ದೇಶಿ ಹಸುಗಳ ಡೈರಿ ಫಾರ್ಮ್ ನಲ್ಲಿ ಸೌತ್ ಇಂಡಿಯಾಗೆ No1(Gir cow farming )
ಗಿರ್ ಗಾಯಿ ಅಥವಾ ಗಿರ್ ಹಸು ದಕ್ಷಿಣ ಭಾರತದ ವಿಶೇಷ ಸಸ್ಯಾಹಾರಿ ಪಶುಗಳಲ್ಲಿ ಒಂದು. ಇದು ಭಾರತೀಯ ಗಿರಿ ಪರ್ವತದ ಪ್ರದೇಶಗಳಲ್ಲಿ ಹುಟ್ಟಿ ಬೆಳೆಯುವ ವಿಶೇಷ ಜಾತಿಯ ಹಸು. ಈ ಜಾತಿಯ ಹಸುಗಳಲ್ಲಿ ಗಾಯಿಯ ಹೊರಗಿನ ರೂಪ ವಿಶೇಷವಾಗಿ ಗೌರವನೀಡಲ್ಪಟ್ಟಿದೆ. ಇದನ್ನು ಗಿರ್ ಗಾಯಿ ಅಥವಾ ಗಿರ್ ಹಸು ಎಂದೂ ಕರೆಯಲಾಗುತ್ತದೆ.
ಈ ಹಸು ಮೂಲತಃ ದೇಸಿ ಜಾತಿಯ ಮೂಲಗಳನ್ನು ಹೊಂದಿದ್ದು, ಇದನ್ನು ಪುರಾತಾತ್ವಿಕ ಕಾಲದಲ್ಲಿ ಬಾಲ್ಯದಲ್ಲಿ ಉಳಿಸಿದ್ದರು. ಇದು ಸಾಮಾನ್ಯವಾಗಿ ಗುಜರಾತ್ ,ರಾಜಸ್ಥಾನ, ಕರ್ನಾಟಕ, ಮಹಾರಾಷ್ಟ್ರ, ಹೈದರಾಬಾದಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಹೆಚ್ಚು ಕಾಣಿಸಿಕೊಂಡಿದೆ. ಗಿರ್ ಪಶುಗಳು ಅತ್ಯಂತ ಉಚ್ಚ ದೇಶದಲ್ಲಿ ವಾಸಿಸುವ ಕ್ಷೇತ್ರದಲ್ಲಿ ಬೆಳೆದು ಬಂದವು, ಈ ಕಾರಣಕ್ಕೆ ಇವುಗಳನ್ನು ‘ಗಿರ್’ ಎನ್ನುತ್ತಾರೆ.
ಗಿರ್ ಹಸು ವಿಶೇಷವಾಗಿ ಗೌರವನೀಡಲ್ಪಟ್ಟಿದೆ. ಇವು ಮಧುರ ಮುಖವನ್ನು ಹೊಂದಿದ್ದು ಇದರ ವಿಶೇಷ ಗುಣವೇನೆಂದರೆ. ಇವು ಸ್ವಭಾವತಃ ಶಾಂತವಾಗಿರುತ್ತವೆ ಮತ್ತು ದಯಾಮಯವಾಗಿವೆ. ಗಿರ್ ಹಸುಗಳ ಹಾಲು ಬಹುಪ್ರಸಿದ್ಧವಾಗಿದ್ದು, ಇದರಿಂದ ಪ್ರತಿವರ್ಷವೂ ಆರೋಗ್ಯವಂತವಾಗಿರುತ್ತದೆ.
