https://pagead2.googlesyndication.com/pagead/js/adsbygoogle.js?client=ca-pub-4722372128437229 ದೇಶ ಸೇವೆ ಮುಗಿದ ನಂತರ ರೈತನಾಗಿದ್ದಾರೆ ನಾಟಿ ಕೋಳಿ. -
ಕೃಷಿ

ದೇಶ ಸೇವೆ ಮುಗಿದ ನಂತರ ರೈತನಾಗಿದ್ದಾರೆ ನಾಟಿ ಕೋಳಿ.

ಪ್ಯೂರ್ ನಾಟಿ ಕೋಳಿ ಸಾಕಣಿಕೆಯಲ್ಲಿ ಕಡೂರಿನ ಆರ್ಮಿ ಪುಟ್ಟರಾಜು ಯಶಸ್ಸು ಕಂಡಿದ್ದಾರೆ.ಇತ್ತೀಚಿನ ದಿನಗಳಲ್ಲಿ ದೇಶ ಸೇವೆ ಮುಗಿಸಿ ಬಂದ ಯೋಧರು ಸರ್ಕಾರದ ಕೆಲಸಗಳಲ್ಲಿ ಸೇರಿಕೊಂಡರೆ. ಚಿಕ್ಕಮಂಗಳೂರು ಜಿಲ್ಲೆ, ಕಡೂರು ತಾಲೂಕಿನ ಹುಳುಕಿನ ಕಲ್ಲು ಗ್ರಾಮದ ನಿವಾಸಿಯಾದ ಪುಟ್ಟರಾಜು ಅವರು ದೇಶ ಸೇವೆ ಮುಗಿಸಿದ್ದು.ನಂತರ ಕೃಷಿಯಲ್ಲಿ ಆಸಕ್ತಿ ಹೆಚ್ಚಾಗಿ ತಮ್ಮ ಮಾವನವರ ಎರಡು ಎಕರೆ 10ಗುಂಟೆ ಜಾಗದಲ್ಲಿ ಕೋಳಿ ಸಾಕಾಣಿಕೆಯನ್ನು ಸಣ್ಣ ಪ್ರಮಾಣದಲ್ಲಿ ಆರಂಭಿಸಿದ್ದು ಯಶಸ್ಸು ಕಂಡಿದ್ದಾರೆ.

ಅಡಿಕೆ ತೋಟದಲ್ಲಿ ಕೋಳಿ ಸಾಕಾಣಿಕೆ ಶೆಡ್ ನಿರ್ಮಾಣ ಮಾಡಿ ತಮ್ಮ ತೋಟದ ಸುತ್ತಲೂ ಪರದೆಯನ್ನು ಕಟ್ಟಿ ಕೋಳಿಗಳನ್ನು ತಮ್ಮ ತೋಟದಲ್ಲಿ ಇರುವ ಹಾಗೆ ಹಾಗೂ ತೋಟದ ಹೊರಗೆ ಹೋಗದ ಹಾಗೆ ಹಾಗೂ ಹಾವು . ಮುಂಗುಸಿ . ಮತ್ತು ನಾಯಿಗಳು ಬರದಂತೆ ಮಾಡಿದ್ದಾರೆ

ಪುಟ್ಟರಾಜು ಅವರು ತಮ್ಮ ಶೆಡ್ ನಲ್ಲಿ ಕೋಳಿಗಳು ಒಂದೇ ಕಡೆಯಲ್ಲಿ ಇರದ ಹಾಗೆ ನಾಲ್ಕು ವಿಭಾಗವಾಗಿ ಮಾಡಿಕೊಂಡಿದ್ದಾರೆ.
ಮೊದಲನೆಯದಾಗಿ ಮೊಟ್ಟೆ ಇಡುವ ಕೋಳಿಗಳಿಗೆ . ಎರಡನೆಯದಾಗಿ ಮರಿ ಮಾಡಿರುವ ಕೋಳಿಗಳಿಗೆ .
ಮೂರನೆಯದಾಗಿ ರೋಗ ಬಂದ ಕೋಳಿಗಳಿಗೆ ಒಂದು ಭಾಗ. ಕಾವಿಗೆ ಕೂರಿಸಿರುವ ಕೋಳಿಗಳಿಗೆ ಒಂದು ಭಾಗ ಹೀಗೆ ನಾಲ್ಕು ಭಾಗಗಳಾಗಿ ವಿಂಗಡಣೆ ಮಾಡಿಕೊಂಡಿದ್ದಾರೆ.

