4 ಜಾತಿ ವರ್ಷಕ್ಕೆ 100 ಮರಿ..? (Sheep farming)
ಇತ್ತೀಚಿನ ದಿನಗಳಲ್ಲಿ ಹೈಟೆಕ್ ಕುರಿ ಶೆಟ್ ಮಾಡಿ ಮುಚ್ಚೊಗಿರೋದೆ ಹೆಚ್ಚು.
ಲಾಕ್ಡೌನ್ ಸಂದರ್ಭದಲ್ಲಿ ಕುರಿ ಸಾಕಾಣಿಕೆಯಲ್ಲಿ ಅನುಭವವಿಲ್ಲದಿದ್ದರೂ ಕುರಿ ಸಾಕಾಣಿಕೆ ಮಾಡಿ ನಷ್ಟ ಅನುಭವಿಸಿದ್ದವರೇ ಹೆಚ್ಚು
ಇವರ ಪ್ರಕಾರ ಅತಿ ಹೆಚ್ಚು ಬಂಡವಾಳ ಕುರಿಗಳ ಮೇಲಿರಬೇಕು. ಸಿಂಪಲ್ ಶೆಡ್ ನಿರ್ಮಾಣ ಮಾಡಿಕೊಳ್ಳಬೇಕು.ಬಹಳ ಸರಳವಾಗಿ ಕುರಿ ಶೆಡ್ ನಿರ್ಮಾಣ ಮಾಡಿ ಕೊಂಡಿರುವ ಇವರು 200 ಕು ಹೆಚ್ಚು ಕುರಿಗಳನ್ನು ಸಾಕಾಣಿಕೆ ಮಾಡಿದ್ದಾರೆ.
ಇವರು ಬಳಿ ನಾಲಕ್ಕು ಜಾತಿಯ ಕುರಿಗಳಿವೆ ನಾರಿ ಸುವರ್ಣ. ಡಾರ್ಪರ್. ಬನ್ನೂರು. ಮತ್ತು ಸ್ಥಳೀಯ ಜಾತಿಯ ಕುರಿಗಳನ್ನು ಇವರ ಶೆಡ್ ನಲ್ಲಿ ಸಾಕಾಣಿಕೆ ಮಾಡಿದ್ದಾರೆ.
ಕುರಿ ಫಾರಂ ಶೆಡ್ಡಿಗೆ ಗಾಳಿ ಮತ್ತು ಬೆಳಕು ಹೆಚ್ಚಿನ ಪ್ರಮಾಣದಲ್ಲಿರಬೇಕು 4 ಕುರಿ ಯಿಂದ ಶುರು ಮಾಡಿದ ಇವರು ಇಂದು 200ಕ್ಕೂ ಹೆಚ್ಚು ಕುರಿ ಗಳು ಇವರ ಬಳಿ ಇವೆ.
ಎಲ್ಲ ಜಾತಿಯ ಕುರಿಗಳು ಸೇರಿ 150ಕ್ಕೂ ಹೆಚ್ಚು ಹೆಣ್ಣು ಕುರಿಗಳಿದ್ದು ವರ್ಷಕ್ಕೆ 100 ರಿಂದ 120 ಕುರಿ ಮರಿಗಳು ಸಿಗುತ್ತವೆ.ಇವರು ಒಂದು ಮರಿಯನ್ನು 8000 ಸಾವಿರಕ್ಕೆ ಮಾರಿದರೆ ಎಂಟ ರಿಂದ ಹತ್ತು ಲಕ್ಷ ಆದಾಯ ತಿಳಿಸುತ್ತಾರೆ.
ಇವರದ್ದು ಬ್ರೀಡಿಂಗ್ ಶೆಡ್ ಆಗಿದ್ದು ಗಂಡು ಕುರಿಗಳನ್ನು ಹೆಚ್ಚಾಗಿ ಸಾಕುವುದಿಲ್ಲ. ಹೆಣ್ಣು ಕುರಿಗಳ ಹೆಚ್ಚು ಸಾಕಾಣಿಕೆ ಮಾಡುತ್ತಾರೆ. (Sheep farming)
ಕುರಿಗಳಿಗೆ ಸೈಲೆಜ್ ಕೊಡುವುದು ಮತ್ತು ಕೈ ತಿಂಡಿ ಗಳನ್ನು ಕೊಡುವುದರಿಂದ ಬೇಗ ಬೆಳವಣಿಗೆ ಆಗುತ್ತವೆ.