ದೇಸಿ ಬ್ರೀಡ್ ಗಳ ಒಡೆಯ ಅಮಿತ್ ಕೃಷ್ಣ (Gir cow farming )
ಅಮಿತ್ ಕೃಷ್ಣ ಮತ್ತು ಅವರ ಸಹೋದರ ಹರ್ಷಿ ತ್ ರವರು ಸೇರಿಕೊಂಡು ಬೆಂಗಳೂರಿನಿಂದ ಸುಮಾರು 110 ರಿಂದ 120 ಕಿಲೋಮೀಟರ್ ದೂರದಲ್ಲಿರುವ ಪೆನಗೊಂಡದಲ್ಲಿ ಹಸುಗಳ ಸಾಕಾಣಿಕೆ ಪ್ರಾರಂಭಿಸಿದರು.ಇವರು ಮೊದಲಿಗೆ ಇಲಾಖೆ ಹಸುಗಳನ್ನು ಸಾಕಿ ನಷ್ಟ ಅನುಭವಿಸಿದ್ದರಿಂದ ದೇಶಿ ಹಸುಗಳನ್ನು ಸಾಕಲು ಪ್ರಾರಂಭಿಸುತ್ತಾರೆ.
6 ಹಸುಗಳಿಂದ ಪ್ರಾರಂಭವಾದ ಫಾರಂ ಇಂದು 700ಕ್ಕೂ ಅಧಿಕ ದೇಶಿಯ ಹಸು ಮತ್ತು ಎಮ್ಮೆಗಳನ್ನು ಸಾಕಿದ್ದಾರೆ.(Gir cow farming)ದೇಶಿ ಹಸುಗಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿರುವುದರಿಂದ ಇವರು ದೇಶಿಯ ಹಸುಗಳು ಸಾಕಾಣಿಕೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದರು.
ಇವರ ಬಳಿ ಗೀರ್. ಕಾಂಕ್ರೀಜ್. ಸಾಯಿ ವಾಲ್. ರಾಟಿ. ಹೊಂಗೋಲು. ಜಫ್ರಬಾದಿ ಎಮ್ಮೆ ಇಷ್ಟು ಜಾತಿಯ ದೇಶಿ ಹಸುಗಳನ್ನು ಸಾಕಿದ್ದಾರೆ.ಈ ಗೀರ್ ಹಸುವಿನ ಮೂರು ಬಣ್ಣಗಳಿದ್ದು ಕೆಂಪು. ಲಿಲಿಡ. ಕಬ್ಬಾರ್. ಎಂಬ ಮೂರು ಬಣ್ಣದ ತಳಿಗಳಿವೆ.
ಹೈನುಗಾರಿಕೆಯಲ್ಲಿ ಹೆಚ್ಚು ಆಸಕ್ತಿ ಇರುವ ಇವರು ಮೊದಲಿಗೆ (hf) ಹಸುಗಳನ್ನು ಸಾಕಿ ನಷ್ಟ ಅನುಭವಿಸಿದರು ನಂತರ ಅಮಿತ್ ರವರು ಆರು ತಿಂಗಳು ಕಾಲ ಗುಜರಾತ್ ರಾಜಸ್ಥಾನ್ ಪಂಜಾಬ್ ಹರಿಯಾಣ ಗಳಲ್ಲಿ ಹಸುವಿನ ಬಗ್ಗೆ ಅಧ್ಯಯನ ನಡೆಸಿದ್ದರು.ಅವರ ಮೊದಲ ಗುರು ಪ್ರದೀಪ್ ಸಿಂಗ್ ರಾವತ್ ರವರ ಭೇಟಿ ಮಾಡಿ ಅವರ ಫಾರ್ಮ್ ನಲ್ಲಿ ಹೆಚ್ಚಿನ ಮಾಹಿತಿ ಪಡೆದುಕೊಂಡರು.
ಇವರ ಬಳಿ ಕಾಂಕ್ರೀಜ್ ಮತ್ತು ರಾಟಿ ಜಾತಿಯ ಹಸುಗಳು ಸಾಕಿದ್ದು, ಇವು ಕಚ್ ಪ್ರಾಂತ್ಯದ ಹಸುಗಳಾಗಿವೆ. ಈ ತಳಿಯೂ ಕೂಡ ಸಾಧು ವಾಗಿರುತ್ತದೆ ಈ ಹಸುಗಳು ಸೇಮೇನೆ ತೆಗೆದು ಮಾರಾಟ ಮಾಡುತ್ತಾರೆ ಕಾಂಕ್ರೀಜ್ ವಿಶೇಷತೆ ಎಂದರೆ ಈ ಹಸು ಹೆಚ್ಚು ಎತ್ತರವಾಗಿರುತ್ತದೆ.