ಕೋಳಿ ಸಾಕಾಣಿಕೆಯಲ್ಲಿ ಖರ್ಚು ಕಡಿಮೆ ಮಾಡಲು ವೇಸ್ಟ್ ಮ್ಯಾನೇಜ್ಮೆಂಟ್ ಅನ್ನು ಬಳಕೆ ಮಾಡಿಕೊಳ್ಳುತ್ತಾರೆ. ಪುಟ್ಟರಾಜು ಅವರು ತಮ್ಮ ಊರಿನ ಬಳಿ ಇರುವ ಹತ್ತಿರದ ಕಡೂರು ಮಾರ್ಕೆಟ್ ನಲ್ಲಿ ಉಳಿದ ತರಕಾರಿ . ಹಣ್ಣು. ಮತ್ತು ಸೊಪ್ಪುಗಳನ್ನು ತಂದು ಬೆಳಗ್ಗೆ ಕೋಳಿಗಳಿಗೆ ಆಗುತ್ತಾರೆ ಇದರಿಂದಾಗಿ ಖರ್ಚು ಕಡಿಮೆಯಾಗಿ ಕೋಳಿಗಳಿಗೆ ಅಧಿಕ ಪ್ರೋಟೀನ್ ದೊರೆಯುತ್ತದೆ ಹೆಚ್ಚಾಗಿ ಉಳಿತಾಯವಾಗುತ್ತದೆ.

ಪ್ಯೂರ್ ನಾಟಿ ಕೋಳಿಗಳಿಗೆ ನೀರು ಕುಡಿಯಲು ತಮ್ಮದೇ ಮನೆಯಲ್ಲಿ ಇರುವ ಬಣ್ಣದ ಡಬ್ಬ ಹಾಗೂ ಪ್ಲಾಸ್ಟಿಕ್ ವಸ್ತುಗಳನ್ನು ಬಳಸುತ್ತಾರೆ ಮಧ್ಯಾಹ್ನದ ನಂತರ ಕೋಳಿಗಳಿಗೆ ಅಕ್ಕಿ. ರಾಗಿ. ಸಜ್ಜೆಯನ್ನು ಹಾಕುತ್ತಾರೆ.

ಕೋಳಿಗಳಿಗೆ ರೋಗ ಬಂದಾಗ ಮೊದಲು ಅವರು ಔಷಧಿಗಳನ್ನು ಅಧಿಕವಾಗಿ ಬಳಸುತ್ತಿದ್ದರು. ಇದರಿಂದಾಗಿ ಹೆಚ್ಚಿನ ಖರ್ಚಾಗುತ್ತಿದ್ದು ನಂತರ ಅವರೇ ನಾಟಿ ಔಷಧಿಗಳನ್ನು ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ.

ಪುಟ್ಟರಾಜು ಅವರು ಪ್ಯೂರ್ ನಾಟಿ ಕೋಳಿ ಸಾಕಾಣಿಕೆ ಮಾಡಿಕೊಂಡು ಸ್ಥಳೀಯವಾಗಿ ಮಾರುಕಟ್ಟೆ ಸೃಷ್ಟಿಸಿಕೊಂಡಿದ್ದಾರೆ ಇದರಿಂದಾಗಿ ಅವರು ತಮ್ಮಲ್ಲಿರುವ ಮೊಟ್ಟೆ ಒಂದು ತಿಂಗಳ ಕೋಳಿ ಮರಿಗಳನ್ನು ಮತ್ತು ಹುಂಜಗಳನ್ನು ಮಾರಾಟ ಮಾಡುತ್ತಾರೆ.

ಕೋಳಿಗಳು ತಮ್ಮ ತೋಟದಲ್ಲಿ ಹಸಿರು ಹುಲ್ಲುಗಳನ್ನು ಹೆಚ್ಚಾಗಿ ತಿನ್ನುವುದರಿಂದ ಕಳೆ ನಿರ್ವಹಣೆ ಯಾಗಿದ್ದು ಮತ್ತು ಯಂತ್ರಗಳ ಹೆಚ್ಚು ಬಳಕೆ ಮಾಡಿಲ್ಲದ್ದುದರಿಂದ ಮತ್ತು ಕೋಳಿಗಳ ಗೊಬ್ಬರ ಬಳಸುವುದರಿಂದ ಅಡಿಕೆ ತೋಟದಲ್ಲಿ ಅಧಿಕ ಇಳುವರಿ ಯನ್ನು ಪಡೆದಿದ್ದಾರೆ.

