https://pagead2.googlesyndication.com/pagead/js/adsbygoogle.js?client=ca-pub-4722372128437229 ಡ್ರ್ಯಾಗನ್ ಫ್ರೂಟ್ ಕೃಷಿಯಲ್ಲಿ ಯಶಸ್ಸು (Dragon fruit ) -
ಕೃಷಿ

ಡ್ರ್ಯಾಗನ್ ಫ್ರೂಟ್ ಕೃಷಿಯಲ್ಲಿ ಯಶಸ್ಸು (Dragon fruit )

ಉಬ್ರಾಣಿ ಹಳ್ಳಿ. ಚನ್ನಗಿರಿ ತಾಲೂಕು. ದಾವಣಗೆರೆ. ಜಿಲ್ಲೆಯ ಯುವ ರೈತ. ಡ್ರಾಗನ್ ಫ್ರೂಟ್ ಕೃಷಿಯಲ್ಲಿ ಯಶಸ್ವಿಯಾಗಿದ್ದಾರೆ.

ಮೊದಲಿಗೆ ಅಡಿಕೆ ಬೆಳೆಯ ಜೊತೆಗೆ ಮಾವು ಕೃಷಿಯನ್ನು ಮಾಡುತ್ತಿದ್ದ ಇವರು ಡ್ರ್ಯಾಗನ್ ಫ್ರೂಟ್ ಬಗ್ಗೆ ಅದೇ ಊರಿನಲ್ಲಿರುವ ಅವರ ಚಿಕ್ಕಪ್ಪ ಡ್ರ್ಯಾಗನ್ ಫ್ರೂಟ್ ಬೆಳೆದಿದ್ದನ್ನು ನೋಡಿ ಆಕರ್ಷಿತರಾಗಿರುತ್ತಾರೆ.

ಅವರ ಬಳಿ ಡ್ರ್ಯಾಗನ್ ಫ್ರೂಟ್ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ಹಾಗೂ ಅದರ ವ್ಯವಸಾಯದ ಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದರು.ಚೆನ್ನಗಿರಿ ತಾಲೂಕು ಇದು ಸಾಂಪ್ರದಾಯಿಕ ಅಡಿಕೆ ಬೆಳೆಯುವುದಾಗಿದೆ ಈ ಪ್ರದೇಶದಲ್ಲಿ ಈ ಡ್ರಾಗನ್ ಫ್ರೂಟ್ ಬೆಳೆಯಬಹುದು ಎಂದು ಖಚಿತ ಪಡಿಸಿಕೊಂಡರು.

ಮೊದಲಿಗೆ ತಮ್ಮಲ್ಲಿರುವ 2.20 ವರೆ ಎಕ್ಕರೆ ಭೂಮಿಯನ್ನು ಸಿದ್ಧಪಡಿಸಿಕೊಂಡು 1050 ಕಲ್ಲಿನ ಕಂಬಗಳನ್ನು ಸಾಲಾಗಿ ನಾಟಿ ಮಾಡಿದರು.

ನಂತರ ಬಾಗಲಕೋಟೆಯಿಂದ ಡ್ರ್ಯಾಗನ್ ಫ್ರೂಟ್ ಹಣ್ಣಿನ ಸಸಿಗಳನ್ನು ತಂದರು. ಈ ಹಣ್ಣಿನಲ್ಲಿ 8 ರಿಂದ 9 ವಿವಿಧ ತಳಿಗಳಿವೆ. ಅದರಲ್ಲಿ ಇವರು ಪಿಂಕ್ ಬಣ್ಣದ್ದು ಮತ್ತು ಕೆಂಪು ಬಣ್ಣದ ಹಣ್ಣಿನ ಆಯ್ಕೆ ಮಾಡಿಕೊಂಡು ಜೊತೆಗೆ ಬಿಳಿ ಬಣ್ಣದ ಹಣ್ಣಿನ ಸಸಿಗಳನ್ನು ಆಯ್ಕೆ ಮಾಡಿಕೊಂಡು ತಂದರು.