ಈ ತಳಿಯ ಹಸುಗಳು ಯಾವುದೇ ರೀತಿಯ ವಾತಾವರಣಕ್ಕೆ ಹೊಂದುಕೊಳ್ಳುತ್ತವೆ ಈ ಹಸುಗಳು ಸಾಕಿದವರು ನಂಬಿಕಸ್ತ ಹಸುಗಳಾಗಿವೆ. ಈ ತಳಿ ಹಸುಗಳು ಉತ್ತಮ ಹಾಲು ಉತ್ಪಾದನೆ ಮಾಡುವ ಹಸುಗಳಾಗಿವೆ.
ಈ ಹಸುಗಳು ಪ್ರಾರಂಭಿಕ ಹಂತದಲ್ಲಿ ಸುಮಾರು 5 ಲೀಟರ್ ರಿಂದ 8 ಲೀಟರ್ವರೆಗೆ ಹಾಲು ಉತ್ಪಾದನೆ ಆಗುತ್ತದೆ. ಬೆಂಗಳೂರು ನಗರ ಕ್ಕೆ ಈ ಹಸುವಿನ ಹಾಲಿಗೆ ಹೆಚ್ಚು ಬೇಡಿಕೆ ಇದೆ ಇವರು ಕಾಂಕ್ರೀಜ್ ಮತ್ತು ರಾಟಿ ಗೀರ್ ಹಸುವಿನ ತುಪ್ಪವನ್ನು ತಯಾರಿಸುತ್ತಾರೆ. ದಿನಕ್ಕೆ ಎರಡು ಕೆಜಿ ತುಪ್ಪದ ಮಾರಾಟವಾಗುತ್ತದೆ. ರಾಜಸ್ಥಾನ ಮತ್ತು ಪಂಜಾಬ್ ಪ್ರಾಂತ್ಯದ ಜನರು ಗೀರ್ ಹಸುವಿನ ಹಾಲು ಅತಿ ಹೆಚ್ಚಾಗಿ ಈ ಹಸುವಿನ ಹಾಲು ತುಪ್ಪಕ್ಕೆ ಹೆಚ್ಚು ಬೇಡಿಕೆ ಇದೆ.
ಇವರ ಕಾಂಕ್ರೀಜ್ ಮತ್ತು ರಾಟಿ ಗೀರ್ ಹಸುವಿನ ಒಂದು ಲೀಟರ್ ಹಾಲಿಗೆ 90 ರುಗೆ ಮಾರಾಟ ಮಾಡುತ್ತಾರೆ ಮತ್ತು ತುಪ್ಪವನ್ನು 2100 ಕೆ ಮಾರಾಟ ಮಾಡುತ್ತಾರೆ ಈ ಹಸುಗಳಿಗೆ ರೋಗನಿರೋಧಕ ಶಕ್ತಿ ಹೆಚ್ಚಿರುತ್ತದೆ ಇವು ಉತ್ತಮ ಜಾತಿಯ ದೇಶಿ ತಳಿಗಳಾಗಿವೆ.
ಇವರ ಬಳಿ ಕೋಟಿ ಕೋಟಿ ಬೆಲೆ ಬಾಳುವ ಬೆಲೆ ಕಟ್ಟಲಾಗದ ಗೀರ್ ಬುಲ್ಸ್ ಗಳಿವೆ ಮತ್ತು ಜಫ್ರಾಬಾದಿ ಕೋಣಗಳಿವೆ.ಇವರು ಜಫ್ರಾಬಾದಿ ಎಮ್ಮೆಗಳ ಮತ್ತು ಕೋಣವನ್ನು ಸಾಕಾಣಿಕೆ ಮಾಡಿದ್ದಾರೆ ಜಾಮ್ ನಗರದ ರಾಜ ವಾಲಿ ಎಂದೇ ಖ್ಯಾತಿ ಪಡೆದಿರುವ ಕೋಣವನ್ನು ಸಾಕಿದ್ದಾರೆ.