ಇವರು ಹೆಚ್ಚಾಗಿ ಲಾಭಗಳಿಸುವುದು ಕುರಿಗಳನ್ನು ಕೂಡು ಪದ್ಧತಿಯಲ್ಲಿ ಮತ್ತು ಹೊರಗೆ ಮೆಯಿಸುವುದರಿಂದ ಮೇವಿಗೆ ಹೆಚ್ಚಿನ ಖರ್ಚಾಗುವುದಿಲ್ಲ ಬಂಡವಾಳ ಕಡಿಮೆ ಇರುವುದರಿಂದ ಲಾಭ ಹೆಚ್ಚಾಗುತ್ತದೆ.
ಮಾರುಕಟ್ಟೆ ವ್ಯವಸ್ಥೆ (Sheep farming)
ಇವರು ಸ್ಥಳೀಯವಾಗಿ ಸಂತೆ ಇದ್ದು ಹಾಗೂ ಸ್ಥಳೀಯ ಜನರು ಇವರ ಬಳಿಯೇ ಜಾತ್ರೆ ಹಬ್ಬಗಳಿಗೆ ಹೆಚ್ಚಾಗಿ ಕುರಿಗಳನ್ನು ಇವರ ಸೆಡ್ ಬಳಿಯೇ ಬಂದು ವ್ಯಾಪಾರ ಮಾಡಿ ಖರೀದಿಸುತ್ತಾರೆ .
ಕುರಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ರೋಗಗಳ ಬಗ್ಗೆ ಮಾಹಿತಿ.(Sheep farming)
ಕುರಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ರೋಗಗಳು ಎಂದರೆ ಪಿಪಿಆರ್ (PPR ).ಇಟಿ (ET) ಬ್ಲೂಟಾಂಗ್ (Blue tong) ಶಿಫ್ ಫಾಕ್ಸ್ (Sheep fox) ಈ ರೀತಿಯ ರೋಗಗಳು ಕುರಿಗಳಲ್ಲಿ ಹೆಚ್ಚಾಗಿ ಬರುತ್ತದೆ.
ಇವರ ಅನುಭವದ ಪ್ರಕಾರ ಸಂತೆಯಿಂದ ಕುರಿ ತಂದರೆ ಯಾವುದಾದರೂ ಒಂದು ಕುರಿಗೆ ಇರುವ ರೋಗ ಮಾರಿ ತಂದು ತಮ್ಮ ಶೆಡ್ ನಲ್ಲಿ ಬಿಟ್ಟಿಕೊಂಡರೆ ಅದರಲ್ಲಿರುವ ರೋಗ ಎಲ್ಲ ಮರಿಗಳಿಗೆ ಹರಡುತ್ತದೆ ಹೀಗಾಗಿ ಸ್ಥಳೀಯವಾಗಿ ಗೊತ್ತಿರುವ ರೈತರ ಬಳಿ ಕುರಿತಂದು ಸಾಕಾಣಿಕೆ ಮಾಡಿದ್ದಾರೆ.
ಕುರಿಗಳಿಗೆ ತೀವ್ರವಾದ ಹವಾಮಾನ ಪರಿಸ್ಥಿತಿಗಳಿಂದ ಆಶ್ರಯ ಬೇಕಾಗುತ್ತದೆ, ಅದು ಸುಡುವ ಶಾಖ ಅಥವಾ ಕೊರೆಯುವ ಶೀತವಾಗಿರಬಹುದು. ಚೆನ್ನಾಗಿ ಗಾಳಿ ಇರುವ ಕೊಟ್ಟಿಗೆ ಅಥವಾ ಶೆಡ್ ರಕ್ಷಣೆಯನ್ನು ಒದಗಿಸುತ್ತದೆ, ಹಿಂಡಿನ ಆರೋಗ್ಯ ಮತ್ತು ಯೋಗಕ್ಷೇಮವನ್ನು ಖಾತ್ರಿಗೊಳಿಸುತ್ತದೆ.