ಒಂದು ಕಂಬಕ್ಕೆ 4 ಸಸಿ ಗಳನ್ನು ನಾಟಿ ಮಾಡಬಹುದು.ಈ ಗಿಡದ ನಿರ್ವಹಣೆ ಬೇಸಿಗೆ ಕಾಲದಲ್ಲಿ ಕೋಳಿ ಗೊಬ್ಬರವನ್ನು ಕೊಡುತ್ತಾರೆ ಮತ್ತು ಮಳೆಗಾಲದಲ್ಲಿ ಕಳೆ ನಿರ್ವಹಣೆ ಮಾಡುತ್ತಾರೆ.

ಈ ಗಿಡಕ್ಕೆ ಹೆಚ್ಚಿನ ನೀರಿನ ಅವಶ್ಯಕತೆ ಇರುವುದಿಲ್ಲ ಕೇವಲ ಒಂದು ವಾರಕ್ಕೆ 4 ರಿಂದ 5 ಲೀಟರ್ ನೀರು ಬಿಟ್ಟರೆ ಸಾಕು. ಅದು ಕೂಡ ಹನಿ ನೀರಾವರಿ ಪದ್ಧತಿಯನ್ನು ಅನುಸರಿಸಿದ್ದಾರೆ.

ಈ ಭಾಗವು ಮಲೆನಾಡಿನ ವಾತಾವರಣ ಹೆಚ್ಚಾಗಿದ್ದು ಇಲ್ಲಿ ಅಧಿಕವಾಗಿ ಮಳೆ ಬೀಳುತ್ತದೆ. ಹೀಗಾಗಿ ಗಿಡದ ಬುಡಕ್ಕೆ ಬದುಗಳನ್ನು ನಿರ್ಮಾಣ ಮಾಡಿದರೆ. ಬಂದ ಮಳೆಯು ನೀರು ಗದ್ದೆಯಲ್ಲಿ ನಿಲ್ಲದ ಹಾಗೆ ವ್ಯವಸ್ಥೆ ಮಾಡಿದ್ದಾರೆ. ಗಿಡದ ಬುಡಕ್ಕೆ ನೀರು ನಿಂತರೆ ಕೊಳೆತು ಹೋಗುವ ಸಂಭವವಿರುತ್ತದೆ ಹೀಗಾಗಿ ಈ ಗಿಡವನ್ನು ಎತ್ತರದಲ್ಲಿ ಇರುವ ಹಾಗೆ ಮಳೆ ನೀರು ನಿಲ್ಲದ ಹಾಗೆ ಬದುಗಳ ನಿರ್ಮಾಣ ಮಾಡಬೇಕು.

ಡ್ರ್ಯಾಗನ್‌ ಫ್ರೂಟ್ ಕೃಷಿಯಲ್ಲಿ ಬೆಳೆಯ ನಡುವಿನ ಅಂತರ ಇವರು 11 ಅಡಿ ಅಗಲ 8 ಅಡಿ ಉದ್ದ ಒಂದು ಗಿಡದಿಂದ ಮತ್ತೊಂದು ಗಿಡಕ್ಕೆ ಕಲ್ಲಿನ ಕಂಬಗಳ ನೆಲದಿಂದ 6 ರಿಂದ 7 ಅಡಿ ಎತ್ತರದಲ್ಲಿದೆ ತುದಿಯಲ್ಲಿ ಗಾಡಿಯ ಟೈರ್ ಗಳನ್ನು ಕಂಬಿಯಿಂದ ಸುತ್ತಿದ್ದಾರೆ.

ಡ್ರ್ಯಾಗನ್ ಸಸಿಗಳು ನಾಟಿ ಮಾಡಿದ ನಂತರ 12 ತಿಂಗಳಿಗೆ ಗಿಡ ಬೆಳವಣಿಗೆಯಾಗಿ ಕಡಿಮೆ ಪ್ರಮಾಣದಲ್ಲಿ ಹೂಗಳನ್ನು ಬಿಡಲು ಪ್ರಾರಂಭಿಸುತ್ತದೆ. 18 ತಿಂಗಳ ನಂತರ ಎಲ್ಲ ಗಿಡಗಳು ಹಣ್ಣು ಬಿಡಲು ಪ್ರಾರಂಭಿಸುತ್ತವೆ.