ಇವರ ಜಫ್ರಾಬಾದಿ ತಳಿಯ ಎಮ್ಮೆಗಳ ಮತ್ತು ಕೋಣ ಬ್ರೀಡಿಂಗ್ ಕೂಡ ಮಾಡುತ್ತಾರೆ ವಾಲಿ ಎಂಬ ದೊಡ್ಡ ಕೋಣವನ್ನು ಸಾಕಿದ್ದಾರೆ ಇವರ ಬಳಿ 8 ಎಮ್ಮೆಗಳಿವೆ ಈ ತಳಿಯ ಎಮ್ಮೆಗಳು ಯಾವುದೇ ರೀತಿಯ ವಾತಾವರಣಕ್ಕೆ ಹೊಂದುಕೊಳ್ಳುತ್ತವೆ.
ಈ ತಳಿಯ ಎಮ್ಮೆಗಳ 20 ಲೀಟರ್ ಹಾಲು ಕೊಡುವ ಸಾಮರ್ಥ್ಯವನ್ನು ಹೊಂದಿರುತ್ತವೆ.ಹೆಮ್ಮೆ ಹಾಲಿಗೆ ಡೈರಿಯಲ್ಲಿ ಒಂದು ಲೀಟರ್ಗೆ 45 ರಿಂದ 50 ರೂ ಗಳನ್ನು ಮಾರಾಟ ಮಾಡುತ್ತಾರೆ ಎಮ್ಮೆ ಹಾಲಿಗೆ ಡೈರಿಯಲ್ಲಿ ಒಂದು ಲೀಟರ್ಗೆ 45 ರಿಂದ 50 ರೂ ಗಳನ್ನು ಮಾರಾಟ ಮಾಡುತ್ತಾರೆ. ಎಮ್ಮೆತುಪ್ಪಕ್ಕೆ ಬಾರಿ ಬೇಡಿಕೆ ಇದೆ.
ಇವರ ಬಳಿ ಇರುವ ಯಾವುದೇ ಹಸು ಮತ್ತು ಎಮ್ಮೆಗಳನ್ನು ಕೊಡು ಪದ್ಧತಿಯಲ್ಲಿ ಸಾಕಾಣಿಕೆ ಮಾಡುವುದಿಲ್ಲ ಅವುಗಳನ್ನು ಸ್ವತಂತ್ರವಾಗಿ ಬಿಟ್ಟಿರುತ್ತಾರೆ.
ಇವರು ( Heebbevu gir cow farming A2 milk) ಸಂಸ್ಥೆಯನ್ನು ಪ್ರಾರಂಭಿಸಿದ್ದಾರೆ.
ಇದರ ಉದ್ದೇಶ ದೇಶಿಯ ಹಸುಗಳ ಸಾಕಾಣಿಕೆ ಮತ್ತು ಹಾಲು ಉತ್ಪಾದನೆ ಬೆಂಗಳೂರು ನಗರಕ್ಕೆ ದಿನಕ್ಕೆ ಸುಮಾರು 1500 ಲೀಟರ್ ಹಾಲು. ಜೊತೆಗೆ ತುಪ್ಪ. ಮೊಸರು. ಇತ್ಯಾದಿ ಡೈರಿ ಉತ್ಪನ್ನಗಳ ಮಾರಾಟ ಮಾಡುತ್ತಾರೆ.
- ಇವರು ಡೈರಿ ಉದ್ಯಮದಲ್ಲಿ ಯಶಸ್ವಿಯಾಗಲು ಕಾರಣ
- ಪ್ರಾರಂಭಿಕ ದಿನಗಳಲ್ಲಿ ಸಣ್ಣ ಪ್ರಮಾಣದಲ್ಲಿ ಹಸುಗಳ ಸಾಕಾಣಿಕೆ ಪ್ರಾರಂಭಿಸಿದರು.