ಕುರಿಗಳ ಒಟ್ಟಾರೆ ಆರೋಗ್ಯ ಮತ್ತು ಉತ್ಪಾದಕತೆಗೆ ಸರಿಯಾದ ಪೋಷಣೆ ನಿರ್ಣಾಯಕವಾಗಿದೆ. ಹುಲ್ಲು, ಹುಲ್ಲು ಮತ್ತು ಪೂರಕ ಧಾನ್ಯಗಳನ್ನು ಒಳಗೊಂಡಿರುವ ಸಮತೋಲಿತ ಆಹಾರವು ಅತ್ಯುತ್ತಮ ಬೆಳವಣಿಗೆ ಮತ್ತು ಗುಣಮಟ್ಟದ ಉಣ್ಣೆ ಮತ್ತು ಮಾಂಸ ಉತ್ಪಾದನೆಯನ್ನು ಖಾತ್ರಿಗೊಳಿಸುತ್ತದೆ.
ಕುರಿಗಳಿಗೆ ಶುದ್ಧ ಮತ್ತು ಶುದ್ಧ ನೀರಿನ ಪ್ರವೇಶ ಅತ್ಯಗತ್ಯ. ನೀರಿನ ಮೂಲಗಳ ನಿಯಮಿತ ಮೇಲ್ವಿಚಾರಣೆ ಮತ್ತು ಶುಚಿಗೊಳಿಸುವಿಕೆಯು ರೋಗಗಳನ್ನು ತಡೆಗಟ್ಟಲು ಮತ್ತು ಹಿಂಡುಗಳನ್ನು ಹೈಡ್ರೀಕರಿಸುವಲ್ಲಿ ಸಹಾಯ ಮಾಡುತ್ತದೆ.
PPR ಪಿಪಿಆರ್ ಕಾಯಿಲೆಯು ತಾಯಿ ಕುರಿಯಿಂದ ಬರುವ ರೋಗವಾಗಿದೆ. ET ರೋಗವು ಹೊರಗಿನ ಮೇವು ತಿನ್ನುವುದರಿಂದ ಹೆಚ್ಚಾಗಿ ಬರುತ್ತದೆ .ವರ್ಷಕ್ಕೆ ಒಂದು ಬಾರಿ ET ಈಟಿ ವ್ಯಾಕ್ಸಿನೇಷನ್ ಮಾಡಲೇಬೇಕು.
200 ಕುರಿಗಳನ್ನು ಸಾಕಿರುವ ಇವರು ಕುರಿಗಳ ಗುಂಪು ನೋಡಿದರೆ ಸಾಕು ಯಾವ ಕುರಿ ರೋಗ ಬಂದಿದೆ ಎಂದು ಗೊತ್ತಾಗುತ್ತದೆ.ಕುರಿಗಳಿಗೆ ಅಥವಾ ಹಸುಗಳಿಗೆ ಪಿಪಿಆರ್ (PPR) ಮತ್ತು ಇ ಟಿ (ET )ವ್ಯಾಕ್ಸಿನೇಷನ್ ಅತ್ಯವಶ್ಯಕ.
ಕುರಿಗಳು ಹೊರಗೆ ಮೆಯಿರುವುದರಿಂದ (ಏನು) ಪಿಡುಗು ರೋಗ ಹೆಚ್ಚು ಕಾಣಿಸಿಕೊಳ್ಳುತ್ತದೆ ಹೀಗಾಗಿ ಕುರಿಗಳಿಗೆ ಡಿಪಿಂಗ್ ತೊಟ್ಟಿಯಲ್ಲಿ ಔಷಧಿಯಾಗಿ ನೆನೆಸುತ್ತಾರೆ. ಪಿಡುಗು ಖಾಯಿಲೆಯನ್ನು ನಿಯಂತ್ರಿಸುತ್ತಾರೆ.