ಪಿಂಕ್ ಬಣ್ಣದ ಹಣ್ಣಿನ ಗಿಡ ಮೊದಲ ಆವೃತ್ತಿಯಲ್ಲಿ 5 ರಿಂದ 8 kg ಸಿಗುತ್ತದೆ. ಕೆಂಪು ಬಣ್ಣದ ಅಣ್ಣ ಒಂದು ಗಿಡಕ್ಕೆ 8 ರಿಂದ 15 kg ವರೆಗೆ ಸಿಗುತ್ತದೆ.

ಡ್ರ್ಯಾಗನ್ ಫ್ರೂಟ್ ಹಣ್ಣು ಪಿಂಕ್ ಬಣ್ಣದ ಹಣ್ಣು ಗಾತ್ರದಲ್ಲಿ ಹೆಚ್ಚಾಗಿರುತ್ತದೆ ಇಳುವರಿ ಕಡಿಮೆ ಇರುತ್ತದೆ. ಕೆಂಪು ಬಣ್ಣದ ಹಣ್ಣು ಕಡಿಮೆ ಗಾತ್ರದಾಗಿದ್ದು ಈ ಹಣ್ಣು 250 ರಿಂದ 450 g ತೂಕ ಬರುತ್ತದೆ ಕೆಂಪು ಬಣ್ಣದ ಹಣ್ಣು ಹೆಚ್ಚು ಇಳುವರಿ ಕೊಡುತ್ತದೆ.

ತಮ್ಮ ಜಮೀನಿನಲ್ಲಿ ಡ್ಯಾಗನ್ ಫ್ರೂಟ್ ಬೆಳೆಯನ್ನು ಬೆಳೆಯಲು 13 ಲಕ್ಷ ಖರ್ಚಾಗಿರುತ್ತದೆ. ಅವುಗಳು ಯಾವುವು ಎಂದರೆ ಬೋರ್ ತೆಗೆದಿದ್ದು. ಮತ್ತು ಹನಿ ನೀರಾವರಿ ಪದ್ಧತಿ ಮಾಡಿಸಿದ್ದು ತಂತಿ ಮತ್ತು ರಿಂಗ್ ಜೊತೆಗೆ ಸಸಿ ಮತ್ತು ವಿದ್ಯುತ್ ಸಂಪರ್ಕ ಎಲ್ಲಾ ಸೇರಿ ಇದು 2.20 ಎಕರೆಗೆ ಬಂದಿರುವ ವೆಚ್ಚವಾಗಿದೆ.

ಡ್ರ್ಯಾಗನ್ ಫ್ರೂಟ್ ಬೆಳೆಯು ಒಂದು ಸಾರಿ ನಾಟಿ ಮಾಡಿದ್ದಾರೆ 20 ವರ್ಷ ಡ್ರ್ಯಾಗನ್ ಫ್ರೂಟ್ ಜೀವಿತಾವಧಿ.

ಈ ಬೆಳಗ್ಗೆ ಮೊದಲಿನ ವರ್ಷ ಹೆಚ್ಚು ಖರ್ಚು ಆಗುತ್ತದೆ ನಂತರ ಮುಂದಿನ ವರ್ಷಗಳಲ್ಲಿ ಹೆಚ್ಚು ಖರ್ಚಾಗುವುದಿಲ್ಲ ಕೇವಲ ಗೊಬ್ಬರ ಮತ್ತು ನೀರು ಕೊಡಬೇಕಾಗುತ್ತದೆ. ಸೀಮೆ ಗೊಬ್ಬರ ಹಾಕುವುದಿಲ್ಲ.

ಇವರು ಡ್ರಾಗನ್ ಫ್ರೂಟ್ ಗಿಡವನ್ನು ಮಾರಾಟ ಮಾಡುತ್ತಾರೆ ಮತ್ತು ಬೆಳೆದ ಹಣ್ಣನ್ನು ಮಾರಾಟ ಮಾಡಲು ಮಾರುಕಟ್ಟೆಯ ಬಗ್ಗೆ ರೈತರಿಗೆ ಹೆಚ್ಚಿನ ಮಾಹಿತಿಯನ್ನು ತಿಳಿಸುತ್ತಾರೆ.

