https://pagead2.googlesyndication.com/pagead/js/adsbygoogle.js?client=ca-pub-4722372128437229 ಮಾವು ಮತ್ತು ಹಲಸು ಹಣ್ಣಿನ ಗಿಡಗಳಿಗೆ ಕಸಿ ಪದ್ಧತಿ ಅಭಿವೃದ್ಧಿ..! (Agriculture farming) -
ಕೃಷಿ

ಮಾವು ಮತ್ತು ಹಲಸು ಹಣ್ಣಿನ ಗಿಡಗಳಿಗೆ ಕಸಿ ಪದ್ಧತಿ ಅಭಿವೃದ್ಧಿ..! (Agriculture farming)

ನವಿಕ್ರಮ್‌ ರವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಲಕ್ಷ್ಮೀದೇವಿಪುರ ಗ್ರಾಮದವರಾಗಿದ್ದು 24 ಎಕರೆ ಜಮೀನನ್ನು ಹೊಂದಿದ್ದಾರೆ.(Agriculture farming)

ಇವರು ಸಮಗ್ರ ಕೃಷಿಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದುಇವರು ವಿವಿಧ ಬಗೆಯ ದೀರ್ಘಾವಧಿ ಬೆಳೆಗಳಾದ ತೋಟಗಾರಿಕಾ ಬೆಳೆಗಳನ್ನು ನೂತನ ತಂತ್ರಜ್ಞಾನಗಳನ್ನು ಆಳವಡಿಸಿಕೊಂಡು ವೈಜ್ಞಾನಿಕವಾಗಿ ಬೆಳೆಯುತ್ತಿದ್ದಾರೆ.

ಇವರ ಕೃಷಿಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದು ಮೊದಲು ದೀರ್ಘಾವಧಿ ಬೆಳೆಗಳಾದ ಹಣ್ಣಿನ ಬೆಳೆಗಳನ್ನು ಬೆಳೆಯುತ್ತಾರೆ, ಮಾವಿನ ಹಣ್ಣನ್ನು ಹೆಚ್ಚಾಗಿ ಬೆಳೆಯುತ್ತಾರೆ. ಜೊತೆಗೆ ದ್ರಾಕ್ಷಿ ಸೀಬೆ ಸಪೋಟ ನೇರಳೆ ಡ್ರ್ಯಾಗನ್ ಫ್ರೂಟ್ ಇನ್ನಿತರ ಹಣ್ಣಿನ ಗಿಡ ಮತ್ತು ಮರಗಳನ್ನು ಬೆಳೆಸಿ ವಾರ್ಷಿಕ ಆದಾಯ ಪಡೆಯುತ್ತಾರೆ.

ಜೊತೆಗೆ ಇದರ ಮಧ್ಯದ ಭಾಗದಲ್ಲಿ ಇನ್ನಿತರ ಹಣ್ಣಿನ ಮರಗಳನ್ನು ಬೆಳೆದಿದ್ದಾರೆ ಈ ರೀತಿಯ ಬೆಳೆಯ ಶೂನ್ಯ ಬಂಡವಾಳ ಬೆಳೆಯಾಗಿದ್ದು ಹೆಚ್ಚಿನ ಕೂಲಿಕಾರ್ಮಿಕರ ಅವಶ್ಯಕತೆ ಇರುವುದಿಲ್ಲ ಬೆಳೆಯು ಕೂಡ ಅಧಿಕ ಲಾಭ ಗಳಿಸುತ್ತಿದ್ದಾರೆ.

ಪ್ರಮುಖವಾಗಿ ಹಣ್ಣಿನ ಬೆಳೆಗಳಾದ ಮಾವು (ಮಲ್ಲಿಕಾ, ಬಾದಮಿ, ತೋತಪೂರಿ, ಬೆನೆಶಾ, ನಿಲಂ), ದ್ರಾಕ್ಷಿ , ಸೀಬೆ, ಸಪೋಟ, ನೇರಳೆ, ಹಲಸು, ಡ್ರಾಗನ್ ಫೂಟ್, ನಿಂಬೆ, ದಾಳಿಂಬೆ, ಬಾಳೆ, ಪರಂಗಿ, ಮೂಸಂಬಿ, ಸೀತಾಫಲ, ಚಕೋತ, ಅಂಜೂರ, ನೆಲ್ಲಿ, ಕಿತ್ತಳೆ, ಅನಾನಸ್ ತಳಿಯ ಹಣ್ಣನ್ನು ಬೆಳೆಯುತ್ತಿದ್ದಾರೆ.