ಪ್ಯೂರ್ ನಾಟಿ ಕೋಳಿ ಸಾಕಾಣಿಕೆಯಲ್ಲಿ ಲಾಭ ಮಾಡಬೇಕಾದರೆ ಈ ಸ್ಮಾರ್ಟ್ ಐಡಿಯಾ ಮಾಡಬೇಕು.

ಪ್ಯೂರ್ ನಾಟಿ ಕೋಳಿ ಸಾಕಾಣಿಕೆಯಲ್ಲಿ ಕೋಳಿ ಮತ್ತು ಮೊಟ್ಟೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕಾಗುತ್ತದೆ ಕಾರಣ ಯಾಟೆಗಳು ಸಾಂಪ್ರದಾಯಿಕ ವಿಧಾನದಲ್ಲಿ ಕಾವಿಗೆ ಕೂರಿಸಿ ಮರಿ ಮಾಡಿಸುತ್ತಾರೆ. ಆ ಮರಿಗಳ ಪಾಲನೆ ಪೋಷಣೆ ಕೋಳಿಗಳು ಮಾಡುತ್ತವೆ .ಇದರಿಂದ ಕೋಳಿಗಳ ಸಂಖ್ಯೆ ಹೆಚ್ಚಾಗಿ ಅಧಿಕ ಮೊಟ್ಟೆ ಇಡುವ ಕೋಳಿಗಳು ಮತ್ತು ಮರಿಗಳು ಹೆಚ್ಚಾಗುತ್ತವೆ.

ನಾಟಿ ಕೋಳಿ ಸಾಕಾಣಿಕೆಯಲ್ಲಿ ಇವರಿಗೆ ಎರಡು ವರ್ಷ ಯಾವುದೇ ಆದಾಯ ಇರಲಿಲ್ಲ ನಂತರ ಕೋಳಿಗಳನ್ನು ಹೆಚ್ಚಿಸಿಕೊಂಡು ನಂತರ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ ಮತ್ತು ಸ್ಥಳೀಯರೇ ಇವರ ಬಳಿ ಮೊಟ್ಟೆ ಮತ್ತು ಕೋಳಿಯನ್ನು ಹೆಚ್ಚಾಗಿ ಹಬ್ಬದ ಸಂದರ್ಭದಲ್ಲಿ ಇವರ ಫಾರಂ ಹತ್ತಿರ ಬಂದು ಸ್ಥಳೀಯರು ಕೋಳಿಗಳನ್ನು ಖರೀದಿಸುತ್ತಾರೆ.

ಪ್ಯೂರ್ ನಾಟಿ ಹುಂಜಗಳ ಸಂಖ್ಯೆ ಯು ಹೆಚ್ಚಾದಂತೆ ಇವರು ಸ್ಥಳೀಯ ಮಾರುಕಟ್ಟೆಯಲ್ಲಿ ಹುಂಜಗಳನ್ನು ಮಾರಾಟ ಮಾಡುತ್ತಾರೆ ಇವರು ಒಂದು ಕೆಜಿಗೆ 420 ರೂಪಾಯಿಗೆ ಮಾರಾಟ ಮಾಡುತ್ತಾರೆ.ನಾಟಿ ಕೋಳಿ ಸಾಕಾಣಿಕೆಯಲ್ಲಿ ಹೊಸದಾಗಿ ಪ್ರಾರಂಭಿಸುವವರು 10 ಕೋಳಿಗೆ ಒಂದು ಹುಂಜ ಇದ್ದರೆ ಸಾಕು.

ಇವರು ಕೋಳಿಗಳಿಗೆ ಮತ್ತು ಮರಿಗಳಿಗೆ ಮೇವುಗಳನ್ನು ಅವರೇ ತಯಾರಿಸಿಕೊಂಡು ಹೆವಿ ಪ್ರೋಟೀನ್ ಇರುವ ಮೊಳಕೆ ಕಟ್ಟಿದ ರಾಗಿ ಮರಿಗಳಿಗೆ ಮತ್ತು ಕೋಳಿಗಳಿಗೆ ಕೊಡುವುದರಿಂದ ಹೆಚ್ಚು ಆರೋಗ್ಯವಾಗಿ ಬೆಳೆಯುತ್ತವೆ.