ಡ್ರ್ಯಾಗನ್ ಫ್ರೂಟ್ ಹಣ್ಣಿನ ಪ್ರಮುಖ ಪ್ರಯೋಜನಗಳು (Dragon fruit )

  • ಡ್ರ್ಯಾಗನ್ ಹಣ್ಣು ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಂತೆ ಅಗತ್ಯವಾದ ಪೋಷಕಾಂಶಗಳ ಹಾಗೂ ಉತ್ತಮ ಮೂಲವಾಗಿದೆ. ಇದು ವಿಟಮಿನ್ ಸಿ, ವಿಟಮಿನ್ ಬಿ, ಫೈಬರ್, ಕಬ್ಬಿಣ ಮತ್ತು ಮೆಗ್ನೀಸಿಯಮ್ ಅನ್ನು ಒಳಗೊಂಡಿರುತ್ತದೆ.
  • ಡ್ರ್ಯಾಗನ್ ಹಣ್ಣು ಹೃದಯ-ಆರೋಗ್ಯಕರ ಗುಣಗಳನ್ನು ಹೊಂದಿದೆ ಎಂದು ತಿಳಿದುಬಂದಿದೆ. ಫೈಬರ್ ಅಂಶವು ಕರುಳಿನಲ್ಲಿನ ಕೊಲೆಸ್ಟ್ರಾಲ್ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುವ ಮೂಲಕ ಕೊಲೆಸ್ಟ್ರಾಲ್ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.
  • ಹೆಚ್ಚಿನ ಫೈಬರ್ ಅಂಶದೊಂದಿಗೆ, ಡ್ರ್ಯಾಗನ್ ಹಣ್ಣು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ. ಇದು ಮಲಬದ್ಧತೆಯನ್ನು ತಡೆಯಲು ಮತ್ತು ನಿಯಮಿತ ಕರುಳಿನ ಚಲನೆಯನ್ನು ಸಹಾಯ ಮಾಡುತ್ತದೆ.
  • ಡ್ರ್ಯಾಗನ್ ಫ್ರೂಟ್‌ನಲ್ಲಿ ವಿಟಮಿನ್ ಸಿ ಇರುವಿಕೆಯು ಬಿಳಿ ರಕ್ತ ಕಣಗಳ ಉತ್ಪಾದನೆಯನ್ನು ಉತ್ತೇಜಿಸುವ ಮೂಲಕ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ. ಸೋಂಕುಗಳು ಮತ್ತು ಅನಾರೋಗ್ಯದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
  • ಹೆಚ್ಚಿನ ಫೈಬರ್ ಅಂಶವನ್ನು ಹೊಂದಿರುವ ಕಡಿಮೆ ಕ್ಯಾಲೋರಿ ಹಣ್ಣು, ಡ್ರ್ಯಾಗನ್ ಹಣ್ಣು ತಮ್ಮ ತೂಕವನ್ನು ನಿರ್ವಹಿಸಲು ಬಯಸುವವರಿಗೆ ತೃಪ್ತಿಕರ ಮತ್ತು ಪೌಷ್ಟಿಕಾಂಶದ ತಿಂಡಿಯಾಗಿದೆ.
  • ಡ್ರ್ಯಾಗನ್ ಹಣ್ಣಿನಲ್ಲಿರುವ ಫೈಬರ್ ಸಕ್ಕರೆಯ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ. ಆದಾಗ್ಯೂ, ಮಧುಮೇಹ ಹೊಂದಿರುವ ವ್ಯಕ್ತಿಗಳು ತಮ್ಮ ಸೇವನೆಯನ್ನು ಮೇಲ್ವಿಚಾರಣೆ ಮಾಡಬೇಕು.