ಹಾಗೂ ವಾಣಿಜ್ಯ ಬೆಳೆಗಳಾದ ತೆಂಗು ಮತ್ತು ಅಡಿಕೆಯನ್ನು ಬೆಳೆಯುತ್ತಿದ್ದಾರೆ.

ಅಲ್ಲದೆ ತರಕಾರಿ ಬೆಳೆಗಳಾದ ಸೌತೆಕಾಯಿ, ಕೊತ್ತಂಬರಿ, ಹೂ ಕೋಸು, ಆಲೂಗಡ್ಡೆ, ಟೊಮ್ಯಾಟೊ, ಹೀರೆಕಾಯಿ, ಹಾಗಲಕಾಯಿ, ಬೂದಗುಂಬಳ, ಮೂಲಂಗಿ, ಕುಂಬಳ, ನುಗ್ಗೆ, ಗಡ್ಡೆಕೋಸು,ಬೆಳೆಯುತ್ತಿದ್ದಾರೆ.ಹೂವಿನ ಬೆಳೆಗಳಾದ ಚೆಂಡು ಹೂವು, ಸೇವಂತಿಗೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

ಈ ರೀತಿಯ ದೀರ್ಘಾವಧಿ ಬೆಳೆಯ ಜೊತೆಗೆ ವಾಣಿಜ್ಯ ಬೆಳೆ ಮತ್ತು ಮಾರುಕಟ್ಟೆಗೆ ಅನುಗುಣವಾಗಿ ತರಕಾರಿ ಬೆಳೆಯುವುದು ಮತ್ತು ಹಬ್ಬದ ದಿನಗಳನ್ನು ನೋಡಿಕೊಂಡು ಹಬ್ಬಕ್ಕೆ ಸರಿಯಾಗಿ ಹೂವಿನ ಬೆಳೆ ಬರುವಂತೆ ನಾಟಿ ಮಾಡುತ್ತಾರೆ ಹಾಗೂ ತಾವು ಬೆಳೆದ ಬೆಳೆಯನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಅಲ್ಪಸಮಯದಲ್ಲಿ ಅಧಿಕ ಲಾಭ ಗಳಿಸುತ್ತಿದ್ದಾರೆ.

ಇವರು ಗಿಡಗಳಿಗೆ ಕಸಿ ಮಾಡುವ ಪದ್ಧತಿಯನ್ನು ಸ್ವತಃ ತಾವೇ ರೂಡಿಸಿಕೊಂಡಿದ್ದು ಹಲಸಿನಲ್ಲಿ ಅಪ್ರೋಚ್ ಕಸಿ ಪದ್ಧತಿ ಹಾಗೂ ಮಾವಿನಲ್ಲಿ ವಿನಿಯರ್ ಕಸಿ ಪದ್ಧತಿಯನ್ನು ಬಳಸಿ ಸಸಿಗಳ ಅಭಿವೃದ್ಧಿ ಮಾಡುತ್ತಿದ್ದಾರೆ.

