ರೋಹಿತ್ ಮನೆಗೆ. ಕ್ಯಾಪ್ಟನ್ಶಿಪ್ ಕ್ಯಾಪ್ ಬುಮ್ರ ಮುಡಿಗೆ.!?
ಭಾರತದ ಆಸ್ಟ್ರೇಲಿಯಾ ಪ್ರವಾಸ ನವೆಂಬರ್ 22 ರಿಂದ ಪರ್ತ್ನಲ್ಲಿ ಪ್ರಾರಂಭವಾಗಲಿದ್ದು ಮೊದಲ ಟೆಸ್ಟ್ಗೆ ದಿನಗಣನೆ ಆರಂಭವಾಗಿದೆ.. ನಾಯಕ ರೋಹಿತ್ ಶರ್ಮಾ ವೈಯಕ್ತಿಕ ಕಾರಣಗಳಿಂದಾಗಿ ಮೊದಲ ಟೆಸ್ಟ್ನಲ್ಲಿ ಆಡುವುದಿಲ್ಲ ಎನ್ನಲಾಗ್ತಿದ್ದು ಜಸ್ಪ್ರೀತ್ ಬುಮ್ರ ನಾಯಕನ ಕ್ಯಾಪ್ ಧರಿಸಲಿದ್ದಾರೆ ಎಂದು ಕೋಚ್ ಗೌತಮ್ ಗಂಬೀರ್ ಹಿಂಟ್ ಕೊಟ್ಟಿದ್ದಾರೆ. ಯಶಸ್ವಿ ಜೈಸ್ವಾಲ್ ಬದಲಿಗೆ ಅಭಿಮನ್ಯು ಈಶ್ವರನ್ ಇನ್ನಿಂಗ್ಸ್ ಆರಂಭಿಸಬಹುದು. ಶುಬ್ಮನ್ ಗಿಲ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಆಡಬಹುದು ಎಂಬ ವರದಿ ಹರಿದಾಡ್ತಿದೆ. ಸದ್ಯ ವಿರಾಟ್ ಕೊಹ್ಲಿ ಫಾರ್ಮ್ ಆಯ್ಕೆಗಾರರೂ ಸೇರಿದಂತೆ ಅಭಿಮಾನಿಗಳ ನಿದ್ದೆ ಕೆಡಿಸಿದೆ. ಆದರೆ ಆಸ್ಟ್ರೇಲಿಯಾದಲ್ಲಿ ಅವರ ದಾಖಲೆ ಉತ್ತಮವಾಗಿದ್ದು ಕೊಂಚ ಸಮಾಧಾನಪಡುವಂತಾಗಿದೆ. ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಫಾರ್ಮ್ಗೆ ಮರಳುತ್ತಾರೆ ಎಂದು ನಿರೀಕ್ಷಿಸಲಾಗುತ್ತಿದ್ದು, ಬೂಮ್ರ ಕ್ಯಾಪ್ಟನ್ ಕ್ಯಾಪ್ ಧರಿಸಿದರೆ ಭಾರತದ ಅದೃಷ್ಟ ಖುಲಾಯಿಸುತ್ತಾ ? ಕಾದುನೋಡಬೇಕಿದೆ.