- ಹಸು ಸಾಕಾಣಿಕೆ ಮೊದಲು ಮೇವು ಸಂಗ್ರಹಣೆ ಮಾಡಿಕೊಂಡರು.
- ಕೊಟ್ಟಿಗೆಯ ಸ್ವಚ್ಛತೆಯನ್ನು ಕಾಪಾಡಿಕೊಂಡು ಹಸುಗಳ ರೋಗಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆದರು.
- ಪ್ರತಿದಿನ ಉತ್ಪಾದನೆಯಾಗುವ ಹಾಲಿಗೆ ಮಾರುಕಟ್ಟೆಯನ್ನು ಕಂಡುಕೊಂಡರು.
- ಇವರ ಫಾರಂನಲ್ಲಿ ಉತ್ತಮ ತಳಿಯ ಹೋರಿಗಳು ಇವೆ ಅದರ ಜೊತೆಗೆ ಕರುಗಳ ಪೋಷಣೆ ಚೆನ್ನಾಗಿ ಮಾಡುತ್ತಾರೆ.ಒಂದು ಗೀರ್ ಹಸು ಮೊದಲ ಬಾರಿಗೆ 5 ರಿಂದ 6 ಲೀಟರ್ ಹಾಲು ಕೊಡುತ್ತದೆ.
- ಹಸುಗಳಿಗೆ ದಿನಕ್ಕೆ 9 kg ಮೆಕ್ಕೆಜೋಳ ಹತ್ತಿ ಹಿಂಡಿ ಸೋಯಾ ಪಿಟ್ಸ್ ಎಲ್ಲ ರೀತಿಯ ಕೈ ತಿಂಡಿಗಳನ್ನು ಮಿಶ್ರಣ ಮಾಡಿ ನೀಡುತ್ತಾರೆ.ಸಾವಯವ ಕೃಷಿಯಲ್ಲಿ ಮೇವನ್ನು ಬೆಳೆದು ಆರ್ಗಾನಿಕ್ ಹಾಲು ಉತ್ಪಾದಿಸುತ್ತಾರೆ.ಇವರ ಬಳಿ ಜಫ್ರಾಬಾದಿ ಹೆಮ್ಮೆಗಳು ಸಹ ಸಾಕಿದ್ದಾರೆ.
- ವಯಸ್ಸಾದ ಹಸುಗಳನ್ನು ಇವರು ಯಾವುದೇ ಕಸಾಯಿಕಾನೆಗೆ ಕೊಡದೆ ಇವರೇ ಕೊನೆಯವರೆಗೂ ನೋಡಿಕೊಳ್ಳುತ್ತಾರೆ.ಇವರ ಉದ್ದೇಶ ಸಮಾಜಕ್ಕೆ ಒಂದು ಒಳ್ಳೆಯ ಆರೋಗ್ಯಕರ ಸಮಾಜವನ್ನು ನಿರ್ಮಿಸುವುದಾಗಿದೆ.
www.Heebbevu.com ಈ ವೆಬ್ಸೈಟ್ನಲ್ಲಿ ನಿಮಗೆ ಹಾಲು ಮೊಸರು ಬೆಣ್ಣೆ ತುಪ್ಪ ಇತ್ಯಾದಿ ಉತ್ಪನ್ನಗಳು ದೊರೆಯುತ್ತವೆ.
ದೇಸಿ ಹಸುಗಳನ್ನು ಬೆಳೆಸಿ ದೇಸಿ ಹಸುಗಳನ್ನು ಉಳಿಸಿ.
A person essentially help to make seriously articles I would state. This is the very first time I frequented your website page and thus far? I surprised with the research you made to make this particular publish amazing. Great job!
I like this post, enjoyed this one thanks for putting up.