ಅಲ್ಲದೆ ತೋಟಗಾರಿಕಾ ತಜ್ಞರ ಸಲಹೆಯಂತೆ ನೂತನ ಪದ್ಧತಿಗಳಾದ ರಸಾವರಿ, ಹೊದಿಕೆ ಅಳವಡಿಕೆ, ಸಮಗ್ರ ಪೋಷಕಾಂಶಗಳ ನಿರ್ವಹಣೆ ಮತ್ತು ಚಾಟನಿಯಂತಹ ಉಪಯುಕ್ತ ತಾಂತ್ರಿಕತೆಗಳ ಬಳಕೆಯಿಂದ ಉತ್ತಮ ಇಳುವರಿ ಮತ್ತು ಲಾಭವನ್ನು ಪಡೆಯುತ್ತಿದ್ದಾರೆ. ಜೊತೆಗೆ ಹಣ್ಣಿನ ಬೆಳೆಗಳಲ್ಲಿ ಮಿಶ್ರ ಬೆಳೆ ಪದ್ಧತಿಯನ್ನು ಅಳವಡಿಸಿಕೊಂಡು ಬೆಳೆ ವೈವಿದ್ಯತೆಯನ್ನು ಕಾಪಾಡಿಕೊಂಡಿದ್ದಾರೆ.

ಮಾವಿನ ಹಣ್ಣಿನ ಗಿಡಗಳು ಮತ್ತು ಹಲಸಿನ ಹಣ್ಣಿನ ಗಿಡ ಕಸಿ ಮಾಡುವುದರಿಂದ ಗಿಡ ಬೇಗ ಪ್ರೌಢಾವಸ್ಥೆಗೆ ಬಂದು ಕೇವಲ 1 ರಿಂದ 2 ವರ್ಷಗಳಲ್ಲಿ ಮರವು ಹಣ್ಣನ್ನು ಬಿಡಲು ಪ್ರಾರಂಭಿಸುತ್ತದೆ ಇದರಿಂದ ಹೆಚ್ಚು ದಿನಗಳವರೆಗೆ ಕಾಯುವ ಅವಶ್ಯಕತೆ ಇರುವುದಿಲ್ಲ ಕಸಿ ಮಾಡದಿದ್ದರೆ ಹೆಚ್ಚಿನ ದಿನಗಳವರೆಗೆ ಕಾಯಬೇಕಾಗುತ್ತದೆ.

ಮಳೆ ನೀರಿನ ಸಂರಕ್ಷಣೆ ಹೇಗೆ ಮಾಡಿದ್ದಾರೆ

ನವಿಕ್ರಮ್ ‌ರವರು ಮಣ್ಣು ಮತ್ತು ನೀರಿನ ಸಂರಕ್ಷಣೆಗಾಗಿ ಬದುಗಳ ನಿರ್ಮಾಣ, ಬಸಿಗಾಲುವೆ, ಮಾಗಿ ಉಳುಮೆ, ಸಣ್ಣ ಬದುಗಳ ನಿರ್ಮಾಣ, ಏರು ಮಡಿಗಳ ನಿರ್ಮಾಣ ಮಾಡಿರುವುದಲ್ಲದೆ,

ತಮ್ಮ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಿಸಿ ಶೇಖರಿಸಿದ ಮಳೆ ನೀರನ್ನು ಮತ್ತು ಕೊಳವೆ ಬಾವಿ ನೀರನ್ನು ಬೆಳೆಗಳ ಸಂದಿಗ್ಧ ಹಂತಗಳಲ್ಲಿ ಹನಿ ನೀರಾವರಿ ಮೂಲಕ ಒದಗಿಸಿ, ಅಧಿಕ ಆದಾಯ ಪಡೆಯುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಬರಗಾಲ ಹೆಚ್ಚಾಗಿದ್ದು ಈ ರೀತಿಯ ಮಳೆ ನೀರನ್ನು ಸಂಗ್ರಹಿಸಿ ಹಾಗೂ ಹಿಂಗು ಗುಂಡಿಗಳನ್ನು ನಿರ್ಮಿಸುವುದು ಇದರಿಂದ ಅಂತರರ್ಜಲ ಹೆಚ್ಚಾಗುತ್ತದೆ ಮತ್ತು ಹನಿ ನೀರಾವರಿ ಬಳಕೆಯಿಂದ ನೀರನ್ನು ಮಿತವಾಗಿ ಬಳಸಬಹುದಾಗಿದೆ ಬೇಸಿಗೆಕಾಲದಲ್ಲಿ ಹೆಚ್ಚಿನ ಪ್ರಯೋಜನವಾಗುತ್ತದೆ ಪ್ರತಿಯೊಬ್ಬ ರೈತನು ಕೂಡ ಈ ರೀತಿ ನೀರನ್ನು ಸಂಗ್ರಹಿಸಬೇಕು.