ನೆನೆಸಿದ ರಾಗಿ ಕಾಳುಗಳನ್ನು 24 ಗಂಟೆ ನಂತರ ಒಂದು ಬಟ್ಟೆಯಲ್ಲಿ ಸುತ್ತಿ ಒಂದು ದಿನ ಇಟ್ಟು ಮೊಳಕೆ ಬಂದ ನಂತರ ಮೊಟ್ಟೆ ಇಡುವ ಕೋಳಿಗಳಿಗೆ ಮತ್ತು ಮರಿಗಳಿಗೆ ನೀಡುವುದರಿಂದ ಹೆಚ್ಚು ಪ್ರೋಟೀನ್ ಕೋಳಿಗಳಿಗೆ ಸಿಗುತ್ತದೆ ಹೆಚ್ಚು ಆರೋಗ್ಯವಾಗಿರುತ್ತವೆ.

ಪ್ಯೂರ್ ನಾಟಿ ಕೋಳಿ ಗಳಿಗೆ ಆರ್ಗ್ಯಾನಿಕ್ ಮೆಡಿಸನ್ ಮಾಡಿಕೊಳ್ಳುತ್ತಿರುವ ಇವರು ಇಂಗ್ಲಿಷ್ ಮೆಡಿಸನ್ ಗಳನ್ನು ಹೆಚ್ಚು ಬಳಕೆ ಮಾಡುತ್ತಿದ್ದರು ಹೀಗಾಗಿ ಅಧಿಕ ಖರ್ಚಾಗುತ್ತಿತ್ತು. ನಂತರ ಇವರು ನಟಿ ಔಷಧಿ ಬಗ್ಗೆ ತಿಳಿದುಕೊಂಡು ಕೋಳಿಗಳಿಗೆ ಲಿವರ್ ಸಮಸ್ಯೆಗೆ ಬೆಳ್ಳುಳ್ಳಿಗಳನ್ನು ಈರುಳ್ಳಿಯನ್ನು ನುಗ್ಗೆ ಸೊಪ್ಪನ್ನು ಅರಿಶಿನ ಮಿಶ್ರಣ ಮಾಡಿ ಕೊಡುತ್ತಿದ್ದರು.

ಈ ರೀತಿಯ ನಾಟಿ ಔಷಧಿಯಲ್ಲಿ ಬಳಸುತ್ತಾರೆ ಕೋಳಿಗಳಿಗೆ ದಿನನಿತ್ಯ ಇಡುವ ನೀರು ಡಬ್ಬಿಗಳನ್ನು ಸ್ವಚ್ಛಗೊಳಿಸಿ ದಿನ ಸ್ವಚ್ಛವಾದ ನೀರನ್ನು ಬಳಸುತ್ತಿದ್ದಾರೆ.ಸ್ವಚ್ಛ ನೀರು ಇಡುವುದರಿಂದ ಕೋಳಿಗಳಿಗೆ ಕಾಯಿಲೆ ಕಡಿಮೆಯಾಗುತ್ತದೆ ಮತ್ತು ಇವರು ಪ್ರತಿ ಎರಡು ತಿಂಗಳಿಗೆ ಕೋಳಿಗಳಿಗೆ ಲಸೋಟ ಔಷಧಿ ನೀಡುತ್ತಾರೆ ಮತ್ತು ಮರಿಗಳಿಗೆ ಕಣ್ಣಿಗೆ ಮಾತ್ರ (F1)ಎಫ್ ಒನ್.(IBD) ಐಬೀಡಿ. ಲಸೋಟ ಔಷಧಿ ನೀಡುತ್ತಾರೆ ಜೊತೆಗೆ ಮೂರು ತಿಂಗಳಿಗೊಮ್ಮೆ ಡಿ ವಾರ್ನಿಂಗ್ ಜಂತುಹುಳಕ್ಕೆ ಔಷಧಿಯನ್ನು ನೀಡುತ್ತಾರೆ.

