೃದ್ಧಿ ಪಡಿಸಲಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿರುವುದರಿಂದ ಕಡಿಮೆ ನೀರು ಬಳಸಿಕೊಂಡು ಬೆಳೆಯುವಂತ ಭತ್ತ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದ್ದು.ಕೆಎಂಪಿ 175 ಅಥವಾ ದಕ್ಷ ಈ ತಳಿಯನ್ನು ಅಭಿವೃದ್ಧಿಪಡಿಸಲಾಗಿದ್ದು ಈ ಭತ್ತವನ್ನು ಕೋಲಾರ ತುಮಕೂರು ಭಾಗದಲ್ಲಿ ಹಲವಾರು ರೈತರು ಯಶಸ್ವಿಯಾಗಿ ಬೆಳೆದಿದರೇ ಹೆಚ್ಚಿನ ಲಾಭವನ್ನು ಪಡೆದುಕೊಂಡಿದ್ದಾರೆ.
ಈ ಭತ್ತ ನಾಟಿ ಮಾಡುವ ವಿಧಾನ ಈ ತಳಿಯನ್ನು ಭೂಮಿಗೆ ನೇರವಾಗಿ ಬಿತ್ತನೆ ಮಾಡಬಹುದು ಅಥವಾ ಸಾಂಪ್ರದಾಯಿಕವಾಗಿ ನಾಟಿ ಮಾಡಿ ಕೂಡ ಬೆಳೆಯಬಹುದು.ಈ ತಳಿಯ ಭತ್ತಕ್ಕೆ ಎಂಟರಿಂದ ಹತ್ತು ದಿನಗಳಿಗೊಮ್ಮೆ ನೀರನ್ನುಕೊಟ್ಟು ಕಡಿಮೆ ನೀರಿನಲ್ಲಿ ಈ ತಳಿಯನ್ನು ಬೆಳೆದು ಹೆಚ್ಚಿನ ಇಳುವರಿ ಪಡೆಯಬಹುದು.
ಕರ್ನಾಟಕದ ಮತ್ತೊಂದು ಹೆಸರಾಂತ ಭತ್ತದ ತಳಿ ರಾಜಾಮುಡಿ ಭತ್ತ ಸಾಂಪ್ರದಾಯಿಕ ತಳಿಯು ತಲೆತಲೆ ಮಾರುಗಳಿಂದ ಬೆಳೆದು ಬಂದಂತ ಒಂದು ರೈತ ತಳಿಯಾಗಿದೆ ರಾಜಮುಡಿ ಅಕ್ಕಿ ಅಪರೂಪದ ಒಂದು ಕೆಂಪು ಅಕ್ಕಿಯಾಗಿದ್ದು ಈ ಅಕ್ಕಿಗೆ ಬಾರಿ ಬೇಡಿಕೆ ಇದೆ ಈ ಬತ್ತವು ಮೈಸೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಬೆಳೆಯುವ ಸಾಂಪ್ರದಾಯಿಕ ಭತ್ತವಾಗಿದೆ ಈ ಬಾರಿ ಮಳೆಯ ಕೊರತೆಯಿಂದ ಭತ್ತದ ಬೆಳೆಯಲ್ಲಿ ಕೊರತೆ ಉಂಟಾಗಿ ಒಂದು ಕ್ವಿಂಟಲ್ ಭತ್ತಕ್ಕೆ ನಾಲ್ಕು ಸಾವಿರದ ಗಡಿ ದಾಟಿದೆ.ರಾಜಮುಡಿ ಭತ್ತದ ತಳಿ ಹೆಚ್ಚಿನ ಅಭಿವೃದ್ಧಿಪಡಿಸಲಾಗುತ್ತಿದೆ.
ಇನ್ನು ಮುಂದಿನ ಕೇವಲ ಹತ್ತು ವರ್ಷಗಳಲ್ಲಿ ಅತ್ಯುತ್ತಮ ವಾಗಿ ಕೃಷಿ ಕ್ಷೇತ್ರ ಪರಿವರ್ತನೆ ಆಗುತ್ತದೆ. ಭತ್ತ ರಾಗಿ ಜೋಳ ಬೆಳೆಯುವುದರ ಜೊತೆಗೆ ಕುರಿ ಸಾಕಾಣಿಕೆ ಕೋಳಿ ಸಾಕಾಣಿಕೆ ಹಸು ಸಾಕಾಣಿಕೆ ಕಡಿಮೆಯಾಗುತ್ತಿದ್ದು ಹೀಗಾಗಿ ಮುಂದಿನ ಕೆಲವೇ ವರ್ಷಗಳಲ್ಲಿ ಕೃಷಿಗೆ ಹೆಚ್ಚು ಬೇಡಿಕೆ ಬರುತ್ತದೆ.
ಜೊತೆಗೆ ಸಾವಯವ ರೀತಿಯಲ್ಲಿ ಕೃಷಿಯನ್ನು ತೊಡಗಿಸಿಕೊಂಡು ಉತ್ತಮ ಆದಾಯದ ಜೊತೆಗೆ ಉತ್ತಮ ಆರೋಗ್ಯವನ್ನು ಪಡೆಯಬಹುದಾಗಿದೆ.
Wow! Thank you! I permanently needed to write on my site something like that. Can I take a portion of your post to my blog?
Hi, Neat post. There is a problem with your website in internet explorer, would check this… IE still is the market leader and a good portion of people will miss your great writing due to this problem.