ಮಣ್ಣು ಪರೀಕ್ಷೆ ಮತ್ತು ರೋಗನಿರ್ವಹಣೆ (Agriculture farming)

ಜೊತೆಗೆ ಇವರು ಆಗಾಗ ಮಣ್ಣು ಪರೀಕ್ಷೆ ಮಾಡಿಸಿ ಅದರ ವರದಿಗನುಗುಣವಾಗಿ ಕೊಟ್ಟಿಗೆ ಗೊಬ್ಬರ. ಎರೆಹುಳು ಗೊಬ್ಬರ, ಕಾಂಪೋಸ್ಟ್ ಲಘು ಪೋಷಕಾಂಶಗಳ ಮಿಶ್ರಣಗಳ ಜೊತೆಗೆ ರಸಗೊಬ್ಬರಗಳ ಮಿತ ಬಳಕೆಯಿಂದ ಖರ್ಚನ್ನು ಕಡಿವು ಮಾಡಿ ಅಧಿಕ ಲಾಭವನ್ನು ಪಡೆಯುತ್ತಿದ್ದಾರೆ.

ಕೃಷಿಯಲ್ಲಿ ರೈತರು ಆಗಾಗ ಮಣ್ಣಿನ ಪರೀಕ್ಷೆಯನ್ನು ಮಾಡಿಸುವುದು ಉತ್ತಮ ಏಕೆಂದರೆ ಮಣ್ಣಿನಲ್ಲಿ ಫಲವತ್ತತೆ ಕಡಿಮೆಯಾದಾಗ ರೈತರು ಯಾವ ಗೊಬ್ಬರ ಕೊಡಬೇಕು ಮತ್ತು ಯಾವ ಬೆಳೆ ಬೆಳೆದರೆ ಸೂಕ್ತ ಎಂದು ತಿಳಿಯುತ್ತದೆ.

ಸಮಗ್ರ ಪೋಷಕಾಂಶಗಳ ನಿರ್ವಹಣೆ ಮಾಡುತ್ತಿದ್ದಾರೆ. ಅಲ್ಲದೇ ಕೀಟ ಮತ್ತು ರೋಗ ನಿರ್ವಹಣೆಗೆ ಬೇವಿನ ಬೀಜದ ಕಷಾಯ, ಹಳದಿ ಅಂಟು ಪಟ್ಟಿ, ಮೋಹಕ ಬಲೆ, ಟ್ರೈಕೋಡರ್ಮ, ಸುಡೋಮಾನಸ್, ಪರತಂತ್ರ ಜೀವಿಗಳು, ಸಸ್ಯ ಸಂರಕ್ಷಣಾ ರಸಾಯನಿಕಗಳ ಸಮಗ್ರ ಬಳಕೆ ಮಾಡುತ್ತಿದ್ದಾರೆ.

ಇವರು ಸಾವಯವ ಕೃಷಿಗೂ ಆದ್ಯತೆ ನೀಡಿದ್ದು ಕೊಟ್ಟಿಗೆ ಗೊಬ್ಬರ, ಎರೆಹುಳು ಗೊಬ್ಬರ, ಕಾಂಪೋಸ್ಟ್, ಜೀವಾಮೃತ, ಪಂಚಗವ್ಯ, ಹಸಿರೆಲೆ ಗೊಬ್ಬರ, ಮೈಕ್ರೋಬಿಯಲ್ ಕನ್ಸಾರ್ಸಿಯ ಮತ್ತು ಜೈವಿಕ ಗೊಬ್ಬರಗಳನ್ನು ಬಳಸಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿದ್ದಾರೆ.