ಈ ಹಣ್ಣಿಗೆ ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಹೆಚ್ಚಿನ ಬೇಡಿಕೆ ಇದೆ (Dragon fruit )

ಇವರು ಮಾವಿನ ಹಣ್ಣಿನ ವ್ಯಾಪಾರ ಮಾಡುತ್ತಿದ್ದರು ಇವರಿಗೆ ಬೆಳೆದ ಹಣ್ಣಿನ ಮಾರ್ಕೆಟಿಂಗ್ ಬಾಂಬೆ ಮತ್ತು ಪೂನಾ ಮಾರ್ಕೆಟ್ಗಳಲ್ಲಿ ವಿಚಾರಿಸಿದ್ದರು ಅಲ್ಲಿ ಕೆಜಿಗೆ 150 ಇಂದ 160 ದರ ಸಿಕ್ಕಿದೆ.

ಇವರು ಮಹಾರಾಷ್ಟ್ರದ ಸಂಗೋಳ್ಳ ಜಿಲ್ಲೆಗೆ ಹೋಗಿದ್ದರು ಅಲ್ಲಿದ್ದ 2500 ಸಸಿಗಳನ್ನು ತಂದು ಪುನಃ ನಾಟಿ ಮಾಡಿದ್ದಾರೆ. ಒಂದು ಸಸಿಗೆ ಸಂಗೋಳದಲ್ಲಿ 25 ರು ಕೊಟ್ಟಿದ್ದಾರೆ ಮತ್ತು ಬಾಗಲಕೋಟೆಯಲ್ಲಿ 35 ರೂಪಾಯಿ ಕೊಟ್ಟು ತಂದಿದ್ದಾರೆ.

ಈ ಗಿಡಕ್ಕೆ ಯಾವುದೇ ರೀತಿಯ ರೋಗಗಳು ಹೆಚ್ಚಾಗಿ ಬರುವುದಿಲ್ಲ 40°ಗಿಂತ ಹೆಚ್ಚಾಗಿ ಬಿಸಿಲು ಬಂದರೆ (ಸನ್ ಬರ್ನ್) ಎಂಬ ರೋಗ ಬರುತ್ತದೆ ಆ ಸಮಯದಲ್ಲಿ ನಿಯಮಿತವಾಗಿ ನೀರಿನ ಪ್ರಮಾಣ ಕಡಿಮೆ ಇರಬೇಕು.

ಡ್ರಾಗನ್ ಫ್ರೂಟ್ ಹಣ್ಣನ್ನು ಗಿಡ ಮಿಶ್ರ ಬೆಳೆಯಲ್ಲಿ ಬೆಳೆಯಲು ಉತ್ತಮವಲ್ಲ ವಿಶಾಲವಾದ ಹಾಗೂ ಬಿಸಿಲು ಹೆಚ್ಚು ಬೀಳುವ ಜಾಗದಲ್ಲಿದರೆ ಸೂಕ್ತ.ಈ ಹಣ್ಣಿನ ಗಿಡದ ಜೀವಿತಾವಧಿ 15 ರಿಂದ 20 ವರ್ಷದವರೆಗೆ ಡ್ರ್ಯಾಗನ್ ಫ್ರೂಟ್ ಅನ್ನು ಏಪ್ರಿಲ್ ನಿಂದ ಪ್ರಾರಂಭವಾಗಿ ನವೆಂಬರ್ ವರೆಗೆ 5 ರಿಂದ 6 ತಿಂಗಳು ಕಾಲ ಹಣ್ಣು ಬಿಡುತ್ತದೆ.

ಈ ಹಣ್ಣಿನ ಕೃಷಿಯಲ್ಲಿ ನಿರ್ವಹಣೆ ಕಡಿಮೆ ಇದ್ದು ಇತ್ತೀಚಿನ ದಿನಗಳಲ್ಲಿ ಬೇಡಿಕೆ ಹೆಚ್ಚುತ್ತಿದೆ (Dragon fruit )

One thought on “ಡ್ರ್ಯಾಗನ್ ಫ್ರೂಟ್ ಕೃಷಿಯಲ್ಲಿ ಯಶಸ್ಸು (Dragon fruit )

  • I believe you have noted some very interesting points, appreciate it for the post.

    Reply

Leave a Reply

Your email address will not be published. Required fields are marked *