ಇಡೀ ದೇಶದಲ್ಲಿ ಅತಿ ಹೆಚ್ಚು ವೆಟನರಿ ಡಾಕ್ಟರ್ ಗಳ ಕೊರತೆ ಇರುವುದು ಮೊದಲನೇ ಸ್ಥಾನ ರಾಜಸ್ಥಾನ ದಲ್ಲಿದೆ ಮತ್ತು ಎರಡನೇ ಸ್ಥಾನ ಕರ್ನಾಟಕ ದಲ್ಲಿದೆ ಕರ್ನಾಟಕದ ಒಂದು ಜಿಲ್ಲೆಗೆ 40 ಜನ ಡಾಕ್ಟರ್ ಗಳ ಕೊರತೆ ಇದೆ.
ಹೀಗಾಗಿ ರೈತರಿಗೆ ಸಕಾಲದಲ್ಲಿ ಡಾಕ್ಟರ್ ಸಿಗದೇ ಇರುವುದು ಮತ್ತು ರೈತರಿಗೆ ರೋಗದ ಬಗ್ಗೆ ಹೆಚ್ಚಿನ ಮಾಹಿತಿ ಇರದೆ ಇರುವುದು ಹೆಚ್ಚಿನ ಕುರಿಗಳು ಸಾಯುವುದಕ್ಕೆ ಕಾರಣವಾಗಿದೆ.
ಇವರ ಶೆಡ್ಡಿಗೆ 4 ವರ್ಷದಿಂದ ವೆಟನರಿ ಡಾಕ್ಟರ್ ಗಳೇ ಬಂದಿಲ್ಲ ಎಲ್ಲಾ ವ್ಯಾಕ್ಸಿನೇಷನ್ ಇವರೇ ಮುತುವರ್ಜಿ ವಹಿಸಿ ಮಾಡುತ್ತಾರೆ.
ಕುರಿ ಸಾಕಾಣಿಕೆ ಮಾಡಲು ಕೇಂದ್ರ ಸರ್ಕಾರದಿಂದ (NLM Scheme)ರೈತರಿಗೆ ಸಬ್ಸಿಡಿ ದರದಲ್ಲಿ ಸಾಲವನ್ನು ದೊರೆಯುತ್ತದೆ.
ಈ ಯೋಜನೆಯ ಸರ್ಕಾರ ಮೊದಲಿಗೆ 500 ಕುರಿಗಳಿಗೆ ಮಾತ್ರ ಮೀಸಲಿಟ್ಟಿದ್ದು ಇತ್ತೀಚಿನ ದಿನಗಳಲ್ಲಿ ಈ ಯೋಜನೆಯ 100 ಕುರಿ ಸಾಕಾಣಿಕೆಗೆ ನೀಡಲಾಗುತ್ತಿದೆ. ಈ ಯೋಜನೆಯಲ್ಲಿ ರೈತರಿಗೆ ಶೇಕಡ 50ರಷ್ಟು ಸಬ್ಸಿಡಿ ದೊರೆಯುತ್ತದೆ.
ಈ ಯೋಜನೆಯ ಉದ್ದೇಶ ಈ ಕೆಳಗಿನಂತೆವೆ.
- ಈ ಯೋಜನೆಯ ಕುರಿ ಸಾಕಾಣಿಕೆ. ಕೋಳಿ ಸಾಕಾಣಿಕೆ. ಹಂದಿ ಸಾಕಾಣಿಕೆ. ಮೇಕೆ ಸಾಕಾಣಿಕೆ. ಮಾಡಲು ರೈತರಿಗೆ ಕೊಡುವ ಯೋಜನೆಯಾಗಿದೆ.
- ಈ ಯೋಜನೆಯ ಕುರಿ ಮೇಕೆ ಕೋಳಿ ಹಂದಿ ಸಾಕಾಣಿಕೆಗೆ ಬೇಕಾಗುವ ಮೇವು ಮತ್ತು ಸೈಲೇಜ್. ತಿಂಡಿ ಸಂಸ್ಕರಣೆ ಘಟಕವನ್ನು ಪ್ರಾರಂಭಿಸಲು ಕಾರ್ಖಾನೆಗಳಿಗೆ ಸಬ್ಸಿಡಿಯನ್ನು ನೀಡಲಾಗುತ್ತದೆ.