ಇವರು ಕೃಷಿ ಯಂತ್ರೋಪಕರಣಗಳಾದ ಟ್ರ್ಯಾಕ್ಟರ್, ಪವರ್ ಸ್ಟೇಯರ್, ರೊಟೊವೇಟರ್ ಮತ್ತು ಬೂಮರ್ ಸ್ಟೇಯರ್ ಬಳಸಿ ಕೃಷಿ ಚಟುವಟಿಕೆಗಳನ್ನು ಸುಲಭವಾಗಿಸಿ ಕೊಂಡಿದ್ದಾರೆ ಮತ್ತು ಶ್ರಮ ಹಾಗೂ ಸಮಯದ ಉಳಿತಾಯ ಮಾಡಿದ್ದಾರೆ.

ಅಲ್ಲದೆ ತಮ್ಮ ಜಮೀನಿನಲ್ಲಿ ಬೆಳೆದ ಉತ್ಪನ್ನಗಳನ್ನು ವೈಜ್ಞಾನಿಕವಾಗಿ ಕೊಯ್ದು ಮಾಡಿ ವಿಂಗಡಿಸಿ ಪ್ಯಾಕಿಂಗ್ ಮಾಡಿ. ಅಧಿಕಾರಿಗಳ ಮತ್ತು ಇಂಟರ್‌ನೆಟ್ ಮೂಲಕ ಮಾರುಕಟ್ಟೆ ಮಾಹಿತಿ ಪಡೆದು ಸಫಲ್, ಹಾಪ್ ಕಾಮ್ಸ್‌ನಲ್ಲಿ ಮಾರಾಟ ಮಾಡಿ ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ.

ನವಿಕ್ರಮ್‌ರವರು ಮಾವು ಬೆಳೆಗಾರರ ಸಂಘ, ತರಕಾರಿ ಬೆಳೆಗಾರರ ಸಂಘ, ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯತ್ವ ಹೊಂದಿದ್ದು ಅಲ್ಲಿ ದೊರೆಯುವ ಸೌಲಭ್ಯಗಳನ್ನು ಬಳಸಿ ಕೊಳ್ಳುತ್ತಿದ್ದಾರೆ.

ಜೊತೆಗೆ ಕೃಷಿಗೆ ಸಂಬಂಧಪಟ್ಟ ಪ್ರಕಟಣೆಗಳಾದ ಕೃಷಿ ಜಾಗರಣ, ಐಶ್ವರ್ಯ ಕೃಷಿ ಪತ್ರಿಕೆಗಳಿಗೆ ಚಂದದಾರಾಗಿದ್ದು ಅವುಗಳ ಸದುಪಯೋಗ ಪಡೆಯುತ್ತಿದ್ದಾರೆ. ಅಲ್ಲದೆ ರೇಡಿಯೋ ಮತ್ತು ದೂರದರ್ಶನದ ವಿವಿಧ ಕಾರ್ಯಕ್ರಮಗಳಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿರುವುದಲ್ಲದೆ,

ಕೃಷಿ ವಿಜ್ಞಾನ ಕೇಂದ್ರ, ಅಭಿವೃದ್ಧಿ ಇಲಾಖೆಗಳ ತರಬೇತಿ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ತೋಟಗಾರಿಕೆ ಸುಧಾರಿತ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.

ಕೃಷಿಯಲ್ಲಿ ಸಾವಯವ ಗೊಬ್ಬರಗಳನ್ನು ಬಳಸುವುದರಿಂದ ಜೊತೆಗೆ ಜೀವಾಮೃತ ಬಳಸುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಾಗಿರುತ್ತದೆ ಮತ್ತು ಫಾರಂ ಔಷಧಿಗಳ ಬಳಕೆ ಕಡಿಮೆಯಾಗಿ ಹೆಚ್ಚು ಹಣ ಉಳಿತಾಯವಾಗುತ್ತದೆ