ವಾರಕ್ಕೆ ಎರಡು ಬಾರಿ ಬೆಳ್ಳುಳ್ಳಿ ಮತ್ತು ತುಳಸಿಯನ್ನು ನೀಡುತ್ತಾರೆ. ಬಿಸಿಲ ಸಮಯದಲ್ಲಿ ಈರುಳ್ಳಿ ಹೆಚ್ಚಾಗಿ ನೀಡುತ್ತಾರೆ.

ನೂರು ಜನರಲ್ಲಿ 10% ಜನಕ್ಕೆ ಮಾತ್ರ ಗೊತ್ತು, ಪ್ಯೂರ್ ನಾಟಿ ಕೋಳಿಯ ಬಗ್ಗೆ ಪ್ಯೂರ್ ನಾಟಿ ಕೋಳಿ ಗಳಿಗಿಂತ ಬೇರೆ ತಳಿಯ ಕೋಳಿಗಳು ಬೇಗನೆ ಬೆಳವಣಿಗೆ ಹೆಚ್ಚಾಗಿ ಅಧಿಕ ತೂಕ ಬರುವುದರಿಂದ ಜನರು ಹೆಚ್ಚಾಗಿ ಆ ಕೋಳಿಗಳಿಗೆ ಹೆಚ್ಚು ಆಕರ್ಷಿತರಾಗುತ್ತಾರೆ.

ಪ್ಯೂರ್ ನಾಟಿ ಕೋಳಿಯ ಆರು ತಿಂಗಳಿಗೆ ಒಂದರಿಂದ ಒಂದುವರೆ ಕೆಜಿ ಬಂದರೆ ಇತರೆ ಕೋಳಿಗಳು ಕೇವಲ ಮೂರು ತಿಂಗಳಲ್ಲಿ ಒಂದೂವರೆ ಕೆಜಿ ಬರುತ್ತದೆ ಹೀಗಾಗಿ ಜನ ನಾಟಿ ಕೋಳಿಗಳನ್ನು ಸಾಕಾಣಿಕೆ ಕಡಿಮೆಯಾಗಿದೆ

ಪ್ಯೂರ್ ನಾಟಿ ಕೋಳಿ ಸಾಕಾಣಿಕೆಯಲ್ಲಿ ಖರ್ಚು ಕಡಿಮೆ ಆಗುತ್ತದೆ ಏಕೆಂದರೆ ಕೋಳಿಗಳನ್ನು ಹೊರಗಡೆ ಪರಿಸರದಲ್ಲಿ ಮೇಯಿಸುವುದರಿಂದ ಖರ್ಚು ಕಡಿಮೆಯಾಗುತ್ತದೆ.

ಪ್ಯೂರ್ ನಾಟಿಕೋಳಿ ಸಾಕಣಿಕೆ ಅಥವಾ ಹಸು ಸಾಕಾಣಿಕೆಯಲ್ಲಿ ಮೊದಲ ಹಂತದಲ್ಲಿ ಕಡಿಮೆ ಪ್ರಮಾಣದಿಂದ ಸಾಕಾಣಿಕೆ ಮಾಡಿ ನಂತರ ಮಾರುಕಟ್ಟೆ ರೋಗ ಸಾಕಾಣಿಕೆ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಂಡು ಮುಂದುವರಿಯಬೇಕು ಹೆಚ್ಚು ಹಣ ಇದೆ ಎಂದು ಬಂಡವಾಳ ಅಧಿಕ ಮಾಡಿದರೆ ನಷ್ಟ ಅನುಭವಿಸುವ ಸಂದರ್ಭವಿರುತ್ತದೆ.ಕೊನೆಯದಾಗಿ ನಾಟಿ ಕೋಳಿ ಸಾಕಾಣಿಕೆಯಲ್ಲಿ ತಾಳ್ಮೆ ಇರಬೇಕು ಧನ್ಯವಾದಗಳು.

ನಾಟಿ ಕೋಳಿ ಸಾಕಾಣಿಕೆಯಲ್ಲಿ ನಷ್ಟವಾಗುತ್ತದೆ ಎಂದು ಹೇಳುವ ರೈತರು ಪುಟ್ಟರಾಜು ಅವರ ಕೋಳಿ ಸಾಕಾಣಿಕೆಯನ್ನು ಅನುಸರಿಸಿದರೆ ಯಶಸ್ವಿಯಾಗುತ್ತಾರೆ.

Leave a Reply

Your email address will not be published. Required fields are marked *