- ಈ ಯೋಜನೆಯ ಹೊಸ ಹೊಸ ತಳಿ ಮತ್ತು ಬ್ರೀಡಿಂಗ್ ಮಾಡುವ ಕಂಪನಿಗಳಿಗೆ ಮತ್ತು ರೈತರಿಗೆ ನೀಡಲಾಗುತ್ತದೆ.
ಏನ್ ಎಲ್ ಎಮ್ ಸ್ಕೀಮ್ ನ ಪಡೆಯುವುದು ಹೇಗೆ.? ಈ ಯೋಜನೆಯನ್ನು ಪಡೆಯಲು ರೈತರು ಬಳಿ ಏನೆಲ್ಲ ದಾಖಲೆ ಇರಬೇಕು.
- ರೈತರ ಬಳಿ ಸ್ವಂತ ಅಥವಾ ಭೋಗ್ಯಕ್ಕೆ ಪಡೆದ ಒಂದು ಎಕರೆಗಿಂತ ಹೆಚ್ಚು ಭೂಮಿ ಇರಬೇಕು.
- ಬ್ಯಾಂಕ್ ಪರಿಶೀಲನೆ ಮಾಡಿದರೆ ನಿಮ್ಮ ಸಿವಿಲ್ ಸ್ಕೋರ್ ಹೆಚ್ಚಿರಬೇಕು.
- ಕುರಿ ಸಾಕಾಣಿಕೆ ಬಗ್ಗೆ ಹೆಚ್ಚಿನ ತರಬೇತಿ ಪಡೆದಿರಬೇಕು ಮತ್ತು ತರಬೇತಿ ಪಡೆದ ಸರ್ಟಿಫಿಕೇಟ್ ಹೊಂದಿರಬೇಕು.
- ಈ ಯೋಜನೆಯಲ್ಲಿ ಕಡ್ಡಾಯವಾಗಿ ನೂರು ಕುರಿ ಸಾಕಲೇ ಬೇಕು.
ಈ ಯೋಜನೆಯನ್ನು ಪಡೆಯಲು ಕೇಂದ್ರ ಸರ್ಕಾರ ನಿಯೋಜಿತ ಸಂಸ್ಥೆಗಳಲ್ಲಿ ಅಲ್ಲಿ ಅರ್ಜಿ ಸಲ್ಲಿಸಬೇಕು ಈ ಅರ್ಜಿ ಪುರಸ್ಕೃತ ಆದ ನಂತರವೇ ಮತ್ತು ಬ್ಯಾಂಕ್ ಲೋನ್ ಖಚಿತಪಡಿಸಿ ದ ನಂತರವೇ ಶೆಡ್ ನಿರ್ಮಾಣಕ್ಕೆ ಮುಂದಾಗಬೇಕು.
ಈ ಯೋಜನೆಯನ್ನು ಮಾಡಿಸಲು ಮಧ್ಯವರ್ತಿಗಳ ಹೆಚ್ಚು ಮೋಸ ಮಾಡುವ ಸಂಭವವಿದು ರೈತರು ಜಾಗೃತವಾಗಿ ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕು.
Really enjoyed this blog post, can I set it up so I get an email when there is a new article?
I think you have observed some very interesting points, appreciate it for the post.
Perfectly indited content, thankyou for selective information.
Write more, thats all I have to say. Literally, it seems as though you relied on the video to make your point. You definitely know what youre talking about, why waste your intelligence on just posting videos to your blog when you could be giving us something enlightening to read?
I have been exploring for a bit for any high-quality articles or blog posts in this kind of space . Exploring in Yahoo I eventually stumbled upon this site. Reading this info So i am satisfied to exhibit that I have a very just right uncanny feeling I found out exactly what I needed. I so much without a doubt will make sure to do not omit this site and provides it a glance on a constant basis.