ಹೆಚ್ಚು ಔಷಧಿ ಬಳಕೆಯಿಂದ ಮಣ್ಣಿನಲ್ಲಿ ಎರೆಹುಳುಗಳು ಸಾಯುತ್ತವೆ ಮತ್ತು ಮಣ್ಣಿನಲ್ಲಿ ಇರುವ ಉತ್ತಮ ಬ್ಯಾಕ್ಟೀರಿಯಾ ಸಾಯುತ್ತವೆ ಅಲ್ಲದೇ ಫಾರಂ ಔಷಧಿಗಳನ್ನು ಬಳಸಿದ ಹಣ್ಣು ತರಕಾರಿಯನ್ನು ಹೆಚ್ಚು ಬಳಸುವುದರಿಂದ ಇತ್ತೀಚಿನ ದಿನಗಳಲ್ಲಿ ಮನುಷ್ಯರಿಗೆ ಕ್ಯಾನ್ಸರ್. ಬಿಪಿ. ಶುಗರ್ .ಇತ್ಯಾದಿ ಮಾರಕ ಕಾಯಿಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಹೀಗಾಗಿ ಕೃಷಿಯನ್ನು ಸಾವಯವದಲ್ಲಿ ಬೆಳೆದರೆ ಉತ್ತಮ ವಾಗಿರುತ್ತದೆ.

ಕೃಷಿಯಲ್ಲಿ ಇವರ ಸಾಧನೆಗೆ ದೊರೆತ ಪ್ರಶಸ್ತಿಗಳು

ಶ್ರೀಯುತರಿಗೆ 2013ರಲ್ಲಿ ತಾಲ್ಲೂಕು ಮಟ್ಟದ, 2014ರಲ್ಲಿ ಜಿಲ್ಲಾ ಮಟ್ಟದ ಪ್ರಗತಿಶೀಲ ರೈತ ಪ್ರಶಸ್ತಿ, 2016ರಲ್ಲಿ ಕೃಷಿ ತಾಂತ್ರಿಕ ಪ್ರಶಸ್ತಿ, 2017ರಲ್ಲಿ ರಾಜ್ಯ ಮಟ್ಟದ ಶ್ರೇಷ್ಟ ಕೃಷಿಕ ಪ್ರಶಸ್ತಿ ಮತ್ತು ಕೃಷಿ ಪಂಡಿತ ಪ್ರಶಸ್ತಿ ಹಾಗೂ 2020-21 ನೇ ಸಾಲಿನ ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ರಾಜ್ಯಮಟ್ಟದ ಕ್ಯಾನ್ ಬ್ಯಾಂಕ್ ಅತ್ಯುತ್ತಮ ರೈತ ಪ್ರಶಸ್ತಿ ಲಭಿಸಿರುತ್ತವೆ.

ಜೊತೆಗೆ ಕೃಷಿ ವಿಶ್ವವಿದ್ಯಾನಿಲಯ, ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ, ಭಾರತೀಯ ತೋಟಗಾರಿಕೆ ಸಂಶೋಧನಾ ಕೇಂದ್ರಗಳ ವಿಸ್ತರಣಾ ಕಾರ್ಯಕರ್ತರ ಜೊತೆ ಸಂಪರ್ಕ ಹೊಂದಿದ್ದು ಆಧುನಿಕ ತಂತ್ರಜ್ಞಾನಗಳ ಬಗ್ಗೆ ತಿಳಿದು ತಮ್ಮ ಜಮೀನಿನಲ್ಲಿ ಅಳವಡಿಸಿಕೊಂಡು ತಮ್ಮ ತೋಟಕ್ಕೆ ಭೇಟಿ ನೀಡುವ ಆಸಕ್ತರಿಗೆ ತಿಳಿಸುತ್ತಾ ಇತರರಿಗೆ ಮಾದರಿಯಾಗಿದ್ದಾರೆ.

2 thoughts on “ಮಾವು ಮತ್ತು ಹಲಸು ಹಣ್ಣಿನ ಗಿಡಗಳಿಗೆ ಕಸಿ ಪದ್ಧತಿ ಅಭಿವೃದ್ಧಿ..! (Agriculture farming)

  • Great weblog right here! Also your website lots up fast! What host are you the usage of? Can I get your affiliate link in your host? I want my website loaded up as quickly as yours lol

    Reply
  • I was suggested this blog by my cousin. I’m not sure whether this post is written by him as no one else know such detailed about my problem. You are incredible! Thanks!

    Reply

Leave a Reply

Your email address will not be published. Required fields are marked *